Site icon Vistara News

Bharat Jodo | ನಮ್ಮಪ್ಪ ಸಾಯಲು ಡಾಕ್ಟರ್ಸೇ ಕಾರಣ: ಚಿಕ್ಕ ಬಾಲಕಿಯ ಮಾತಿಗೆ ಡಿಕೆಶಿ ಕಣ್ಣೀರು

D K Shivakumar

ಚಾಮರಾಜನಗರ: ಕೋವಿಡ್ ಸಾಂಕ್ರಾಮಿಕ ವೇಳೆ ಸಂಭವಿಸಿದ ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬಗಳ ಸದಸ್ಯರ ಜತೆ ಭಾರತ್ ಜೋಡೋ (Bharat Jodo) ಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿ ಮಾತುಕತೆ ನಡೆಸಿದರು. ಈ ವೇಳೆ, ಚಿಕ್ಕ ಬಾಲಕಿಯೊಬ್ಬಳು ಆಕ್ಸಿಜನ್ ದುರಂತದಲ್ಲಿ ತಮ್ಮ ತಂದೆ ಮೃತಪಟ್ಟಿದ್ದರಿಂದ ಅನುಭವಿಸುತ್ತಿರುವ ದುಃಖ ಮತ್ತು ಕಷ್ಟವನ್ನು ಹೇಳಿಕೊಂಡಳು. ಈ ನೋವಿನ ಮಾತುಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ರಾಹುಲ್ ಗಾಂಧಿ ಅವರಿಗೆ ಹೇಳುವಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೂ ಕಣ್ಣೀರು ಹಾಕಿದ ಘಟನೆ ಶನಿವಾರ ನಡೆಯಿತು.

ಭಾರತ್ ಜೋಡೋ ಯಾತ್ರೆ ಶನಿವಾರ ಗುಂಡ್ಲುಪೇಟೆಯ ಮೂಲಕ ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸಿತು. ತಮ್ಮ ಯಾತ್ರೆಯ ಉದ್ದಕ್ಕೂ ಜನರರೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸುತ್ತಾರೆ. ಅದೇ ರೀತಿ, ರಾಹುಲ್ ಅವರು ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರ ಸಂಕಟಗಳಿಗೆ ಕಿವಿಯಾದರು.

ಬಾಲಕಿ ಹೇಳಿದ್ದೇನು?
ನಮ್ಮಪ್ಪ ಬದುಕಿದ್ದಾಗ ನನಗೆ ಎಲ್ಲವನ್ನೂ ತಂದುಕೊಡುತ್ತಿದ್ದರು. ಪೆನ್ಸಿಲ್ ಕೇಳಿದ ತಕ್ಷಣ ತಂದುಕೊಡುತ್ತಿದ್ದರು. ಆದರೆ, ನಮ್ಮ ಅಮ್ಮ ಏನೂ ತಂದುಕೊಡಲ್ಲ. ಅವಳಿಗೆ ಸರ್ಕಾರಿ ಕೆಲ್ಸಾ ಕೊಡ್ಸಿ. ನಮ್ಮಪ್ಪ ಸತ್ತಿದ್ದು ಡಾಕ್ಟರ್‌ಗಳಿಂದಾಗಿಯೇ. ಆದರೆ, ನಾನು ಕೂಡ ಓದಿ ಡಾಕ್ಟರ್ ಆಗುತ್ತೇನೆ ಮತ್ತು ಜನರನ್ನು ಬದುಕಿಸುತ್ತೇನೆ ಎಂದು ಕಣ್ಣೀರು ಸುರಿಸುತ್ತಾ ಬಾಲಕಿ ಹೇಳುತ್ತಾಳೆ.

ಈ ವೇಳೆ, ಬಾಲಕಿಯ ದುಃಖದ ಮಾತುಗಳು ರಾಹುಲ್ ಗಾಂಧಿ ಅವರಿಗೆ ಅರ್ಥವಾಗಲಿ ಎಂದು ಡಿ ಕೆ ಶಿವಕುಮಾರ್ ಅವರು, ಆಕೆಯ ಮಾತುಗಳನ್ನುಇಂಗ್ಲಿಷ್ ಅನುವಾದ ಮಾಡಲು ಮುಂದಾಗುತ್ತಾರೆ. ಆದರೆ, ಹಾಗೆ ಅನುವಾದ ಮಾಡುತ್ತಿರುವಾಗಲೇ ದುಃಖ ತಡೆಯಲಾರದೇ ಕಣ್ಣೀರು ಹಾಕುತ್ತಾರೆ. ಈ ವಿಡಿಯೋ ವೈರಲ್ ಆಗಿದೆ.

ರಾಹುಲ್ ಭರವಸೆ
ಬಾಲಕಿಯ ದುಃಖದ ಮಾತುಗಳಿಗೆ ಕಿವಿಯಾದ ರಾಹುಲ್ ಗಾಂಧಿ, ನೊಂದ ಕುಟುಂಬಕ್ಕೆ ಪಕ್ಷದ ಕಡೆಯಿಂದ ಏನೇನು ಸಹಾಯ ಮಾಡುವುದಕ್ಕೆ ಸಾಧ್ಯವೋ ಅದನ್ನು ಮಾಡುವುದಾಗಿ ಭರವಸೆ ನೀಡುತ್ತಾರೆ.

ಇದನ್ನೂ ಓದಿ | Bharat Jodo | ಸಿದ್ದು-ಡಿಕೆಶಿ ಜೋಡೋ ಮಾಡಲು ಮತ್ತೊಮ್ಮೆ ಪ್ರಯತ್ನಿಸಿದ ರಾಹುಲ್‌

Exit mobile version