Site icon Vistara News

Kidnap case: ಬೆಂಗಳೂರಿನಲ್ಲಿ ಯುವಕನ ಕಿಡ್‌ನ್ಯಾಪ್‌, ಜಾಗೃತ ನಾಗರಿಕರಿಂದ ವಿಡಿಯೊ, ಟ್ವೀಟ್‌ ಮಾಡಿ ದೂರು

bangalore kidnap

ಬೆಂಗಳೂರು: ಸ್ವಿಫ್ಟ್ ಕಾರಿನಲ್ಲಿ ಬಂದ ನಾಲ್ಕಾರು ಜನ ಯುವಕನೊಬ್ಬನನ್ನು ಬಲವಂತವಾಗಿ ಕಾರಿನೊಳಗೆ ಎಳೆದು ಹಾಕಿಕೊಂಡು ಕಿಡ್‌ನ್ಯಾಪ್‌ (kidnap case) ಮಾಡಿದ ಪ್ರಕರಣ ನಡೆದಿದೆ.

ಹೆಚ್ಎಸ್ಆರ್ ಲೇಔಟ್‌ನನ ಹ್ಯಾಂಗ್ ಒವರ್ ಪಬ್ ಬಳಿ ಯುವಕನ ಕಿಡ್ನಾಪ್ (youth kidnap) ನಡೆದಿದೆ. ಹಣಕಾಸು ವಿಚಾರದಲ್ಲಿ ಗಲಾಟೆ ನಡೆದು ಕಿಡ್ನಾಪ್ ಆಗಿದೆ ಎಂಬ ಮಾಹಿತಿ ಬಂದಿದೆ. ದೆಹಲಿ ರಿಜಿಸ್ಟರ್ ಇರುವ ಕಾರಿನಿಂದ ಕಿಡ್ನಾಪ್ ಮಾಡಲಾಗಿದೆ. ಇದು ಜಾಗೃತ ನಾಗರಿಕರೊಬ್ಬರ ಸಮಯಪ್ರಜ್ಞೆಯಿಂದ ಅವರ ಮೊಬೈಲ್‌ನಲ್ಲಿ ವಿಡಿಯೋ ಆಗಿ ದಾಖಲಾಗಿದೆ.

ಈ ಘಟನೆಗೆ ಸಂಬಂಧಿಸಿ ಹೆಚ್ಎಸ್ಆರ್ ಲೇಔಟ್ ಪೊಲೀಸ್ (Bangalore police) ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕಿಡ್ನಾಪ್ ಆಗಿರುವ ವ್ಯಕ್ತಿಯ ರಕ್ಷಣೆ ಮಾಡಿ ಅರೋಪಿಗಳ ಬಂಧನಕ್ಕೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಇದು ನಿನ್ನೆ ತಡರಾತ್ರಿ 12 ಗಂಟೆಯ ಸುಮಾರಿಗೆ ನಡೆದಿರುವ ಘಟನೆ. ಯುವಕ ಜೋರಾಗಿ ಚೀರಾಡುತ್ತಿದ್ದರೂ ಗುಂಪು ಬಲವಂತವಾಗಿ ಕಾರಿನಲ್ಲಿ ಹೊತ್ತೊಯ್ದಿದೆ. ಸಾರ್ವಜನಿಕರೊಬ್ಬರ ಮೊಬೈಲ್‌ನಲ್ಲಿ ಈ ಘಟನೆಯ ವಿಡಿಯೋ ದಾಖಲಾಗಿದೆ. ವಿಡಿಯೋ ಟ್ಯಾಗ್ ಮಾಡಿ ಅವರು ಪೊಲೀಸರಿಗೆ ಟ್ವೀಟ್ ಮೂಲಕ ದೂರು ನೀಡಿದ್ದಾರೆ. ಈ ಬಗ್ಗೆ ಕೇಸ್ ಮಾಡಿರುವುದಾಗಿ ಡಿಸಿಪಿ ಸಿ.ಕೆ ಬಾಬ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Kidnap Case : ಪೋಷಕರ ಕಿಡ್ನ್ಯಾಪ್‌ ಕೇಸ್‌ ಸುಖಾಂತ್ಯ; ಗಂಡನ ಮನೆ ಸೇರಿದ ನವವಿವಾಹಿತೆ

Exit mobile version