ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್ (Vistara News) ಗುರುವಾರ (ಮಾ. 21) ನಡೆಸಿದ ಪೋಲಿಂಗ್ ಬೂತ್ (Vistara news polling booth) ಜನಮತಗಣನೆಯಲ್ಲಿ ಬೀದರ್ ಲೋಕಸಭಾ ಕ್ಷೇತ್ರದಲ್ಲಿ (Bidar Constituency) ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಹಾಲಿ ಸಂಸದರನ್ನು ಹೊಂದಿರುವ ಬಿಜೆಪಿ ಎರಡನೇ ಸ್ಥಾನದಲ್ಲಿದೆ.
ವಿಸ್ತಾರ ನ್ಯೂಸ್ ನಡೆಸಿದ ಈ ಸಮೀಕ್ಷೆಗೆ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾವಿರಾರು ಕರೆಗಳು ಬಂದಿವೆ. ಇವರ ಪೈಕಿ ಶೇಕಡಾ 6೦ರಷ್ಟು ಮಂದಿ ಕಾಂಗ್ರೆಸ್‌ನ್ನು ಬೆಂಬಲಿಸಿದ್ದರೆ ಶೇ. 40ರಷ್ಟು ಮಂದಿ ಮಾತ್ರ ಬಿಜೆಪಿ ಪರ ಒಲವು ತೋರಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಭಗವಂತ್ ಖೂಬಾ ಸ್ಪರ್ಧಿಸುತ್ತಿದ್ದರೆ, ಈ ವರದಿ ಪ್ರಕಟವಾಗುವ ಹೊತ್ತಿಗೆ ಕಾಂಗ್ರೆಸ್ ಸಚಿವ ಈಶ್ವರ ಖಂಡ್ರೆ ಅವರ ಪುತ್ರ ಸಾಗರ್ ಖಂಡ್ರೆ ಅವರಿಗೆ ಟಿಕೆಟ್ ಸಿಕ್ಕಿದೆ.
ವಿಸ್ತಾರ ನ್ಯೂಸ್ ಪೋಲಿಂಗ್ ಬೂತ್‌ಗೆ ಬಂದಿರುವ ಕರೆಗಳ ಸಂಖ್ಯೆ ಸಾವಿರಾರು. ಆದರೆ ನಮಗೆ ಸ್ವೀಕರಿಸಲು ಸಾಧ್ಯವಾಗಿದ್ದು ಕೇವಲ 7714 ಕರೆಗಳನ್ನು ಮಾತ್ರ. ಅಚ್ಚರಿ ಎಂದರೆ ಹಾಲಿ ಸಂಸದರನ್ನು ಹೊಂದಿರುವ ಬಿಜೆಪಿ (BJP Karnataka) ಪರವಾಗಿ ಬಂದಿರುವ ಮತಗಳು ಕೇವಲ 3067 (ಶೇ.40). ಕಾಂಗ್ರೆಸ್ (Congress Karnataka) ಪರ 4647 ಮತಗಳು ಬಂದಿವೆ. ಹೀಗಾಗಿ ಇಲ್ಲಿ ಕಾಂಗ್ರೆಸ್ ಸದ್ಯಕ್ಕೆ ಮುನ್ನಡೆಯಲ್ಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕರೆಗಳ ಶೇಕಡಾವಾರು ವಿವರ
ಸ್ವೀಕರಿಸಿದ ಕರೆಗಳು : 7714
ಬಿಜೆಪಿ : 3067 ( ಶೇ.40 )
ಕಾಂಗ್ರೆಸ್ : 4647 ( ಶೇ.60 )
ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿ ಭಗವಂತ್ ಖೂಬಾ ಅವರಿಗೆ ಮತ್ತೆ ಟಿಕೆಟ್ ನೀಡಿದೆ. ಇದು ಸ್ವಲ್ಪ ಮಟ್ಟಿಗಿನ ಭಿನ್ನಮತಕ್ಕೆ ಕಾರಣವಾಗಿದೆ. ಇತ್ತ ಕಾಂಗ್ರೆಸ್‌ನಲ್ಲೂ ಹಲವು ಆಕಾಂಕ್ಷಿಗಳಿದ್ದರು. ಸಾಗರ್ ಖಂಡ್ರೆ ಅವರ ಜತೆ ರಾಜಶೇಖರ್ ಪಾಟೀಲ್, ಅಬ್ದುಲ್ ಮನ್ನನ್, ಅಯೂಬ್ ಖಾನ್ ಕೂಡಾ ಕಾಂಗ್ರೆಸ್ ಟಿಕೆಟ್ ಸ್ಪರ್ಧೆಯಲ್ಲಿದ್ದರು.
ವಿಸ್ತಾರ ಪೋಲಿಂಗ್ ಬೂತ್‌ಗೆ ಬಂದ ಕರೆಗಳಲ್ಲಿ ಕಾಂಗ್ರೆಸ್ ಪರ ಒಲವು ಹೆಚ್ಚಾಗಿತ್ತು. ಅದರಲ್ಲೂ ಹೆಚ್ಚು ಮತಗಳನ್ನು ಪಡೆದಿದ್ದು ಸಚಿವ ಈಶ್ವರ ಖಂಡ್ರೆ ಪುತ್ರ ಸಾಗರ್ ಖಂಡ್ರೆ. ಮಾಜಿ ಸಚಿವ ರಾಜಶೇಖರ್ ಪರವೂ ಒಲವು ಇತ್ತು. ಕಾಂಗ್ರೆಸ್ ಮುಖಂಡ ಅಯಾಜ್ ಖಾನ್ ಪರವೂ ವೋಟ್ ಬಿದ್ದಿದೆ. ಕಾಂಗ್ರೆಸ್‌ಗೆ ಒಟ್ಟಾರೆಯಾಗಿ ಸಿಕ್ಕಿದ್ದು 4647 ಅಂದರೆ ಶೇ. 60 ಮತ.
ಇದನ್ನೂ ಓದಿ : Vistara news polling booth : ದಾವಣಗೆರೆಯಲ್ಲಿ ಕೈಗೆ ಜೈ, ಸಿದ್ದೇಶ್ವರ್ ಸಾಮ್ರಾಜ್ಯಕ್ಕೆ ಹಿನ್ನಡೆ?
ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ 4647 ಮತಗಳು
ಸ್ವೀಕರಿಸಿದ ಕರೆಗಳು : 7714
ಬಿಜೆಪಿ : 3067 ( ಶೇ.40 )
ಕಾಂಗ್ರೆಸ್ : 4647 ( ಶೇ.60 )
ಮಾರ್ಚ್ 22, ಶುಕ್ರವಾರ ಯಾವ ಕ್ಷೇತ್ರ?
ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಚಿತ್ರದುರ್ಗ ಮತ್ತು ಮಧ್ಯಾಹ್ನ 2ರಿಂದ ಸಂಜೆ 6 ಗಂಟೆಯವರೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಜನ ಫೋನ್ ಮಾಡಿ ಓಟ್ ಮಾಡಬಹುದು. ಮಧ್ಯಾಹ್ನ 2 ಮತ್ತು ರಾತ್ರಿ 8 ಗಂಟೆಗೆ ಎರಡೂ ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದೆ.
ಇದು ಚಿತ್ರದುರ್ಗ ಕ್ಷೇತ್ರದ ಸ್ಪರ್ಧಾಕಣ
ಇದು ಚಿತ್ರದುರ್ಗ ಕ್ಷೇತ್ರದ ಸ್ಪರ್ಧಾಕಣ
ಏನಿದು ಪೋಲಿಂಗ್ ಬೂತ್?
ಬೆಂಗಳೂರಿನಲ್ಲಿರುವ ವಿಸ್ತಾರ ನ್ಯೂಸ್ ಮುಖ್ಯ ಕಚೇರಿಯಲ್ಲಿ ತೆರೆಯಲಾಗಿರುವ ಪೋಲಿಂಗ್ ಬೂತ್‌ಗೆ ಸಾರ್ವಜನಿಕರು ನಿಗದಿತ ಸಮಯದಲ್ಲಿ ಪೋನ್ ಮಾಡುವ ಮೂಲಕ ತಮ್ಮ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು, ಯಾವ ಪಕ್ಷ ಈ ಬಾರಿ ಗೆಲ್ಲಬೇಕು ಎಂದು ತಿಳಿಸಬಹುದು.
ಇದನ್ನೂ ಓದಿ : Vistara news polling booth : ದಾವಣಗೆರೆಯಲ್ಲಿ ಕೈಗೆ ಜೈ, ಸಿದ್ದೇಶ್ವರ್ ಸಾಮ್ರಾಜ್ಯಕ್ಕೆ ಹಿನ್ನಡೆ?
ಪೋಲಿಂಗ್ ಬೂತ್‌ನಲ್ಲಿ ಮಾಹಿತಿ ಸಂಗ್ರಹ ಹೇಗೆ?
ವಿಸ್ತಾರ ನ್ಯೂಸ್ ಪೋಲಿಂಗ್ ಬೂತ್‌ಗೆ ಒಂದೇ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ಆದರೆ, ಈ ಒಂದೇ ದೂರವಾಣಿ ಸಂಖ್ಯೆ ಸುಮಾರು 20ಕ್ಕೂ ಅಧಿಕ ಫೋನ್‌ಗಳಿಗೆ ಕನೆಕ್ಟ್ ಆಗುತ್ತದೆ. ಏಕಕಾಲದಲ್ಲಿ 20ಕ್ಕೂ ಅಧಿಕ ಮಂದಿ ಕರೆಯನ್ನು ಸ್ವೀಕರಿಸಿ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತದೆ. ಯಾರು ಅಭ್ಯರ್ಥಿಯಾಗಬೇಕು? ಯಾರು ಗೆಲ್ಲಬೇಕು? ಯಾರಿಗೆ ಮತ ಎಂಬಿತ್ಯಾದಿ ಮಾಹಿತಿಗಳನ್ನು ಈ ವೇಳೆ ದಾಖಲಿಸಿಕೊಳ್ಳಲಾಗುತ್ತದೆ. ಬಳಿಕ ಅವುಗಳನ್ನು ಸಮೀಕರಿಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.
ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ: 080-69554488