Site icon Vistara News

ಬಿಟ್ಟು ಹೋಗಬೇಡ ನನ್ನ ಎಂದವನೇ ಪರಲೋಕಕ್ಕೆ ಹೋದ: ಬಿಟಿಎಂ ಲೇಔಟ್‌ನಲ್ಲಿ ಯುವಕ ಆತ್ಮಹತ್ಯೆ

Suicide

ಬೆಂಗಳೂರು: ಬಿಟಿಎಂ ಲೇಔಟ್‌ನಲ್ಲಿ ಮಣಿಕಂಠ (21) ಎಂಬ ಯುವಕ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ. ಯುವಕನ ಸಾವಿನ ಹಿಂದೆ ಹತ್ತು ಹಲವು ಅನುಮಾನ ಹುಟ್ಟಿಕೊಂಡಿದ್ದು, ಸಾಯುವ ಮುನ್ನ ಪ್ರೀತಿಸಿದ ಹುಡುಗಿಗೆ ಆಡಿಯೊ ಮಸೇಜ್‌ ಕಳಿಸಿ ನೇಣು ಬಿಗಿದುಕೊಂಡಿದ್ದಾನೆ.

ಮಣಿಕಂಠ ನೇಣುಹಾಕಿಕೊಳ್ಳುವುದಕ್ಕೂ ಮುನ್ನ ಯುವತಿಯ ಮೇಲೆ ಪ್ರೀತಿ ಮತ್ತು ಜತೆಗೆ ಕಳೆದ ಕ್ಷಣಗಳನ್ನು ನೆನೆದು ಸುಮಾರು ಆರು ನಿಮಿಷದ ಆಡಿಯೊ ಮೂಲಕ ಮೆಲುಕು ಹಾಕಿದ್ದಾನೆ. ನೀನು ತುಂಬಾ ನೆನಪು ಆಗುತ್ತಿದ್ದೀಯ. ನಿನ್ನನ್ನು ಬಿಟ್ಟು ಇರಲು ಆಗುವುದಿಲ್ಲ. ಬಿಟ್ಟೋಗ್ಬೇಡ ನನ್ನ ಪ್ಲೀಸ್‌ ಎಂದು ಕಣ್ಣೀರು ಹಾಕಿದ್ದಾನೆ. ಆಡಿಯೊ ಉದ್ದಕ್ಕೂ ಭಾವನಾತ್ಮಕವಾಗಿ ಮಾತನಾಡಿ ಕೊನೆಗೆ ಯುವತಿಗೆ I love you ಬೇಬಿ ಎಂದು ಹೇಳಿ, ಹುಷಾರಾಗಿ ಇರು ಎಂದು ತಿಳಿಸಿದ್ದಾನೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಣಿಕಂಠ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ. ಮಣಿಕಂಠ ಅದೇ ಏರಿಯಾದ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಇಬ್ಬರ ನಡುವೆ ಮನಸ್ತಾಪವಾಗಿ ಗಲಾಟೆ ಆಗಿರಬಹುದೆಂದು ಶಂಕಿಸಲಾಗಿದೆ.

ಇದೇ ಕಾರಣಕ್ಕೆ ಯುವಕ ನೇಣು ಹಾಕಿಕೊಂಡಿದ್ದಾನೆ ಎಂದು ಎಂದು ಕುಟುಂಬ ತಿಳಿಸಿದ್ದು, ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗನ ಸಾವಿಗೆ ಕಾರಣರಾದವರನ್ನು ಬಂಧಿಸಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ | ಹೆಣ್ಣುಮಕ್ಕಳೇ ಹುಟ್ಟಿದ್ದರಿಂದ ಇಬ್ಬರು ಹೆಣ್ಣುಮಕ್ಕಳ ಬಾವಿಗೆ ನೂಕಿ ತಾನೂ ಹಾರಿ ಆತ್ಮಹತ್ಯೆ ಮಾಡಿಕೊಂಡಳು!

Exit mobile version