Site icon Vistara News

Bike Accident: ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರ ಸಾವು

CRIME SCENE

ಬೆಂಗಳೂರು: ನಿಯಂತ್ರಣ ತಪ್ಪಿ ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿದ್ದರಿಂದ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ (Bike Accident) ನಗರದ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಂದು (21), ಮೋಹನ್ ಕುಮಾರ್ (21) ಮೃತ ಬೈಕ್ ಸವಾರರು.

ಸುಂಕದಕಟ್ಟೆಯ ಕಾಲೇಜು ಬಸ್ ಸ್ಟಾಪ್ ಬಳಿ ಬುಧವಾರ ಅಪಘಾತ ನಡೆದಿದೆ. ಹೆಲ್ಮಟ್‌ ಇಲ್ಲದೇ ಪಲ್ಸರ್ ಬೈಕ್‌ನಲ್ಲಿ ವೇಗವಾಗಿ ಯುವಕರು ತೆರಳುತಿದ್ದರು. ನೈಸ್ ರಸ್ತೆ ಕಡೆಯಿಂದ ಸುಂಕದಕಟ್ಟೆ ಕಡೆಗೆ ಆಗಮಿಸುತ್ತಿದ್ದಾಗ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. ಈ ವೇಳೆ ಇಬ್ಬರ ತಲೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ | Contaminated Water: ಮೊಳಕಾಲ್ಮೂರಿನಲ್ಲಿ ಕಲುಷಿತ ನೀರು ಸೇವಿಸಿ 33 ಮಂದಿ ಅಸ್ವಸ್ಥ

ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ಲಾಸ್ಟಿಕ್ ಪೇಪರ್ ರಿಸೈಕ್ಲಿಂಗ್ ಘಟಕದಲ್ಲಿ ಯುವಕರು ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಶಾಲಾ ಬಸ್ ಡಿಕ್ಕಿಯಾಗಿ ಬೈಕ್‌ ಸವಾರ ಸಾವು

ವಿಜಯನಗರ: ಬೈಕ್‌ಗೆ ಶಾಲಾ ಬಸ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವುದು ಬಾಚಿಗೊಂಡನಹಳ್ಳಿ -2 ಮತ್ತು ಹಗರಿಕ್ಯಾದಿಗಿಹಳ್ಳಿ ಮಧ್ಯದ ರಸ್ತೆಯಲ್ಲಿ ನಡೆದಿದೆ. ಹಗರಿಬೊಮ್ಮನಹಳ್ಳಿ ಏಣಿಗಿ ಬಸಾಪುರ ಗ್ರಾಮದ ಕಲ್ಗುಡಿ ನಾಗರಾಜ್ (45) ಮೃತ ಬೈಕ್ ಸವಾರ. ಅಪಘಾತ ಆಗುತ್ತಿದ್ದಂತೆ ಬಸ್ ಚಾಲಕ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಹಗರಿಬೊಮ್ಮನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | Loan App torture : ಲೋನ್‌ ಆ್ಯಪ್ ಹಿಂಸೆಗೆ ತತ್ತರಿಸಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಆತ್ಮಹತ್ಯೆ

ಟ್ರ್ಯಾಕ್ಟರ್ ಹರಿದು ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಮಂಡ್ಯ: ಕಬ್ಬು ತುಂಬಿದ ಟ್ರ್ಯಾಕ್ಟರ್ ಹರಿದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಡ್ಯ ತಾಲೂಕಿನ ಹೊಸಹಳ್ಳಿ ‌ಗೇಟ್ ಬಳಿ ನಡೆದಿದೆ. ಬಸವರಾಜ್ (40) ಮೃತರು. ಮಂಡ್ಯದಲ್ಲಿ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಬಸವರಾಜು, ಮಂಡ್ಯದಿಂದ ಶಿವಳ್ಳಿಗೆ ಹೋಗುವಾಗ ಅಪಘಾತ ನಡೆದಿದೆ.

Exit mobile version