Site icon Vistara News

Birthday Celebration | ರಾಮನಗರ ಜೈಲಿನಲ್ಲಿ ಹುಟ್ಟುಹಬ್ಬ ಆಚರಣೆ; ಐವರು ಕೈದಿಗಳ ವಿರುದ್ಧ ಎಫ್‌ಐಆರ್‌

Birthday Celebration

ರಾಮನಗರ: ಜಿಲ್ಲಾ ಕಾರಾಗೃಹದಲ್ಲಿ ಹುಟ್ಟುಹಬ್ಬ ಆಚರಣೆ (Birthday Celebration) ಹಾಗೂ ಅನಧಿಕೃತವಾಗಿ ಮೊಬೈಲ್‌ ಬಳಕೆ ಪ್ರಕರಣದಲ್ಲಿ ಐವರು ವಿಚಾರಣಾಧೀನ ಕೈದಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.

‌ಕೊಲೆ ಪ್ರಕರಣ ಹಾಗೂ ಡಕಾಯಿತಿ ಪ್ರಕರಣದಲ್ಲಿ ಬಂಧನವಾಗಿರುವ ರೌಡಿಶೀಟರ್ ಕಿರಣ್ ಅಲಿಯಾಸ್ ತಮಟೆ ಎಂಬಾತನ ಹುಟ್ಟುಹಬ್ಬವನ್ನು ಜ.೧೪ರಂದು ಆಚರಿಸಲಾಗಿತ್ತು. ಜೈಲಿನೊಳಗೇ ಇದ್ದುಕೊಂಡು ಹುಟ್ಟಹಬ್ಬ ಆಚರಣೆ ಮಾಡಿದ್ದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಕೈದಿಗಳು ಫೋಟೊಗಳನ್ನು ಶೇರ್‌ ಮಾಡಿದ್ದರು. ಇದು ವೈರಲ್ ಆಗಿದ್ದರಿಂದ ಜಿಲ್ಲಾ ಕಾರಾಗೃಹಕ್ಕೆ ರಾಮನಗರ ಎಸ್‌ಪಿ ಸಂತೋಷ್ ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಕೈದಿಗಳಿಂದ ಎರಡು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು.

ಬಳಿಕ ನಿರ್ಲಕ್ಷ್ಯ ವಹಿಸಿರುವ ಜೈಲು ಸಿಬ್ಬಂದಿ ವಿರುದ್ಧ ಕ್ರಮವಹಿಸಲು ಎಡಿಜಿಪಿಗೆ ಎಸ್ಪಿ ಸಂತೋಷ್ ಬಾಬು ವರದಿ ಸಲ್ಲಿಸಿದ್ದರು. ಇದರ ಭಾಗವಾಗಿ ಐವರು ಕೈದಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಜೈಲು ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಅಕ್ರೋಶ
ಪ್ರಕರಣದ ಬಗ್ಗೆ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ. ಜೈಲಿನೊಳಗೆ ಹುಟ್ಟುಹಬ್ಬದಂತಹ ಕಾರ್ಯಕ್ರಮಗಳನ್ನು ಕೈದಿಗಳು ಹೇಗೆ ಮಾಡುತ್ತಾರೆ?, ಅವರಿಗೆ ಕೇಕ್, ಹಾರ ತುರಾಯಿ ಯಾರೂ ತಂದು ಕೊಡುತ್ತಾರೆ, ಕೈದಿಗಳಿಗೆ ಮೊಬೈಲ್‌ ಹೇಗೆ ಸಿಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ, ಕೈದಿಗಳಿಗೆ ಸಹಕಾರ ನೀಡುವ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದರು.

ಇದನ್ನೂ ಓದಿ | Bande seer death: ಬಂಡೆಮಠ ಶ್ರೀ ಆತ್ಮಹತ್ಯೆ ಪ್ರಕರಣದ ಮೊದಲ ಆರೋಪಿ ಕಣ್ಣೂರು ಶ್ರೀ ಬಿಡುಗಡೆ; ಸೇಬಿನ ಹಾರ ಹಾಕಿ ಸ್ವಾಗತ

Exit mobile version