Site icon Vistara News

Road accident | ಪಾದಚಾರಿಗೆ ಡಿಕ್ಕಿಯಾಗಿ ರಸ್ತೆಯಲ್ಲೇ ಸ್ಕಿಡ್‌ ಆಗಿ ಬಿದ್ದು ಪ್ರಾಣ ಕಳೆದುಕೊಂಡ ಬೈಕ್‌ ಸವಾರ

Hubballi accident

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ (Road accident) ಬೈಕ್ ಸವಾರ ಶ್ರೀಕಾಂತ ನಿಂಬಾಳ್ಕರ್ (37) ಮೃತಪಟ್ಟಿದ್ದಾರೆ.

ಪಶುಸಂಗೋಪನಾ ಇಲಾಖೆಯ ನೌಕರನಾಗಿದ್ದ ಶ್ರೀಕಾಂತ ಅವರು ಬೈಕ್‌ನಲ್ಲಿ ಸಾಗುತ್ತಿದ್ದಾಗ ಪಾದಚಾರಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯಾದ ಬಳಿಕ ಬೈಕ್‌ ರಸ್ತೆಯಲ್ಲಿ ಸ್ಕಿಡ್‌ ಆಗಿ ಉರುಳಿದೆ.

ಸ್ಕಿಡ್‌ ಆಗಿ ರಸ್ತೆಗೆ ಬಿದ್ದ ಬೈಕ್‌ ಮತ್ತು ಶ್ರೀಕಾಂತ್‌ (ಸಿಸಿ ಟಿವಿ ದೃಶ್ಯ)

ಇದರಿಂದ ಶ್ರೀಕಾಂತ್‌ ಅವರ ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವ ಆಗಿತ್ತು. ಅವರನ್ನು ಕೂಡಲೇ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅಲ್ಲಿ ಚಿಕಿತ್ಸೆ ಫಲಿಸದೆ ಅವರು ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್‌ಗಳ ಡಿಕ್ಕಿ: ಒಬ್ಬ ಸಾವು
ಬಳ್ಳಾರಿ: ಸೋಮವಾರ ಬೆಳಗ್ಗಿನ ಜಾವ ಆಂಧ್ರಪ್ರದೇಶ ಗಡಿಭಾಗದ ಹೀರೆಹಾಳ್ ಗ್ರಾಮದ ಬಳಿ ಕರ್ನಾಟಕ ಸಾರಿಗೆ ಸಂಸ್ಥೆಯ ಎರಡು ಬಸ್ಸುಗಳ ನಡುವೆ ಅಪಘಾತ ಸಂಭವಿಸಿದ್ದು, ಒಬ್ಬರು ಮೃತಪಟ್ಟಿದ್ದಾರೆ.

ರಸ್ತೆ ಉಬ್ಬಿನಲ್ಲಿ ಮುಂದಿನ ಬಸ್ಸು ನಿಧಾನಿಸಿದಾಗ ಹಿಂಬದಿಯಿಂದ ಬಂದ ಮತ್ತೊಂದು ಬಸ್ ಡಿಕ್ಕಿಯಾಗಿದೆ. ಮುಂದಿನ ಬಸ್ಸಿನ ಜತೆಗೆ ರೋಡ್ ಡಿವೈಡರ್‌ಗೂ ಬಸ್ಸು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಒಬ್ಬರು ಮೃತಪಟ್ಟಿದ್ದು, ನಾಲ್ಕೈದು ಜನರಿಗೆ ಗಾಯಗಳಾಗಿವೆ. ಗಾಯಾಳುಗಳ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ‌

ಇದನ್ನೂ ಓದಿ | Road Accident | ಸ್ವಿಫ್ಟ್, ಇನ್ನೋವಾ ನಡುವೆ ಭೀಕರ ಅಪಘಾತ; ಐವರ ಸಾವು

Exit mobile version