Site icon Vistara News

Bidar News: 17.50 ಲಕ್ಷ ರೂ. ಮೌಲ್ಯದ ಮಾದಕ ವಸ್ತು ವಶ; ಓರ್ವ ಆರೋಪಿ ಬಂಧನ

Seized of drugs being transported interstate An accused arrested at basavakalyana

ಬಸವಕಲ್ಯಾಣ: ಅಂತಾರಾಜ್ಯಕ್ಕೆ (Interstate) ಅಕ್ರಮವಾಗಿ ಮಾದಕ ವಸ್ತು (Drugs) ಸಾಗಿಸುತಿದ್ದ ವಾಹನದ ಮೇಲೆ ದಾಳಿ ನಡೆಸಿದ ಇಲ್ಲಿಯ ಮಂಠಾಳ ಠಾಣೆ ಪೊಲೀಸರ ತಂಡ ಓರ್ವ ಆರೋಪಿಯನ್ನು ಬಂಧಿಸಿ, 17.50 ಲಕ್ಷ ರೂ. ಮೌಲ್ಯದ ಮಾದಕ ವಸ್ತು ವಶಪಡಿಕೊಂಡ ಘಟನೆ ತಾಲೂಕಿನ ಮನ್ನಳ್ಳಿ ಗಡಿಯಲ್ಲಿ ಜರುಗಿದೆ.

ರಾಜಸ್ಥಾನದ ಬಾರಮೇರ್ ಜಿಲ್ಲೆಯ ಮೂಲದ ಸಾವಾಯಿ ರಾಮ್ (40) ಬಂಧಿತ ಆರೋಪಿಯಾಗಿದ್ದಾನೆ. ರಾಷ್ಟ್ರೀಯ ಹೆದ್ದಾರಿ 65ರ ಮಾರ್ಗವಾಗಿ ಮಾದಕ ವಸ್ತು ಸಾಗಿಸಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಹುಮನಾಬಾದ್‌ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ನೇತೃತ್ವದಲ್ಲಿ ಮಂಠಾಳ ಸಿಪಿಐ ಕೃಷ್ಣಕುಮಾರ ಪಾಟೀಲ್ ಹಾಗೂ ಸಿಬ್ಬಂದಿಗಳಾದ ಶಿವಾನಂದ, ಅನೀಲ ಪುಣೆ, ಪ್ರತಾಪ, ತಾತೇರಾವ್ ಚವ್ಹಾಣ್, ವೆಂಕಟ್ ಯಾದವ, ಶಿವಕುಮಾರ್‌ ಅವರನ್ನೊಳಗೊಂಡ ಪೊಲೀಸರ ತಂಡ, ಮಹಾರಾಷ್ಟ್ರದಿಂದ ತಮಿಳುನಾಡಿನ ಮದ್ರಾಸ್‌ಗೆ ಮಾದಕ ವಸ್ತು ಸಾಗಿಸುತಿದ್ದ ಕಂಟೇನರ್ ಲಾರಿ ಮೇಲೆ ದಾಳಿ ನಡೆಸಿ, 17.50 ಲಕ್ಷ ರೂ. ಮೌಲ್ಯದ 17 ಕೆ.ಜಿ ಓಪಿಯಮ್ ಪೊಪಿಸ್ಟ್ರಾ ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: A Beginner’s Guide to Working Out: ವ್ಯಾಯಾಮಕ್ಕೆ ಹೊಸಬರೇ? ನಿಮಗೆಂಥದ್ದು ಬೇಕು?

ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Exit mobile version