Site icon Vistara News

Cabinet Meeting : ಇಂದಿನ ಸಂಪುಟ ಸಭೆಯಲ್ಲಿ ಭಕ್ತವತ್ಸಲ ಆಯೋಗದ ವರದಿ ಚರ್ಚೆ; ಹಿಂದುಳಿದ ವರ್ಗಕ್ಕೆ ಸಿಗಲಿದೆಯೇ ಬಲ?

previous govt approved prajects more than 3 times Says CM Siddaramaiah

ಬೆಂಗಳೂರು: ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ. ಕೆ. ಭಕ್ತವತ್ಸಲ ಆಯೋಗದ (Retired High Court Judge Dr K Bhaktavatsala Commission) ಎರಡನೇ ವರದಿಯು ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಗುರುವಾರ (ಅಕ್ಟೋಬರ್‌ 5) ನಡೆಯಲಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಇದರ ಬಗ್ಗೆ ಗಂಭೀರ ಚರ್ಚೆಯಾಗಲಿದೆ.

ಪಂಚಾಯತ್‌ ರಾಜ್ ಸಂಸ್ಥೆಗಳು (Panchayati Raj) ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ (Local body elections) ಹಿಂದುಳಿದ ವರ್ಗಗಳ (Backward Classes) ರಾಜಕೀಯ ಹಿಂದುಳಿದಿರುವಿಕೆಯನ್ನು (Political backwardness) ಗುರುತಿಸುವ ಸಂಬಂಧ ಈ ವರದಿಯು ಮಹತ್ವವನ್ನು ಪಡೆದುಕೊಂಡಿದೆ.

ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡುವ ಸಂಬಂಧ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಕೆ. ಭಕ್ತವತ್ಸಲ ನೇತೃತ್ವದ ಆಯೋಗ ಈ ವರದಿಯನ್ನು ನೀಡಿದೆ. ಆಯಾ ಸಮುದಾಯಗಳ ರಾಜಕೀಯ ಪ್ರಾತಿನಿಧ್ಯವನ್ನು ಖಚಿತಪಡಿಸಿದ ಬಳಿಕವೇ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದರನ್ವಯ ಅಧ್ಯಯನ ನಡೆಸಿ ವರದಿಯನ್ನು ರಚನೆ ಮಾಡಲಾಗಿತ್ತು.

2022ರಲ್ಲಿ ನ್ಯಾ. ಭಕ್ತವತ್ಸಲ ಆಯೋಗ ರಚನೆ

ರಾಜಕೀಯ ಪ್ರಾತನಿಧ್ಯದ ಕುರಿತು ಸಂಪೂರ್ಣ ಅಧ್ಯಯನ ನಡೆಸಿ ಶಿಫಾರಸು ಮಾಡಲು 2022ರ ಮೇ 16ರಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಕೆ. ಭಕ್ತವತ್ಸಲ ನೇತೃತ್ವದ ಆಯೋಗವನ್ನು ರಾಜ್ಯ ಸರ್ಕಾರ ರಚಿಸಿತ್ತು. ಈ ಆಯೋಗವು ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತ್ತು.

ಯಾವ ಆಧಾರದ ಮೇಲೆ ನಡೆದಿದೆ ಅಧ್ಯಯನ?

ಈ ಎಲ್ಲ ಅಂಶಗಳು ಸೇರಿದಂತೆ ವರದಿಯಲ್ಲಿರುವ ಇತರೆ ಶಿಫಾರಸುಗಳ ಬಗ್ಗೆಯೂ ಇಂದಿನ ಸಚಿವ ಸಂಪುಟದಲ್ಲಿ ಚರ್ಚೆ ನಡೆಯಲಿದೆ.

ಇದನ್ನೂ ಓದಿ: Shivamogga Violence : ಶಿವಮೊಗ್ಗ ಗಲಭೆ ನಡುವೆಯೇ ವಿದೇಶಕ್ಕೆ ಹಾರಿದ ಗೃಹ ಸಚಿವ ಜಿ. ಪರಮೇಶ್ವರ್‌

ಈಗ ಏಕೆ ಈ ವರದಿಗೆ ಮಹತ್ವ?

ಈಗ ರಾಜ್ಯದಲ್ಲಿ ಚುನಾವಣೆಗಳ ಪರ್ವ ಆರಂಭವಾಗಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿ ಚುನಾವಣೆ ಸಮೀಪ ಬರುತ್ತಿದ್ದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳೂ ನಡೆಯಬೇಕಿದೆ. ಈ ಎಲ್ಲ ದೃಷ್ಟಿಯಿಂದ ಭಕ್ತವತ್ಸಲ ವರದಿ ಮಹತ್ವವನ್ನು ಪಡೆದುಕೊಂಡಿದೆ. ಇದರ ಆಧಾರದ ಮೇಲೆ ಕ್ಷೇತ್ರಗಳ ಮೀಸಲಾತಿಯನ್ನು ಪ್ರಕಟಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಹೀಗಾಗಿ ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಕೆ. ಭಕ್ತವತ್ಸಲ ನೇತೃತ್ವದ ಆಯೋಗದ ವರದಿಯು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

Exit mobile version