Site icon Vistara News

ವಿಸ್ತಾರ TOP 10 NEWS | ಬಿಜೆಪಿಗೆ ಹಳೆ ಮೈಸೂರು ಗೆಲ್ಲುವ ಗುರಿ, ಹೊಸ ವರ್ಷಕ್ಕೆ ಸಂಭ್ರಮದ ಗರಿ ಮತ್ತಿತರ ಪ್ರಮುಖ ಸುದ್ದಿಗಳಿವು

top 10 news

1. Amit Shah | ದಕ್ಷಿಣದಲ್ಲಿ ಅಮಿತ್ ಶಾ ಟಾರ್ಗೆಟ್ ಜೆಡಿಎಸ್; ದಳಕ್ಕೆ ವೋಟು ಹಾಕಿದರೆ ಕಾಂಗ್ರೆಸ್​ಗೆ ವೋಟ್ ಹಾಕಿದ ಹಾಗೆ ಎಂದ ಶಾ
ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು. ಜೆಡಿಎಸ್‌ಗೆ ಮತ ನೀಡುವುದು ಎಂದರೆ, ಕಾಂಗ್ರೆಸ್‌‌ಗೆ ವೋಟ್ ಮಾಡಿದಂತೆ. ಚುನಾವಣೆ ವೇಳೆ ಕಚ್ಚಾಡುವ ಕಾಂಗ್ರೆಸ್-ಜೆಡಿಎಸ್ ಫಲಿತಾಂಶದ ಬಳಿಕ ಒಂದಾಗುತ್ತವೆ. ಹಾಗಾಗಿ, ಬೆಂಗಳೂರು ಮತ್ತು ಕರ್ನಾಟಕ ಮತದಾರರು ಅಸ್ಥಿರತೆಗೆ ಅವಕಾಶವನ್ನು ನೀಡಬಾರದು. ಈ ಬಾರಿ ಬಿಜೆಪಿಗೆ ಪೂರ್ಣ ಮತ್ತು ಸ್ಪಷ್ಟ ಬಹುಮತವನ್ನು ನೀಡಬೇಕು. ಆ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು. ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದು, ಜಾತಿವಾದ, ಪರಿವಾರವಾದ ಮತ್ತು ಭ್ರಷ್ಟಾಚಾರಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ
ಬಿಜೆಪಿಗೆ ಮತ ನೀಡಲು ಕರ್ನಾಟಕ ಜನ ಸಿದ್ಧರಾಗಿದ್ದಾರೆ: ಅಮಿತ್ ಶಾ
ಕುಟುಂಬ ರಾಜಕಾರಣ ಮೇಲೆ ಜೋಶಿ ಟಾರ್ಗೆಟ್
ಬಿಜೆಪಿ ಭಾರತ್ ಮಾತಾಕೀ ಜೈ, ಕಾಂಗ್ರೆಸ್ ಸೋನಿಯಾ ಮಾತಾಕಿ ಜೈ ಎಂದ ಬೊಮ್ಮಾಯಿ
ಹಳೆ ಮೈಸೂರು ಭಾಗ ಗೆಲ್ಲಲು ಬಿಜೆಪಿ ನಾಯಕರಿಗೆ 30 ಪ್ಲಸ್ ಟಾರ್ಗೆಟ್

2. Spirit of India | ಕೇಸರಿ ರಂಗೇ ಏಕೆ ಟೇಕ್‌ ಇಟ್‌ ಈಸಿ?
“ಕೇಸರಿ ಬಣ್ಣವೇ ಏಕೆ ಟೇಕ್ ಇಟ್ ಈಸಿ? ಬೇರೆ ಬಣ್ಣ ಯಾಕಿಲ್ಲ?” ಇದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮೊನಚಿನ ಪ್ರಶ್ನೆ. ಸ್ಪಿರಿಟ್ ಆಫ್ ಇಂಡಿಯಾದ (Spirit of India) ಸರಣಿ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ಇಂದು ಸಿನಿಮಾಗಳಲ್ಲಿ ಕೇಸರಿ ಬಣ್ಣವನ್ನು ಕೀಳಾಗಿ, ಅನವಶ್ಯಕವಾಗಿ ಎಳೆದು ತರುತ್ತಿರುವುದರ ಬಗ್ಗೆ ತೀವ್ರ ಆಕ್ರೋಶ ಹಾಗೂ ಅಸಮಾಧಾನವನ್ನು ಹೊರಹಾಕಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. New Year 2023 | ಜಗತ್ತಿನಾದ್ಯಂತ ಹೊಸ ವರ್ಷದ ಸಂಭ್ರಮ, ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದ ಜನ
ಹೊಸ ಸಂವತ್ಸರವನ್ನು (New Year 2023) ಸಂಭ್ರಮದಿಂದ ಸ್ವಾಗತಿಸಲಾಗುತ್ತಿದೆ. ಪಟಾಕಿ ಸಿಡಿಸಿ, ಲೇಸರ್‌ ಶೋ ಆಯೋಜಿಸಿ, ಡಾನ್ಸ್‌, ಹಾಡು, ಪಾರ್ಟಿ ಮಾಡಿ ಹೊಸ ವರ್ಷದ ಕ್ಷಣವನ್ನು ಜನ ಅನುಭವಿಸುತ್ತಿದ್ದಾರೆ. ಆಯಾ ದೇಶಗಳ ಕಾಲಮಾನದ ಪ್ರಕಾರ, ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ದೇಶದಲ್ಲಿ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತಿದೆ. ಈಗಾಗಲೇ ಪೆಸಿಫಿಕ್‌ ದ್ವೀಪ ರಾಷ್ಟ್ರಗಳಾದ ಟೊಂಗ, ಸಮೋವಾದಲ್ಲಿ ಹೊಸ ವರ್ಷವನ್ನು ಜನ ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Rishabh pant| ರಿಷಬ್ ಅಪಘಾತಕ್ಕೆ ರಸ್ತೆ ಗುಂಡಿ ಕಾರಣ? ಅಪಾಯದಿಂದ ಪಾರು ಎಂದ ವೈದ್ಯರು
ಭಾರತ ಕ್ರಿಕೆಟ್​ ತಂಡದ ವಿಕೆಟ್​ಕೀಪರ್​ ಬ್ಯಾಟರ್​ ರಿಷಭ್​ ಪಂತ್ (Rishabh Pant)​ ಅವರ ಕಾರು ಅಪಘಾತಕ್ಕೆ ಒಳಗಾಗಲು ಕಳಪೆ ರಸ್ತೆಯೇ ಕಾರಣ ಎಂಬುದಾಗಿ ಸ್ಥಳೀಯರೊಬ್ಬರು ಹೇಳಿದ್ದಾರೆ. ರಸ್ತೆಯಲ್ಲಿ ಗುಂಡಿಯಿದ್ದು ಅದನ್ನು ತಪ್ಪಿಸಲು ಹೋದ ಪಂತ್​, ನಿಯಂತ್ರಣಕ್ಕೆ ಸಿಗದೇ ಡಿವೈಡರ್​ಗೆ ಗುದ್ದಿದ್ದಾರೆ ಎಂದು ಹೇಳಿದ್ದಾರೆ. ಈ ಕುರಿತು ಸಂಪೂರ್ಣ ವಿವರಕ್ಕಾಗಿ ಇಲ್ಲಿ ಕ್ಲಿಕ್‌ ಮಾಡಿ.‌

5. ವಿಸ್ತಾರ ಅಂಕಣ | ಹಾಲಿವುಡ್ ನಮ್ಮ ಕಡೆ ನೋಡುತ್ತಿದೆ, ಬಾಲಿವುಡ್ ಎತ್ತ ಸಾಗುತ್ತಿದೆ?
ಜೇಮ್ಸ್ ಕೆಮರೂನ್ ನಿರ್ದೇಶನದ ‘ಅವತಾರ್’ ಸಿನಿಮಾದ ಎರಡನೇ ಸರಣಿ ಬಿಡುಗಡೆಯಾಗಿದೆ. ಚಿಕ್ಕವರು- ದೊಡ್ಡವರೆಂಬ ಭೇದವಿಲ್ಲದೆ, ತೆರೆಯ ಮೇಲಿನ ಮಾಯಾ ಜಗತ್ತನ್ನು ಎಲ್ಲರೂ ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ವಿದೇಶದಲ್ಲಷ್ಟೆ ಅಲ್ಲದೆ ಭಾರತದಲ್ಲೂ ಅವತಾರ್ ಸಿನಿಮಾ ವೀಕ್ಷಕರು ಕಡಿಮೆ ಇಲ್ಲ. ಅದಕ್ಕಾಗಿಯೇ ಕನ್ನಡ ಸೇರಿ ಅನೇಕ ಭಾರತೀಯ ಭಾಷೆಗಳಿಗೂ ಸಿನಿಮಾ ಡಬ್ ಮಾಡಲಾಗಿದೆ. ಇದರಲ್ಲಿ ಅತ್ಯುತ್ತಮವಾದ ಸಾಮಾಜಿಕ, ಆಧ್ಯಾತ್ಮಿಕ ಸಂದೇಶಗಳು ಅಡಗಿವೆ. ಈ ಹಾಲಿವುಡ್ ಸಿನಿಮಾದ ಹೆಸರು ಅವತಾರ ಎಂಬುದೇ ಭಾರತೀಯ ಮೂಲದ್ದು. ಇಲ್ಲಿಂದಲೇ ಹೆಸರನ್ನು ಎರವಲು ಪಡೆಯಲಾಗಿದೆ. ಪೂರ್ಣ ಅಂಕಣ ಓದಲು ಇಲ್ಲಿ ಕ್ಲಿಕ್​ ಮಾಡಿ

6. CJI DY Chandrachud | ವಕೀಲರ ಅಲಭ್ಯತೆಯಿಂದ 63 ಲಕ್ಷ ಕೇಸ್ ಪೆಂಡಿಂಗ್: ಸಿಜೆಐ ಚಂದ್ರಚೂಡ
ವಕೀಲರ ಅಲಭ್ಯತೆಯಿಂದಾಗಿ ದೇಶದಲ್ಲಿ 63 ಲಕ್ಷಕ್ಕೂ ಅಧಿಕ ಕೇಸ್‌ಗಳು ಪೆಂಡಿಂಗ್‌ನಲ್ಲಿದ್ದರೆ, 14 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾತಿಗಳು ಅಥವಾ ಕಾಗದ ಪತ್ರಗಳು ದೊರೆಯದ್ದರಿಂದ ವಿಚಾರಣೆಗೆ ವಿಳಂಬವಾಗುತ್ತಿವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ (CJI DY Chandrachud) ಅವರು ಹೇಳಿದ್ದಾರೆ.
ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7.Union cabinet reshuffle | ಹೊಸ ವರ್ಷ ಕೇಂದ್ರ ಸಚಿವ ಸಂಪುಟ ಪುನಾರಚನೆ ನಿರೀಕ್ಷೆ, ಕರ್ನಾಟಕಕ್ಕೆ ಸಿಗಲಿದೆಯೇ ಆದ್ಯತೆ?
ಮುಂಬರುವ ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದ ಶೀಘ್ರದಲ್ಲಿಯ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗುವ (Union cabinet reshuffle ) ನಿರೀಕ್ಷೆ ಇದೆ. ಮುಂಬರುವ ಲೋಕಸಭಾ ಹಾಗೂ ವಿವಿಧ ರಾಜ್ಯದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆಗೆ ಕೇಂದ್ರ ಸರ್ಕಾರದ ಪ್ಲಾನ್ ಮಾಡಿದೆ ಎಂದು ಮೂಲಗಳು ತಿಳಿಸಿವೆ. ರಾಜಕೀಯ ಲೆಕ್ಕಾಚಾರದಂತೆ, ಚುನಾವಣಾ ರಾಜ್ಯಗಳಿಗೆ ಆದ್ಯತೆ ಸಿಗುವ ಸಾಧ್ಯತೆ ಇದೆ. ಸಂಪುಟ ಪುನಾರಚನೆ ಬಗ್ಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ. . ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Amul-KMF | ಅಮುಲ್‌-ಕೆಎಂಎಫ್‌ ವಿಲೀನ ಬೇಡ: ಶಾಸಕ ಡಿ.ಸಿ. ತಮ್ಮಣ್ಣ ವಿರೋಧ
ಗುಜರಾತ್‌ನ ಅಮುಲ್‌ ಡೇರಿ ಮತ್ತು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ವಿಲೀನ ಕುರಿತ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಶಾ (Amit Shah) ಅವರ ಹೇಳಿಕೆಗೆ ಮದ್ದೂರು ಶಾಸಕ ಡಿ.ಸಿ. ತಮ್ಮಣ್ಣ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ ಅಧೀನದಲ್ಲಿರುವ ಕೆಎಂಎಫ್ ಅನ್ನು ಕೇಂದ್ರ ಸರ್ಕಾರ ವಶಕ್ಕೆ ಪಡೆಯಲು ನಿರ್ಧರಿಸಿದಂತಿದೆ. ಅಮಿತ್‌ ಶಾ ಅವರು ಪರೋಕ್ಷವಾಗಿ ಈ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಈ ರೀತಿ ಆಗಬಾರದು ಎಂದು ಆಗ್ರಹಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.‌

9. Cristiano Ronaldo | ಅಧಿಕೃತವಾಗಿ ಅಲ್‌ ನಾಸರ್‌ ಕ್ಲಬ್ ಸೇರಿದ ಕ್ರಿಸ್ಟಿಯಾನೊ ರೊನಾಲ್ಡೊ!
ಪೋರ್ಚ್‌ಗಲ್ ತಂಡ ಸ್ಟಾರ್​ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo) ಕೊನೆಗೂ ಸೌದಿ ಅರೇಬಿಯಾದ ಅಲ್‌ ನಾಸರ್‌ ಕ್ಲಬ್ ಪರ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಅವರು ಈ ಕ್ಲಬ್​ ಪರ ಆಡಲಿದ್ದಾರೆ. ರೊನಾಲ್ಡೊ ಜತೆ ಒಪ್ಪಂದ ಮಾಡಿದ ವಿಚಾರವನ್ನು ಅಲ್‌ ನಾಸರ್‌ ಕ್ಲಬ್ ಶುಕ್ರವಾರ ತಡರಾತ್ರಿ ಅಧಿಕೃತಗೊಳಿಸಿದೆ. ಮ್ಯಾಂಚೆಸ್ಟರ್ ಯುನೈಟೆಡ್ ತಂಡ ತೊರೆದಿದ್ದ ಬಳಿಕ ರೊನಾಲ್ಡೊ ಅಲ್‌ ನಾಸರ್‌ ಪರ ಆಡುತ್ತಾರೆ ಎಂದು ಸುದ್ದಿಯಾಗಿದ್ದರೂ ಅಧಿಕೃತಗೊಂಡಿರಲಿಲ್ಲ. ಇದೀಗ ಅಧಿಕೃತಗೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Year End 2022 | ಕಾಶ್ಮೀರದಾದ್ಯಂತ 2022ರಲ್ಲಿ 172 ಉಗ್ರರ ಹತ್ಯೆ, ಪಂಡಿತರು ಸೇರಿ 29 ನಾಗರಿಕರ ಬಲಿ
ಕೆಲವೇ ಗಂಟೆಗಳಲ್ಲಿ ಜಗತ್ತು ಹೊಸ ವರ್ಷಕ್ಕೆ (Year End 2022) ಕಾಲಿಡಲಿದೆ. ಇಂತಹ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯು 2022ರಲ್ಲಿ ಜಮ್ಮು-ಕಾಶ್ಮೀರದಾದ್ಯಂತ ಕಾರ್ಯಾಚರಣೆ ಕೈಗೊಂಡು ಉಗ್ರರನ್ನು ಹತ್ಯೆ ಮಾಡಿರುವ ಕುರಿತು ಮಾಹಿತಿ ನೀಡಿದ್ದಾರೆ. ಅಲ್ಲದೆ, ಉಗ್ರರನ್ನು ಹೊಡೆದುರುಳಿಸುವ ವಿಚಾರದಲ್ಲಿ 2022 ಯಶಸ್ವಿ ವರ್ಷ ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version