ಶಿವಮೊಗ್ಗ: ಇಲ್ಲಿನ ತೂದೂರು ಸಮೀಪ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ. ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ತೂದೂರು ಸಮೀಪದ ಗಬಡಿ ರೈಸ್ ಮಿಲ್ ಎದುರು ಬುಧವಾರ ಬೆಳಗಿನ ಜಾವ ಬೈಕ್ ಅಪಘಾತ ನಡೆದಿದೆ.
ಮೃತ ಬೈಕ್ ಸವಾರನನ್ನು ನಳಿನ್ ಕೊಪ್ಪದ ನಿವಾಸಿ ರವಿ ನಾಯ್ಕ್ (37) ಎಂದು ಗುರುತಿಸಲಾಗಿದೆ. ಇವರು ರಸ್ತೆಯಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬೈಕ್ ರಸ್ತೆ ಬದಿಯ ಹೊಂಡಕ್ಕೆ ಬಿದ್ದಿದೆ ಎನ್ನಲಾಗಿದೆ. ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ರವಿ ನಾಯ್ಕ್ ಅವರು ಬೈಕ್ನೊಂದಿಗೇ ಹಾರಿ ಹೋಗಿ ಹೊಂಡದಲ್ಲಿ ಬಿದ್ದಿದ್ದು, ಅವರು ಬೈಕ್ನ ಅಡಿ ಭಾಗದಲ್ಲಿದ್ದರು.
ಮಾಳುಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪಿಎಸ್ಐ ನವೀನ್ ಕುಮಾರ್ ಮಠಪತಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ| ಬಳ್ಳಾರಿ ಬಳಿ ಬೈಕ್-ಕಾರು ಮಧ್ಯೆ ಅಪಘಾತ: ಸವಾರ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಾಯ