Site icon Vistara News

Viral Video: ‘ಧರ್ಮ ಮನೆಯಲ್ಲಿರಲಿ’; ಮುಸ್ಲಿಂ ಟೋಪಿ ಹಾಕಿ ಡ್ಯೂಟಿ ಮಾಡುತ್ತಿದ್ದ ಬಿಎಂಟಿಸಿ ಕಂಡಕ್ಟರ್‌ಗೆ ಮಹಿಳೆ ಕ್ಲಾಸ್

Conductor Wears Scull Cap In BMTC

BengaluruViral Video: BMTC Bus Conductor Wears Skull Cap While Duty; Woman Objects

ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಕಂಡಕ್ಟರ್‌ ಒಬ್ಬರು ಮುಸ್ಲಿಂ ಧರ್ಮದ ಟೋಪಿಯನ್ನು ಧರಿಸಿ ಡ್ಯೂಟಿ ಮಾಡಿದ್ದು, ಇವರ ವರ್ತನೆಗೆ ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೋಪಿ ಧರಿಸಿ ಡ್ಯೂಟಿ ಮಾಡುತ್ತಿದ್ದ ಕಂಡಕ್ಟರ್‌ಗೆ ಮಹಿಳೆಯು ತರಾಟೆ ತೆಗೆದುಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ (Viral Video) ಆಗಿದೆ. ಹಾಗೆಯೇ, ಮಹಿಳೆ ಪ್ರಶ್ನೆಗಳ ಕುರಿತು ಪರ ಹಾಗೂ ವಿರೋಧ ಚರ್ಚೆಯಾಗುತ್ತಿದೆ. ‌

ಮುಸ್ಲಿಂ ಧರ್ಮದ ಸಂಕೇತವಾದ ಟೋಪಿಯನ್ನು ಧರಿಸಿ ಕಂಡಕ್ಟರ್‌ ಕಾರ್ಯನಿರ್ವಹಿಸುತ್ತಿದ್ದರು. ಇದೇ ವೇಳೆ ಮಹಿಳೆಯು ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ನೀವು ಸರ್ಕಾರಿ ನೌಕರರು. ಸಮವಸ್ತ್ರ ಧರಿಸಿ ಡ್ಯೂಟಿ ಮಾಡುವ ನೀವು, ಈ ಟೋಪಿ ಹಾಕಿಕೊಂಡು ಕೆಲಸ ಮಾಡುವ ನಿಯಮವಿದೆಯೇ” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಕಂಡಕ್ಟರ್, “ಹಾಕಬಹುದು, ಹಾಕದಿದ್ದರೆ ಇಲ್ಲ” ಎಂದಿದ್ದಾರೆ. ಆಗ ಮಹಿಳೆಯು, “ನಿಮ್ಮ ಧರ್ಮದ ಆಚರಣೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳಿ” ಎಂದು ಹೇಳಿದ್ದಾರೆ.

ವೈರಲ್‌ ವಿಡಿಯೊ ಇಲ್ಲಿದೆ

“ನಾನು ಸುಮಾರು ಬಾರಿ ಟೋಪಿ ಹಾಕಿಕೊಂಡಿದ್ದೇನೆ. ಇದುವರೆಗೆ ಯಾರೂ ಆಕ್ಷೇಪ ವ್ಯಕ್ತಪಡಿಸಿಲ್ಲ” ಎಂದು ಕಂಡಕ್ಟರ್‌ ಹೇಳಿದ್ದಾರೆ. ಆಗಲೂ ಸುಮ್ಮನಿರದ ಮಹಿಳೆಯು, “ನಿಮ್ಮ ಯುನಿಫಾರ್ಮ್‌ ನಿಯಮದ ಪ್ರಕಾರ, ಈ ಟೋಪಿ ಹಾಕಿಕೊಳ್ಳಬಹುದಾ ಇಲ್ಲವಾ ಹೇಳಿ. ನಿಯಮ ಇಲ್ಲ ಎಂದರೆ ನೀವು ಹಾಕಿಕೊಳ್ಳಬಾರದು. ನಿಯಮ ಇದ್ದರೆ ನಮ್ಮದೇನೂ ಅಭ್ಯಂತರವಿಲ್ಲ” ಎಂದಿದ್ದಾರೆ. ಆಗ ಕಂಡಕ್ಟರ್‌, “ಸರಿ ಬಿಡಿ ಮೇಡಂ. ನಾನು ನಮ್ಮ ಎಂಡಿ ಅವರ ಗಮನಕ್ಕೆ ತರುತ್ತೇನೆ” ಎಂದಿದ್ದಾರೆ.

ಇದನ್ನೂ ಓದಿ: Viral Video: ರೆಸ್ಟೋರೆಂಟ್‌ನಲ್ಲಿ ಆರ್ಡರ್‌ ಮಾಡಿದ ಚಿಕನ್‌ನಲ್ಲಿ ಸಿಕ್ಕಿತು ಸತ್ತ ಇಲಿ; ವಿಡಿಯೊ ವೈರಲ್‌

ಪರ ವಿರೋಧ ಚರ್ಚೆ

ಮಹಿಳೆಯು ಬಸ್‌ ಕಂಡಕ್ಟರ್‌ಗೆ ತರಾಟೆ ತೆಗೆದುಕೊಂಡ ವಿಡಿಯೊ ವೈರಲ್‌ ಆಗುತ್ತಲೇ ಪರ-ವಿರೋಧ ಚರ್ಚೆಯಾಗುತ್ತಿದೆ. ಮಹಿಳೆಯು ಕೋಮು ದ್ವೇಷದಿಂದ ಪ್ರಶ್ನೆಗಳನ್ನು ಕೇಳಿದ್ದಾರೆ. ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಒಂದಷ್ಟು ಜನ, ಸಮವಸ್ತ್ರ ಸಂಹಿತೆಯಲ್ಲಿ ಟೋಪಿ ಧರಿಸುವ ನಿಯಮವಿಲ್ಲ. ಇಸ್ಲಾಂ ಧರ್ಮದ ಸಂಕೇತವಾದ ಟೋಪಿಯನ್ನು ಡ್ಯೂಟಿ ವೇಳೆ ಧರಿಸುವುದು ಸರಿಯಲ್ಲ ಎಂದಿದ್ದಾರೆ. ಹಾಗಾಗಿ, ಜಾಲತಾಣಗಳಲ್ಲಿ ಈ ಕುರಿತು ಭಾರಿ ಚರ್ಚೆಯಾಗುತ್ತಿದೆ.

Exit mobile version