Site icon Vistara News

Bhima river | ಪುಣ್ಯ ಸ್ನಾನ ಮಾಡಲು ಹೋದ ಯುವಕ ನೀರುಪಾಲು; ಶವವಾಗಿ ಪತ್ತೆ

heavy rain

ಕಲಬುರಗಿ: ಇಲ್ಲಿನ ಅಫಜಲಪುರ ತಾಲೂಕಿನ ಸುಕ್ಷೇತ್ರ ಗಾಣಗಾಪೂರದಲ್ಲಿ ಭೀಮಾ ನದಿಯಲ್ಲಿ (Bhima river) ಬುಧವಾರ (ಆ.10) ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾರೆ. ಮಹಾರಾಷ್ಟ್ರದ ಲಾತೂರ್ ನಿವಾಸಿ ಗೋಪಾಲ ರಾಠೋಡ (20) ಎಂಬುವವರೇ ಮೃತ ದುರ್ದೈವಿ.

ಗೋಪಾಲ್ ರಾಠೋಡ ದತ್ತಾತ್ರೇಯ ದೇವರ ದರ್ಶನಕ್ಕೆ ಕುಟುಂಬ ಸಮೇತ ಆಗಮಿಸಿದ್ದರು. ಪುಣ್ಯ ಸ್ನಾನ ಮಾಡಲು ಸಂಗಮದಲ್ಲಿ ಇಳಿದಾಗ ನದಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆ. ಅವರನ್ನು ಹಿಡಿಯಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ.

ದೇವಲಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು, ಎಸ್‌ಡಿಆರ್‌ಎಫ್‌, ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದಾರೆ. ಶೋಧ ಕಾರ್ಯಾಚರಣೆ ನಡೆಸಿದರು.‌ ಸತತ ೨ ಗಂಟೆಗಳ ಕಾರ್ಯಾಚರಣೆ ಬಳಿಕ ಮೃತದೇಹ ಪತ್ತೆಯಾಗಿದೆ. ಶ್ರಾವಣ ಮಾಸದ ನಿಮ್ಮಿತ್ತ ಗಾಣಗಾಪುರದ ದತ್ತನ ದರ್ಶನಕ್ಕೆ ಬಂದ ಕುಟುಂಬದಲ್ಲೀಗ ಆಕಂದ್ರನ ಮುಗಿಲು ಮುಟ್ಟಿದೆ.

ಇದನ್ನೂ ಓದಿ | Rain News | ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಬಿರುಕು ಬಿಟ್ಟ ರಾಜ್ಯ ಹೆದ್ದಾರಿ

Exit mobile version