Site icon Vistara News

Bike Stunt: ಬೆಂಗಳೂರಲ್ಲಿ ಪ್ರೇಮಿಗಳ ಜಾಲಿ ರೈಡ್; ಬೈಕ್ ಟ್ಯಾಂಕ್‌ ಮೇಲೆ ಯುವತಿ ಕೂರಿಸಿಕೊಂಡು ರೊಮ್ಯಾನ್ಸ್!

Bike Stunt

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್‌ ಹಾಕುವ ಸಲುವಾಗಿ ಯುವಕರು ಬೈಕ್‌ ವ್ಹೀಲಿಂಗ್‌, ಸ್ಟಂಟ್‌ ಮಾಡುವ ಪ್ರಕರಣಗಳು (Bike Stunt) ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. ಇದರಿಂದ ರಸ್ತೆಯಲ್ಲಿ ಹೋಗುವ ಇತರ ಸವಾರರಿಗೂ ಕಿರಿಕಿರಿ ಉಂಟಾಗುವುದನ್ನು ಕಾಣುತ್ತಿರುತ್ತೇವೆ. ಈ ನಡುವೆ ಪ್ರೇಮಿಗಳಿಬ್ಬರು ಜಾಲಿ ರೈಡ್ ಮಾಡಿರುವ ಘಟನೆಯೊಂದು ರಾಜಧಾನಿಯಲ್ಲಿ ನಡೆದಿದ್ದು, ಬೈಕ್ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿಕೊಂಡು ಯುವಕ ಬೈಕ್‌ ಚಲಾಯಿಸಿದ್ದಾನೆ. ಸದ್ಯ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಯಲಹಂಕ ಸಂಚಾರಿ ಠಾಣಾ ವ್ಯಾಪ್ತಿಯ ರೇವಾ ಕಾಲೇಜು ಕ್ಯಾಂಪಸ್ ರಸ್ತೆಯಲ್ಲಿ ಘಟನೆ ನಡೆದಿದೆ. ಪ್ರೇಮಿಗಳಿಬ್ಬರ ಜಾಲಿರೈಡ್‌ ಅನ್ನು ಹಿಂದೆ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಹೆಬ್ಬಾಳ ಫ್ಲೈ ಓವರ್‌ ಮೇಲೆ ಯುವಕನೊಬ್ಬ ಬೈಕ್ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿ ಕೂರಿಸಿ ಜಾಲಿ ರೈಡ್ ಮಾಡಿದ್ದ. ನಂತರ ಯುವಕನನ್ನು ಹೆಬ್ಬಾಳ ಸಂಚಾರಿ ಪೊಲೀಸರು ಬಂಧಿಸಿದ್ದರು. ಈ ಘಟನೆ ನಂತರವು ಎಚ್ಚೆತ್ತುಕೊಳ್ಳದೇ ಯುವ ಜೋಡಿಯೊಂದು ಇದೀಗ ಜಾಲಿ ರೈಡ್ ಮಾಡಿರುವುದು ಕಂಡುಬಂದಿದೆ. ಹೀಗಾಗಿ ಇಂತಹವರ ವಿರುದ್ಧ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

https://vistaranews.com/wp-content/uploads/2024/08/WhatsApp-Video-2024-08-24-at-16.04.49.mp4

ಇದನ್ನೂ ಓದಿ | Face Serum: ಚರ್ಮಕ್ಕೆ ಹೊಂದುವಂಥ ʻಫೇಸ್‌ ಸೀರಂʼ ಆಯ್ಕೆ ಮಾಡುವುದು ಹೇಗೆ?

ಹೆಂಡ್ತಿ ತವರಿಗೆ ಹೋಗ್ತಿದ್ದಂತೆ ಪ್ರೇಯಸಿ ಜೊತೆ ಲವ್ವಿಡವ್ವಿ- ಸ್ಕೂಲ್‌ ಮೇಸ್ಟ್ರನ್ನು ರೆಡ್‌ಹ್ಯಾಂಡಾಗಿ ಹಿಡಿದು ಅಲ್ಲೇ ಮದ್ವೆ

ಪಾಟ್ನಾ: ಶಾಲೆ ಶುರುವಾಗಿ ಗಂಟೆಗಳು ಕಳೆದರೂ ತರಗತಿ ನಡೆಸಬೇಕಾಗಿದ್ದ ಶಿಕ್ಷಕ ಬಂದೇ ಇರಲಿಲ್ಲ. ಇತರ ಶಿಕ್ಷಕರು ಮಕ್ಕಳನ್ನು ವಿಚಾರಿಸಿದಾಗ ಶಿಕ್ಷಕನನ್ನು ಊರಿನ ಜನರೆಲ್ಲಾ ಸೇರಿಕೊಂಡು ಮರಕ್ಕೆ ಕಟ್ಟಿ ಹಾಕಿರುವ ಬಗ್ಗೆ ವಿದ್ಯಾರ್ಥಿಯೊಬ್ಬ ಬಾಯ್ಬಿಟ್ಟಿದ್ದಾನೆ. ಏನಾಯ್ತಪ್ಪಾ ಅಂತಾ ಸ್ಥಳಕ್ಕೆ ಓಡೋಡಿ ಬಂದವರಿಗೆ ಶಾಕ್‌ ಕಾದಿತ್ತು. ಹೆಂಡ್ತಿ ತವರಿಗೆ ಹೋದ ಕೂಡಲೇ ಇತ್ತ ಪ್ರೇಯಸಿ ಜೊತೆ ಮಜಾ ಮಾಡಿ ಸಿಕ್ಕಿಬಿದ್ದಿದ್ದ ಶಿಕ್ಷಕನನ್ನು ಗ್ರಾಮಸ್ಥರು ರೆಡ್‌ ಹ್ಯಾಂಡಾಗಿ ಹಿಡಿದು ಮರಕ್ಕೆ ಕಟ್ಟಿ ಹಾಕಿದ್ದಾರೆ. ಅಷ್ಟೇ ಅಲ್ಲದೇ ಆ ಯುವತಿ ಜೊತೆಗೆ ಮದ್ವೆ ಮಾಡಿಸಿದ್ದಾರೆ. ಈ ವಿಚಿತ್ರ ಘಟನೆ(Viral News) ನಡೆದಿರುವುದು ಬಿಹಾರ(Bihar)ದ ಪುರ್ನಿಯಾದಲ್ಲಿ.

ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪರೋರ ಪಂಚಾಯತ್‌ನ ಬೆಲ್‌ಘಟ್ಟಿ ಬುಡಕಟ್ಟು ಕುಗ್ರಾಮದಲ್ಲಿ ಈ ಘಟನೆ ನಡೆದಿದೆ. ಸ್ಥಳೀಯರ ಪ್ರಕಾರ, ಜುನ್ನಿ ಇಸ್ತಂಬ್ರಾರ್ ಪಂಚಾಯತ್‌ನ ಬೇಗಂಪುರದ ಸರ್ಕಾರಿ ಶಾಲೆಯ ಶಿಕ್ಷಕ ಶೇಖರ್ ಪಾಸ್ವಾನ್ ಅಲಿಯಾಸ್ ರಾಜೇಶ್ ಕುಮಾರ್ ಗ್ರಾಮದ ಬುಡಕಟ್ಟು ಹುಡುಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಎರಡು ದಿನಗಳ ಹಿಂದೆ ಶಿಕ್ಷಕ ರಾಜೇಶ್ ಕುಮಾರ್ ಈ ಹುಡುಗಿಯ ಜೊತೆ ಮೋಜಿನಲ್ಲಿ ತೊಡಗಿದ್ದ ವೇಳೆ ಗ್ರಾಮಸ್ಥರ ಕೈಗೆ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದಿದ್ದ.

ಇದಾದ ಬಳಿಕ ಗ್ರಾಮಸ್ಥರು ಅದೇ ಸ್ಥಿತಿಯಲ್ಲಿ ಆತನನ್ನು ಮರಕ್ಕೆ ಕಟ್ಟಿ ಹಾಕಿ ಹುಡುಗಿಯ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಶಿಕ್ಷಕನ ಮನೆಯವರು ಸ್ಥಳಕ್ಕಾಗಮಿಸಿದಾಗ ಗ್ರಾಮಸ್ಥರು ಆತನಿಗೆ ಬಾಲಕಿಯೊಂದಿಗೆ ಮದುವೆ ಮಾಡಿಸಿದ್ದರು. ಮಾಹಿತಿ ಪಡೆದ ಪೊಲೀಸರು ಕೂಡ ಸ್ಥಳಕ್ಕಾಗಮಿಸಿ ಬಾಲಕಿಯನ್ನು ಶಿಕ್ಷಕ ಹಾಗೂ ಸಂಬಂಧಪಟ್ಟವರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಆದರೆ, ಈ ಅವಧಿಯಲ್ಲಿ ಯಾರ ವಿರುದ್ಧವೂ ದೂರು ನೀಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸರು ಆತನನ್ನು ಆತನ ಮನೆಗೆ ಕಳುಹಿಸಿದ್ದಾರೆ. ಗ್ರಾಮಸ್ಥರು ಹೇಳುವ ಪ್ರಕಾರ ಶಿಕ್ಷಕ ರಾಜೇಶ್ ಕುಡಿತದ ಚಟ ಹೊಂದಿದ್ದ ಎನ್ನಲಾಗಿದೆ.

ಇದನ್ನೂ ಓದಿ: Viral Video: ಬೇಟೆಯಾಡಲು ಗೋಡೆ ಹತ್ತಿದ ದೈತ್ಯ ಹೆಬ್ಬಾವು; ಗಾಬರಿಗೊಳಿಸುವ ವಿಡಿಯೊ

ಶಿಕ್ಷಕ ತನ್ನ ಸಹೋದರಿಯೊಂದಿಗೆ ಸುಮಾರು 7 ವರ್ಷಗಳಿಂದ ಸಂಪರ್ಕದಲ್ಲಿದ್ದಾರೆ ಎಂದು ಯುವತಿಯ ಸಹೋದರಿ ಹೇಳಿದ್ದಾರೆ. ಇತ್ತ, ತಂದೆ-ತಾಯಿಯ ಮನೆಯಿಂದ ಪತ್ನಿ ವಾಪಸಾದ ಬಳಿಕ ಶಿಕ್ಷಕನ ಮದುವೆ ಸುದ್ದಿ ಸಂಚಲನ ಮೂಡಿಸಿದೆ. ಅಣ್ಣನಿಗೆ ರಾಖಿ ಕಟ್ಟಲು ಹೋಗಿದ್ದೆ. ಅಷ್ಟರಲ್ಲಿ ವಂಚಕ ಪತಿ ಈ ಕೃತ್ಯ ಎಸಗಿದ್ದಾನೆ. ಶಿಕ್ಷಕನ ತಂದೆ ವೈದ್ಯನಾಥ ಪಾಸ್ವಾನ್, ಮಗನಿಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಆತನ ಎರಡನೇ ಮದುವೆಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಅಲ್ಲದೇ ಬುಡಕಟ್ಟು ಜನರಿಗೆ ವಾಮಾಚಾರದ ಬಗ್ಗೆ ಗೊತ್ತಿದ್ದು, ವಾಮಾಚಾರದ ಮೂಲಕ ಮಗನನ್ನು ಬಲೆಗೆ ಬೀಳಿಸಿರುವುದು ಖಚಿತ ಎಂದು ಹೇಳಿದ್ದಾರೆ.

Exit mobile version