Site icon Vistara News

Basavakalyan News: ರಾತ್ರಿ ಮಣ್ಣಲ್ಲಿ ಹೂತಿದ್ದ ಮಗು ಬೆಳಗ್ಗೆ ಜೋಕಾಲಿಯಲ್ಲಿ ಪ್ರತ್ಯಕ್ಷ!

Basavakalyan News

ಬಸವಕಲ್ಯಾಣ(ಬೀದರ್): ರಾತ್ರಿ ವೇಳೆ ಮಣ್ಣಲ್ಲಿ ಹೂತಿದ್ದ ಮಗು ಬೆಳಗಾಗುವಷ್ಟರಲ್ಲಿ ಮರಕ್ಕೆ ಕಟ್ಟಿದ ಜೋಕಾಲಿಯಲ್ಲಿ ಪ್ರತ್ಯಕ್ಷಗೊಂಡ ಘಟನೆ ಬೀದರ್‌ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ ಭಾನುವಾರ ಜರುಗಿದೆ. ಅಂತ್ಯ ಸಂಸ್ಕಾರ ಮಾಡಿದ್ದ ಮಗು, ಗುಂಡಿಯಿಂದ ಹೊರಗೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಮಂಠಾಳ ಗ್ರಾಮದ ನಿವಾಸಿ ಅಂಬಯ್ಯ ಸ್ವಾಮಿ ಅವರ ಒಂದೂವರೆ ವರ್ಷದ ಹೆಣ್ಣು ಮಗು ಶನಿವಾರ ಸಂಜೆ ಅನಾರೋಗ್ಯದಿಂದ ಮೃತಪಟ್ಟಿತ್ತು. ನಂತರ ತಡ ರಾತ್ರಿ 12ರ ಸುಮಾರಿಗೆ ಕುಟುಂಬಸ್ಥರು ಹಾಗೂ ಸಂಬಂಧಿಕರು ಕೂಡಿ ಮಗುವಿಗೆ ಗ್ರಾಮದ ಪಕ್ಕದ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಿ ಮನೆಗೆ ತೆರಳಿದ್ದರು.

ಮಗು ಮಣ್ಣಲ್ಲಿ ಹೂತು ಮನೆಗೆ ಬಂದ ಪಾಲಕರು ಹಾಗೂ ಗ್ರಾಮಸ್ಥರಿಗೆ ಬೆಳಗಾಗುವಷ್ಟರಲ್ಲಿ ಆಶ್ಚರ್ಯ ಕಾದಿತ್ತು. ರಾತ್ರಿ ಸಮಯದಲ್ಲಿ ಮಣ್ಣಲ್ಲಿ ಹೂತಿದ್ದ ಮಗು, ಬೆಳಗ್ಗೆ ಮರಕ್ಕೆ ಬಟ್ಟೆಯಿಂದ ಕಟ್ಟಿದ ಜೋಕಾಲಿಯಲ್ಲಿ ಮಲಗಿದ ಸ್ಥಿತಿಯಲ್ಲಿ ಪ್ರತ್ಯಕ್ಷಗೊಂಡಿದೆ. ಮಣ್ಣಲ್ಲಿ ಹೂತಿದ್ದ ಮಗು ಬೆಳಗ್ಗೆ ಮರದಲ್ಲಿ ಕಂಡು ಆಶ್ಚರ್ಯಕ್ಕೆ ಒಳಗಾದ ಸ್ಥಳೀಯರು, ಮತ್ತೆ ಅದೇ ಸ್ಥಳದಲ್ಲಿ ಮತ್ತೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಮಾಟ ಮಂತ್ರ ಮಾಡುವ ಮಾಂತ್ರಿಕರು ಮಗುವನ್ನು ಮೇಲೆ ತೆಗೆದಿರಬಹುದು ಎಂದು ಕೆಲವರು ಹೇಳಿದರೆ, ಮಗುವಿನ ಮೇಲಿನ ಆಭರಣಗಳು ದೋಚುವ ಉದ್ದೇಶದಿಂದ ಕಿಡಿಗೆಡಿಗಳು ಈ ಕೃತ್ಯ ಎಸಗಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ | Drown In Water: ಭೀಕರ ದುರಂತ; ನಾಲ್ವರು ಮಕ್ಕಳು ಸೇರಿ ಐವರು ನೀರುಪಾಲು

ಚನ್ನರಾಯಪಟ್ಟಣದಲ್ಲಿ ಭೀಕರ ಅಪಘಾತ; ಬಸ್-ಕಾರು ಡಿಕ್ಕಿಯಾಗಿ ಇಬ್ಬರ ದುರ್ಮರಣ

ಹಾಸನ: ಕೆ‌ಎಸ್‌ಆರ್‌ಟಿಸಿ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ (Road Accident) ಸ್ಥಳದಲ್ಲೇ ಇಬ್ಬರು ದುರ್ಮರಣ ಹೊಂದಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಊಪಿನಹಳ್ಳಿ ಗೇಟ್ ಬಳಿ ಭಾನುವಾರ ನಡೆದಿದೆ. ಮಡಬ ಗ್ರಾಮದ ಮಂಜುನಾಥ್ (26) ಮೃತ ದುರ್ದೈವಿ, ಮತ್ತೋಬ್ಬರ ಗುರುತು ಪತ್ತೆಯಾಗಿಲ್ಲ.

ಚನ್ನರಾಯಪಟ್ಟಣದ‌ ಕಡೆಗೆ ಬರುತ್ತಿದ್ದ ಕಾರು ಹಾಗೂ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದ KA-11-F-0511 ನಂಬರ್‌ನ ಸಾರಿಗೆ ಬಸ್ ಡಿಕ್ಕಿಯಾಗಿದ್ದು, ಡಿಕ್ಕಿ ರಭಸಕ್ಕೆ ಬಸ್ಸಿನಡಿ ಕಾರು ನುಗ್ಗಿದೆ. ಕಾರನ್ನು ಹೊರಗೆಳೆದು ಮೃತದೇಹಗಳನ್ನು ಹೊರ ತೆಗೆಯಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಅಪಘಾತದಿಂದ ಕಾರಿನಲ್ಲಿದ್ದ ಇಬ್ಬರ ಮೃತದೇಹಗಳು ನಜ್ಜುಗುಜ್ಜಾಗಿವೆ.

ಈಜಲು ತೆರಳಿದ್ದ ಯುವಕ ನೀರು ಪಾಲು

ಕೊಡಗು: ಕೊಡಗಿನಲ್ಲಿ ಪ್ರವಾಸಿಗರ ಹುಚ್ಚಾಟ ಮುಂದುವರಿದಿದ್ದು, ನೀರಿನಲ್ಲಿ ಈಜಲು ಹೋಗಿ ಜೀವಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ. ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಹೇರೂರು ಗ್ರಾಮದಲ್ಲಿ ಈಜಲು ತೆರಳಿದ್ದ ಯುವಕ ನೀರು ಪಾಲಾಗಿದ್ದು, ಯುವಕನಿಗಾಗಿ ಮುಂದುವರೆದ ಶೋಧಕಾರ್ಯ ನಡೆಯುತ್ತಿದೆ.

Google Map: ತಪ್ಪು ದಾರಿ ತೋರಿಸಿದ ಗೂಗಲ್‌ ಮ್ಯಾಪ್‌; ನದಿಗೆ ಬಿದ್ದ ಕಾರು!

ಮೈಸೂರು ಮೂಲದ ಶಶಿ (30) ನೀರುಪಾಲಾದ ಯುವಕ. ಮೈಸೂರಿನಿಂದ ಕೊಡಗಿಗೆ ಪ್ರವಾಸಕ್ಕೆ ಯುವಕ-ಯುವತಿಯರ ತಂಡ ಬಂದಿತ್ತು. ಕುಶಾಲನಗರ ತಾಲ್ಲೂಕಿನ ಹೇರೂರು ಗ್ರಾಮದ ಬಳಿ ಈಜಲು ಹೋಗಿ ಯುವಕನೊಬ್ಬ ನೀರುಪಾಲಾಗಿದ್ದಾನೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರು, ಸ್ಥಳೀಯರು ಹಾಗೂ ಅಗ್ನಿಶಾಮ‌ಕ ಸಿಬ್ಬಂದಿಯಿಂದ ಯುವಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

Exit mobile version