Site icon Vistara News

ಏರ್‌ಫೋರ್ಸ್ ತರಬೇತಿಗೆ ಬಂದಿದ್ದ ಯುವಕ ಆತ್ಮಹತ್ಯೆ

youth suicide

ಬೆಂಗಳೂರು: ಏರ್‌ಫೋರ್ಸ್‌ ತರಬೇತಿಗೆ ಬಂದಿದ್ದ ಯುವಕ ತನ್ನನ್ನು ಕೈಬಿಟ್ಟದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗಂಗಮ್ಮನಗುಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಂಕಿತ್ ಕುಮಾರ್ (27) ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಯುವಕ. ಅಂಕಿತ್‌ ಕುಮಾರ್‌ ದೆಹಲಿ ಮೂಲದವನಾಗಿದ್ದು, ಇಲ್ಲಿಗೆ ಏರ್‌ಫೋರ್ಸ್‌ ತರಬೇತಿಗೆ ಬಂದಿದ್ದ. ಕಾರಣಾಂತರಗಳಿಂದ ತರಬೇತಿಯಿಂದ ಅಂಕಿತ್‌ನನ್ನು ಕೈಬಿಡಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆ‌ಯಲ್ಲಿ ಖಿನ್ನತೆಯಿಂದ ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಆದರೆ ಅಂಕಿತ್ ಸಾವಿನ ಕುರಿತು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಕೊಲೆಯೆಂದು ಆರೋಪಿಸಿ ಗಂಗಮ್ಮನಗುಡಿ ಠಾಣೆಗೆ ದೂರು ನೀಡಿದ್ದಾರೆ. ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version