Site icon Vistara News

Rapido danger | ಯುವತಿಯರೇ ರ‍್ಯಾಪಿಡೊ‌ ಬೈಕ್‌ ಹತ್ತುವ ಮುನ್ನ ಎಚ್ಚರ: ಮೊಬೈಲ್‌ ಕಿತ್ತುಕೊಂಡು ಓಡಿದ ಯುವಕ!

bike taxi service

ಬೆಂಗಳೂರು: ರಾಜಧಾನಿಯಲ್ಲಿ ರ‍್ಯಾಪಿಡೊ ಬೈಕ್‌ ಸರ್ವಿಸ್‌ಗೆ ಸಂಬಂಧಿಸಿ ಹಲವು ಆರೋಪಗಳಿವೆ (Rapido danger). ಹೆಣ್ಣೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ರ‍್ಯಾಪಿಡೊ ಚಾಲಕನೊಬ್ಬ ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯವೇ ನಡೆದಿತ್ತು. ಈ ನಡುವೆ, ರ‍್ಯಾಪಿಡೊ ಬೈಕ್‌ ಹೆಸರಿನಲ್ಲಿ ಕೆಲವು ಯುವಕರು ಯುವತಿಯರಿಗೆ ಮೋಸ ಮಾಡುತ್ತಿರುವ ವಿದ್ಯಮಾನಗಳು ದಾಖಲಾಗಿವೆ.

ರ‍್ಯಾಪಿಡೊ ಸರ್ವಿಸ್‌ಗಾಗಿ ಫೋನ್‌ ಮಾಡಿದ್ದ ಮಹಿಳೆಯ ಜತೆ ಗೋಳು ತೋಡಿಕೊಂಡ ಯುವಕನೊಬ್ಬ ಅವರ ಮೊಬೈಲನ್ನೇ ಕಿತ್ತೊಯ್ದಿದ್ದಾನೆ. ಈ ಘಟನೆ ಹಲಸೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಮಹಿಳೆ ಹಿಂದೊಮ್ಮೆ ರ‍್ಯಾಪಿಡೋ ಬುಕ್ ಮಾಡಿದ್ದರು. ಅದರ ಪ್ರಕಾರ ಮುಸ್ತಫಾ ಎಂಬಾತ ಆಕೆಗೆ ಡ್ರಾಪ್ ಕೊಟ್ಟಿದ್ದ. ಈ ನಡುವೆ, ಮುಸ್ತಫಾ ಮಹಿಳೆಯ ಬಳಿ ಆಕೆಯ ಪರ್ಸನಲ್ ನಂಬರ್ ಪಡೆದಿದ್ದ.

ಇದಾಗಿ ಎರಡು-ಮೂರು ದಿನಗಳ ನಂತರ ಮುಸ್ತಫಾ ಆಕೆಗೆ ಕರೆ ಮಾಡಿದ್ದ. ಆ ಸಂದರ್ಭದಲ್ಲಿ ನಾನು ಕೆಲಸ ಬಿಟ್ಟಿದ್ದೀನಿ ಅಂತ ಅಳಲು ತೋಡಿಕೊಂಡಿದ್ದ. ಆ ಸಂದರ್ಭದಲ್ಲಿ ಮಹಿಳೆ ತನಗೆ ಈಗ ಕೆ.ಆರ್.‌ ಪುರಂಗೆ ಹೋಗಬೇಕು ಎಂದು ಹೇಳಿದ್ದಾರೆ. ಆಗ ಆತ ನಾನೇ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ ಬನ್ನಿ ಎಂದು ಕರೆದಿದ್ದಾನೆ.

ಮಹಿಳೆ ಆತನನ್ನು ನಂಬಿ ಆತನ ಬೈಕ್‌ ಹತ್ತಲು ಸಿದ್ಧರಾಗಿ ನಿಂತಿದ್ದರು. ಹೇಳಿದಂತೆ ಆತ ಆಲ್ಲಿಗೆ ಬಂದಿದ್ದ. ಈ ನಡುವೆ, ಅಲ್ಲಿಗೆ ಬಂದ ಆತ ಬೈಕ್‌ ಸ್ಟಾರ್ಟ್‌ ಆಗುತ್ತಿಲ್ಲ ಎಂದು ಹೇಳಿದ್ದಾನೆ. ಮಹಿಳೆಯ ಬಳಿ ʻʻಒಮ್ಮೆ ನಿಮ್ಮ ಮೊಬೈಲ್‌ ಕೊಡಿ, ನನ್ನ ಮೊಬೈಲ್‌ನಲ್ಲಿ ಹಣ ಇಲ್ಲ. ಮೆಕ್ಯಾನಿಕ್‌ಗೆ ಕಾಲ್‌ ಮಾಡಿ ಕೊಡುತ್ತೇನೆʼʼ ಎಂದಿದ್ದ. ಮಹಿಳೆ ಆತನನ್ನು ನಂಬಿ ಮೊಬೈಲ್‌ ಕೊಟ್ಟಿದ್ದರು. ಮಹಿಳೆ ಕೈಯಿಂದ ಮೊಬೈಲ್‌ ಪಡೆದವನೇ ಅದನ್ನು ಹಿಡಿದುಕೊಂಡು ಬೈಕ್‌ ಸ್ಟಾರ್ಟ್‌ ಮಾಡಿ ಓಡಿ ಹೋಗಿದ್ದಾನೆ!

ಘಟನೆ ನಡೆದು 10ಕ್ಕೂ ಹೆಚ್ಚು ದಿನ ಕಳೆದಿದೆ. ಆದರೆ, ಆರೋಪಿ ಇನ್ನೂ ಸಿಕ್ಕಿಲ್ಲ. ಮೊಬೈಲ್ ಕಳೆದುಕೊಂಡ ಮಹಿಳೆ ಪರಿತಪಿಸುತ್ತಿದ್ದಾರೆ. ಯಾರ ಜತೆಗೂ ವೈಯಕ್ತಿಕವಾಗಿ ವ್ಯವಹರಿಸಬೇಡಿ ಎಂದು ಎಲ್ಲರಿಗೂ ಸಲಹೆ ನೀಡಿದ್ದಾರೆ.

ಇದನ್ನೂ ಓದಿ | False Complaint | ಮಾಡೆಲ್‌ ಕೊಟ್ಟ ಸುಳ್ಳು ರೇಪ್‌ ಕೇಸ್‌ನಿಂದ ರ‍್ಯಾಪಿಡೊ ಚಾಲಕನ ಲೈಫೇ ಬರ್ಬಾದ್; ಮನೆಗೂ ಸೇರಿಸುತ್ತಿಲ್ಲ, ಕೆಲಸವೂ ಇಲ್ಲ

Exit mobile version