Site icon Vistara News

Tirupati Temple : ತಿರುಪತಿ ಮೆಟ್ಟಿಲ ಪಕ್ಕದಲ್ಲಿ ಬೆಚ್ಚಿ ಬೀಳಿಸುವ ದೃಶ್ಯ; ಚಿರತೆ, ಕರಡಿಗಳು ಹೊಂಚುಹಾಕ್ತಿವೆ ಹುಷಾರ್‌

Wild animals at tirupati steps

ಕೋಲಾರ: ಪ್ರಖ್ಯಾತ ತಿರುಪತಿ ತಿರುಮಲ ದೇವಸ್ಥಾನಕ್ಕೆ (Tirupati Temple) ಕಾಲ್ನಡಿಗೆಯಲ್ಲಿ ಬೆಟ್ಟವೇರುವ ಹರಕೆ ಹೊತ್ತವರ ಆತಂಕ ಇನ್ನಷ್ಟು ಹೆಚ್ಚಾಗಿದೆ. ಶ್ರೀವಾರು ಮೆಟ್ಟಿಲು‌ (Srivaru Steps), ಅಲಿಪಿರಿ ಹಾಗೂ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಕಾಡು ಪ್ರಾಣಿಗಳ ಹಾವಳಿ (Wild Animals Menace) ಭಾರಿ ಹೆಚ್ಚಾಗಿರುವುದು ಇದಕ್ಕೆ ಕಾರಣ. ಕೆಲವೇ ದಿನಗಳ ಹಿಂದೆ ಆರು ವರ್ಷದ ಪುಟ್ಟ ಬಾಲಕಿಯೊಬ್ಬಳನ್ನು (6 year old girl dead) ಚಿರತೆ ಹೊತ್ತೊಯ್ದ ಘಟನೆಯ ಬಳಿಕ ಇಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆಯಾದರೂ ಈ ಭಾಗದಲ್ಲಿ ಇನ್ನಷ್ಟು ಕಾಡು ಪ್ರಾಣಿಗಳು ಹೊಂಚು ಹಾಕಿ ಕುಳಿತಿರುವುದು ಸಿಸಿ ಟಿವಿ ಕ್ಯಾಮೆರಾದಲ್ಲಿ (CC TV Camera Footage) ಪತ್ತೆಯಾಗಿದೆ. ಇದು ಭಯ ಹುಟ್ಟಿಸಿರುವ ಹೊಸ ಸಮಾಚಾರವಾಗಿದೆ.

ಅಲಿಪಿರಿ ಪಾದಚಾರಿ ಮಾರ್ಗದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಬಳಿ ಕಳೆದ ಆಗಸ್ಟ್‌ 11ರಂದು ಚಿರತೆ ದಾಳಿ ಮಾಡಿ 6 ವರ್ಷದ ಬಾಲಕಿಯನ್ನು ಕೊಂದು ಹಾಕಿತ್ತು. ಒಮ್ಮಿಂದೊಮ್ಮೆಗೇ ಬಾಲಕಿ ನಾಪತ್ತೆಯಾಗಿದ್ದು, ಬಳಿಕ ತುಂಬ ಹೊತ್ತಿನ ಬಳಿಕ ಶವವಾಗಿ ಪತ್ತೆಯಾಗಿದ್ದಳು. ಅದಕ್ಕಿಂತ ಎರಡು ದಿನಗಳ ಹಿಂದೆ ಅಲ್ಲಿ ಮಲಗಿದ್ದ ಕಾರ್ಮಿಕರ ಮೇಲೆಯೂ ಚಿರತೆ ದಾಳಿ ಮಾಡಿತ್ತು.

ಶ್ರೀವಾರು ಮೆಟ್ಟಿಲುಗಳ ಪಕ್ಕದ ಕಾಡಲ್ಲಿ ಕಾಡು ಹಂದಿ

ಕಳೆದ ಜೂನ್‌ 24ರಂದು ಕರ್ನೂಲು ಜಿಲ್ಲೆಯ ಕೌಶಿಕ್‌ ಎಂಬ ಐದು ವರ್ಷದ ಬಾಲಕನ ಮೇಲೆ ಕೂಡಾ ಚಿರತೆ ಅಟ್ಯಾಕ್‌ ಮಾಡಿತ್ತು. ಚಿರತೆ ಬಾಲಕನ್ನು ಸ್ವಲ್ಪ ದೂರ ಹೊತ್ತೊಯ್ದಿತ್ತು. ಆಗ ಜನರು ಬೊಬ್ಬೆ ಹೊಡೆದಾಗ ಬಿಟ್ಟು ಓಡಿತ್ತು.

ಬಾಲಕನ ಮೇಲೆ ಚಿರತೆ ದಾಳಿ ನಡೆಸಿದ ಬಳಿಕ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿ ಕೆಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿತ್ತು. ಅಲಿಪಿರಿ ಕಾಲ್ನಡಿಗೆ ಮಾರ್ಗದಲ್ಲಿ ರಾತ್ರಿ ವೇಳೆ 7 ಗಂಟೆಯಿಂದ ಭಕ್ತರನ್ನು ಒಬ್ಬೊಬ್ಬರನ್ನೇ ಕಳುಹಿಸದೆ, ಒಟ್ಟಿಗೆ 200 ಮಂದಿಯಂತೆ ಒಂದು ತಂಡವಾಗಿ ಕಳುಹಿಸಲಾಗುತ್ತಿತ್ತು. ರಾತ್ರಿ 10ರವರೆಗೆ ಮಾತ್ರ ಈ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.

ಆಗಸ್ಟ್‌ 11ರಂದು ಚಿರತೆ ಒಬ್ಬ ಬಾಲಕಿಯನ್ನು ಕೊಂದು ಹಾಕಿದ ಬಳಿಕ ತಿರುಪತಿ ಕಾಲ್ನಡಿಗೆ ಮಾರ್ಗದ 7ನೇ ಮೈಲಿಯಿಂದ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದವರೆಗೆ ಹೈ ಅಲರ್ಟ್‌ ಜೋನ್‌ ಆಗಿ ಘೋಷಿಸಿ ಹೆಚ್ಚಿನ ಭದ್ರತೆ ನೀಡಲಾಗಿದೆ. ಇಲ್ಲಿ ಯಾವ ಕಾರಣಕ್ಕೂ ಒಬ್ಬೊಬ್ಬರೇ ಓಡಾಡಬಾರದು ಎಂಬ ಸೂಚನೆ ನೀಡಲಾಗಿದೆ.

ಜನರು ಓಡಾಡುವ ರಸ್ತೆಯ ಪಕ್ಕದಲ್ಲೇ ಕಾಡುಹಂದಿ

ಈಗಲೂ ಹೊಂಚು ಹಾಕುತ್ತಿವೆ ಕಾಡು ಪ್ರಾಣಿಗಳು

ಈ ನಡುವೆ, ಶ್ರಾವಣ ಮಾಸದಲ್ಲಿ ಅತಿ ಹೆಚ್ಚು ಜನರು ಕಾಲ್ನಡಿಗೆ ಯಾತ್ರೆ ಮಾಡುತ್ತಾರೆ. ಈ ಹೊತ್ತಿನಲ್ಲಿ ಆ ಭಾಗದಲ್ಲಿ ಸಿಕ್ಕಿದ ಸಿಸಿ ಕ್ಯಾಮೆರಾ ದೃಶ್ಯಗಳು ಭಯ ಹುಟ್ಟಿಸಿವೆ. ಇಲ್ಲಿ ಶ್ರೀವಾರು ಮೆಟ್ಟಿಲುಗಳ ಅತಿ ಸನಿಹದಲ್ಲಿ ಕಾಡು ಪ್ರಾಣಿಗಳ ಓಡಾಟ ದರ್ಶನ ನಿತ್ಯ ಎದುರಾಗಿದೆ. ಚಿರತೆ ಮಾತ್ರವಲ್ಲದೆ ಕರಡಿ, ಕಾಡು ಹಂದಿಗಳ ಓಡಾಟ ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾಗಿದೆ.

ಸಿಸಿ ಕ್ಯಾಮೆರಾದಲ್ಲಿ ಕಂಡುಬಂದಿರುವ ಪ್ರಾಣಿಗಳು

ಭದ್ರತೆ ಕೊಡಲು ಆಗದು, ಪ್ರಾಣಿಗಳನ್ನು ಹಿಡಿಯಿರಿ ಎಂದ ಟಿಟಿಡಿ

ಈ ನಡುವೆ, ಕಾಲ್ನಡಿಗೆಯಲ್ಲಿ ಬರುವ ಎಲ್ಲ ಭಕ್ತರಿಗೂ ಕಾಡುಪ್ರಾಣಿಗಳಿಂದ ರಕ್ಷಣೆ ಕೊಡುವುದು ಕಷ್ಟ ಎಂದು ಟಿಟಿಡಿ ಹೇಳಿದೆ. ಇದರ ಬದಲಾಗಿ ಭಕ್ತರಿಗೆ ರಕ್ಷಣೆ ಕೊಡಬೇಕು ಎಂದರೆ ಕಾಡು ಪ್ರಾಣಿಗಳನ್ನು ಹಿಡಿಯುವುದು ಸೂಕ್ತ ಎಂದಿರುವ ಅದು ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದೆ.

Exit mobile version