ಬೆಂಗಳೂರು: ಮೇಕೆಗಳಿಗೆ ಮೇವು ತರಲು ಹೊಲಕ್ಕೆ ತೆರಳಿದ್ದ ವೇಳೆ ಹಾವು ಕಡಿತದಿಂದ(Snake bite) ಯುವಕ ಮೃತಪಟ್ಟಿರುವ ಘಟನೆ ಬೆಂಗಳೂರು ಉತ್ತರ ತಾಲೂಕು ಪಿಳ್ಳಹಳ್ಳಿಯಲ್ಲಿ ನಡೆದಿದೆ.
ಪಿಳ್ಳಹಳ್ಳಿ ಗ್ರಾಮದ ನಿವಾಸಿ ಉಜ್ಜಿನಪ್ಪ, ಶಾರದಮ್ಮ ದಂಪತಿ ಪುತ್ರ ತೇಜಸ್(18) ಮೃತ. ಮೇಕೆಗಳಿಗೆ ಮೇವು ತರಲು ತಾಯಿ ಶಾರದಮ್ಮಳೊಂದಿಗೆ ಹೊಲಕ್ಕೆ ತೆರಳಿದ್ದ ವೇಳೆ ನಾಗರಹಾವು ತೇಜಸ್ ಕಾಲಿಗೆ ಕಚ್ಚಿದ ಪರಿಣಾಮ ವಿಷವೇರಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾನೆ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಮಗನ ಅಗಲಿಕೆಯಿಂದ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು.
ಇದಕ್ಕೂ ಓದಿ | Harapanahalli | ಈಜಾಡಲು ಹೋಗಿ ಕೆರೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು