Site icon Vistara News

ಭಾರತ್‌ ಜೋಡೋ | ಇಂದು ಆಂಧ್ರಪ್ರದೇಶದತ್ತ ರಾಹುಲ್

bharath jodo yatra

ಬಳ್ಳಾರಿ: ಬಳ್ಳಾರಿಯ ಸಂಗನಕಲ್‌ನಿಂದ ಇಂದು ಪಾದಯಾತ್ರೆ ಆರಂಭಿಸಿರುವ ರಾಹುಲ್‌ ಗಾಂಧಿ ಅವರು ಆಂಧ್ರಪ್ರದೇಶದತ್ತ ನಿರ್ಗಮಿಸಿದ್ದಾರೆ.

ಸಂಗನಕಲ್‌ನ ಕ್ಯಾಂಪಿನಿಂದ 6.41ಕ್ಕೆ ಹೊರಗೆ ಹೊರಟ ರಾಹುಲ್ ಗಾಂಧಿ, 20 ಕಿ.ಮೀ ದೂರದಲ್ಲಿರುವ ಆಂಧ್ರದ ಗಡಿವರೆಗೆ ವಾಹನದಲ್ಲಿ ತೆರಳಲಿದ್ದಾರೆ. ಆಂಧ್ರದ ಗಡಿ ಆರಂಭದಿಂದ ಪಾದಯಾತ್ರೆ ಆರಂಭಿಸಲಿದ್ದಾರೆ. ರಾಹುಲ್ ಗಾಂಧಿಯವರೊಂದಿಗೆ‌ ಶಾಸಕ ನಾಗೇಂದ್ರ ರಿದಂತೆ ಇತರ ಮುಖಂಡರು ಹೆಜ್ಜೆ ಹಾಕಲಿದ್ದಾರೆ. ಕ್ಯಾಂಪಿನಲ್ಲಿ ದಿಗ್ವಿಜಯ ಸಿಂಗ್, ಶೇಖರಬಾಬು ಸೇರಿದಂತೆ ಇತರ ನಾಯಕರೂ ಉಳಿದುಕೊಂಡಿದ್ದರು.

ಯಾತ್ರೆಗೆ ಪೂರ್ವದಲ್ಲಿ ಧ್ವಜಾರೋಹಣ ನಡೆಯಿತು. ಪಾದಯಾತ್ರೆ ಆಂಧ್ರದ ಆಲೂರು ವಿಧಾನಸಭಾ ಕ್ಷೇತ್ರದಿಂದ‌ ಆರಂಭವಾಗಲಿದೆ. ಇದು ಶಾಸಕ ನಾಗೇಂದ್ರ ಅವರ ಸಹೋದರ ಜಯರಾಂ ಅವರ ಕ್ಷೇತ್ರ. ಇವರು ಆಂಧ್ರದ ಸರ್ಕಾರದಲ್ಲಿ ಸಚಿವರಾಗಿದ್ದಾರೆ.

ಗಣಿನಾಡಿನಲ್ಲಿ ಮೂರು ದಿನದ ವಾಸ್ತವ್ಯದ ನಂತರ ರಾಹುಲ್ ಗಾಂಧಿ ಆಂಧ್ರಕ್ಕೆ ಹೊರಟಿದ್ದಾರೆ. ಅ.14ರ ರಾತ್ರಿ ಬಳ್ಳಾರಿಗೆ ಆಗಮಿಸಿದ್ದ ಅವರು ಮರುದಿನ ಸಮಾವೇಶದಲ್ಲಿ ಭಾಗವಹಿಸಿದ್ದರು. ಒಂದು ದಿನ ವಿಶ್ರಾಂತಿ ಪಡೆದಿದ್ದು, ನಿನ್ನೆ ಎಐಸಿಸಿ ಚುನಾವಣೆಯಲ್ಲಿ ಭಾಗವಹಿಸಿದ್ದರು.‌

ಇದನ್ನೂ ಓದಿ | ವಿಸ್ತಾರ TOP 10 NEWS | ಭಾರತ್‌ ಜೋಡೋ ಸಮಾವೇಶದಿಂದ ಜೋ ಬೈಡೆನ್ ಆವೇಶದವರೆಗಿನ ಪ್ರಮುಖ ಸುದ್ದಿಗಳಿವು

Exit mobile version