Site icon Vistara News

Bike Accident | ನಿಯಂತ್ರಣಕ್ಕೆ ಸಿಗದ ಬೈಕ್‌; ಫ್ಲೈಓವರ್‌ ಮೇಲಿಂದ ಬಿದ್ದು ಸವಾರ ಸಾವು

ಬೆಂಗಳೂರು: ಇಲ್ಲಿನ ಎಲೆಕ್ಟ್ರಾನಿಕ್ ಸಿಟಿಯ ಬಿಎಟಿಪಿಎಲ್‌ ಫ್ಲೈಓವರ್‌ ಮೇಲಿಂದ ಬಿದ್ದು ಬೈಕ್ ಸವಾರ (Bike Accident) ಮೃತಪಟ್ಟಿದ್ದಾರೆ. ಕೌರಿ ನಾಗಾರ್ಜುನ (33) ಮೃತ ದುರ್ದೈವಿ.

ಆಂಧ್ರ ಮೂಲದ ನಾಗರ್ಜುನ, ಬೆಂಗಳೂರಿಂದ ಹೊಸೂರು ಕಡೆ ಬೈಕ್‌ನಲ್ಲಿ ಹೊರಟಿದ್ದರು. ಫ್ಲೈಓವರ್‌ ಇಳಿಯಬೇಕಾದರೆ ಬೈಕ್‌ ನಿಯಂತ್ರಣಕ್ಕೆ ಸಿಗದೆ, ಸ್ಕಿಡ್‌ ಆಗಿ ಬಿದ್ದಿರುವ ಅನುಮಾನ ಇದೆ. ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ ತಡೆಗೋಡೆಗೆ ರಭಸವಾಗಿ ಡಿಕ್ಕಿ ಹೊಡೆದು ಬೈಕ್‌ ಸವಾರ ಕೆಳಗೆ ಬಿದ್ದಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ | Courtesy | ಅಪಘಾತದಲ್ಲಿ ಮೃತಪಟ್ಟ ಲೋಕಾಯುಕ್ತ ಎಸ್‌ಪಿ ಮಗಳನ್ನು ಕಮಿಷನರ್‌ ಸೀಟಲ್ಲಿ ಕೂರಿಸಿ ಗೌರವ

Exit mobile version