Site icon Vistara News

Karnataka Election 2023: ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರ: ಜನಮನ ಗೆಲ್ಲುತ್ತಿದ್ದಾರೆ ಬಿಜೆಪಿ ಅಭ್ಯರ್ಥಿ ಡಾ. ಕ್ರಾಂತಿಕಿರಣ

BJP candidate Dr. Krantikiran master plan for development of Hubballi-Dharwad East constituency Karnataka Election 2023 updates

ಹುಬ್ಬಳ್ಳಿ: ಈ ಬಾರಿ ಚುನಾವಣೆಯ (Karnataka Election 2023) ಹುಬ್ಬಳ್ಳಿ- ಧಾರವಾಡ ಪೂರ್ವ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಕಣವಾಗಿ ಗಮನ ಸೆಳೆಯುತ್ತಿದೆ. ಹುಬ್ಬಳ್ಳಿ- ಧಾರವಾಡ ಪೂರ್ವ ಕ್ಷೇತ್ರದಲ್ಲಿ (Hubballi-Dharwad East constituency) ಬಿಜೆಪಿ ಅಭ್ಯರ್ಥಿಯಾಗಿ ಡಾ. ಕ್ರಾಂತಿಕಿರಣ ಅವರು ಕಣಕ್ಕಿಳಿದಿದ್ದು, ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡುವ ಕನಸನ್ನು ಹೊತ್ತಿದ್ದಾರೆ. ತಾವು ಆಯ್ಕೆ ಆಗಿ ಬಂದರೆ ಕ್ಷೇತ್ರವನ್ನು ಯಾವ ರೀತಿಯಾಗಿ ಮಾದರಿಯನ್ನಾಗಿ ಮಾಡಲಾಗುವುದು ಎಂಬ ಬಗ್ಗೆ ಅವರು ಚುನಾವಣಾ ಪ್ರಣಾಳಿಕೆಯನ್ನೂ ಹೊರತಂದಿದ್ದಾರೆ. ಈ ವೇಳೆ ಮಾತನಾಡಿದ ಅವರು, ವಾಣಿಜ್ಯ ನಗರದ ಮಾರುಕಟ್ಟೆಗಳ ಸುಧಾರಣೆಗೆ ಒತ್ತು, ಆರೋಗ್ಯ ಸುಧಾರಣೆ, ಅಪರಾಧ ರಹಿತ ವಲಯ ಸೇರಿದಂತೆ ಇನ್ನಿತರ ರೀತಿಯಲ್ಲಿ ಜನರ ಅಭ್ಯುದಯಕ್ಕೆ ಶ್ರಮಿಸುವುದಾಗಿ ಹೇಳಿಕೆ ನೀಡಿದ್ದಾರೆ.

ಈ ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹುಬ್ಬಳ್ಳಿ- ಧಾರವಾಡ ಪೂರ್ವ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಕ್ರಾಂತಿಕಿರಣ, ವಾಣಿಜ್ಯ ನಗರದ ಮಾರುಕಟ್ಟೆಗಳ ಸುಧಾರಣೆಗೆ ಒತ್ತು ನೀಡುತ್ತೇನೆ. ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರಲಿದ್ದು, ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಅಲ್ಲದೆ, ಅಪರಾಧ ರಹಿತ ವಲಯವನ್ನು ನಿರ್ಮಾಣ ಮಾಡಲು ಮೊದಲ ಆದ್ಯತೆ ಕೊಡುತ್ತೇವೆ. ಮತದಾರರ ಆಶೀರ್ವಾದದಿಂದ ಆಯ್ಕೆಯಾಗುವ ಭರವಸೆ ಇದೆ. ಜನರ ಜೀವನ ಮಟ್ಟವನ್ನು ಸುಧಾರಿಸುವ ಪಣ ತೊಟ್ಟಿದ್ದೇನೆ. ನಮಗೆ ಈ ಎಲ್ಲ ಕಾರ್ಯಗಳನ್ನು ಮಾಡಲು ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರ ಬೆಂಬಲವೂ ಬೇಕು. ಸರ್ವಧರ್ಮದ ಅಭಿವೃದ್ಧಿಯು ನಮ್ಮ ಪಕ್ಷದ ಗುರಿ ಎಂದು ಹೇಳಿದರು.

ಹುಬ್ಬಳ್ಳಿ- ಧಾರವಾಡ ಪೂರ್ವ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕ್ರಾಂತಿಕಿರಣ

ಇದನ್ನೂ ಓದಿ: Karnataka Election 2023: ಪ್ರಿಯಾಂಕ್‌ ಖರ್ಗೆಯನ್ನು ಜಿರಳೆ ಎಂದ ಈಶ್ವರಪ್ಪ; ರಾಜ್ಯ ಜನರ ಕ್ಷಮೆ ಕೇಳಲು ಆಗ್ರಹ

ಸ್ಮಾರ್ಟ್‌ಸಿಟಿ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ತರುತ್ತೇವೆ

ಹುಬ್ಬಳ್ಳಿ- ಧಾರವಾಡ ಪೂರ್ವ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳ ತೀವ್ರ ಕೊರತೆಯಿದೆ. ಕಳೆದ ಹತ್ತು ವರ್ಷಗಳಿಂದ ಇಲ್ಲಿನ ಕಾಂಗ್ರೆಸ್‌ ಶಾಸಕರು ಸಮರ್ಪಕ ಕೆಲಸ ಮಾಡಿಲ್ಲ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ಕಾಳಜಿಯಿಂದ ತಕ್ಕಮಟ್ಟಿನ ಕೆಲಸಗಳು ಕ್ಷೇತ್ರದಲ್ಲಿ ಆಗಿವೆ. ಪ್ರಲ್ಹಾದ್‌ ಜೋಶಿಯವರ ಮಾರ್ಗದರ್ಶನದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುತ್ತೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕೆಲಸ ಮಾಡುತ್ತೇವೆ ಎಂದು ವಿಸ್ತಾರ ನ್ಯೂಸ್‌ಗೆ ಡಾ. ಕ್ರಾಂತಿಕಿರಣ ತಿಳಿಸಿದರು.

ನನ್ನ ಕ್ಷೇತ್ರ ತೀರ್ಥ ಕ್ಷೇತ್ರ ಎನ್ನುವ ಪರಿಕಲ್ಪನೆಯೊಂದಿಗೆ ಕ್ಷೇತ್ರದಲ್ಲಿ ವಿಶೇಷ ಪ್ರಣಾಳಿಕೆಯನ್ನು ಘೋಷಿಸಿದ್ದೇವೆ. ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಮೂಲ ಸೌಕರ್ಯವನ್ನು ಅಭಿವೃದ್ಧಿ ಪಡಿಸುವ ಗುರಿಯಿದೆ. ಮನೆ ಮನೆಗಳಿಗೆ ತೆರಳಿ ಜನರ ಬಳಿ ನಮ್ಮ ಮುಂದಿನ ಕನಸುಗಳ ಕುರಿತು ವಿವರಿಸುತ್ತಿದ್ದೇವೆ. ಮತದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಬಿಜೆಪಿಯನ್ನು ಗೆಲ್ಲಿಸುವುದಾಗಿ ಹೇಳುತ್ತಿದ್ದಾರೆ. ಈ ಬಾರಿ ರಾಜ್ಯದಲ್ಲಿ ಬಹುಮತದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಹೆಚ್ಚು ಕೆಲಸ ಮಾಡಲು ಅನುಕೂಲವಾಗಲಿದೆ. ಇಲ್ಲಿ ಬಿಜೆಪಿ ಶಾಸಕರಿದ್ದರೆ ಅನುಕೂಲ ಎಂದು ಜನರು ಹೇಳುತ್ತಿದ್ದಾರೆ. ಹೀಗಾಗಿ ನಾನು ಗೆದ್ದೇ ಗೆಲ್ಲುತ್ತೇನೆ ಅನ್ನುವ ವಿಶ್ವಾಸವಿದೆ ಎಂದು ಡಾ. ಕ್ರಾಂತಿಕಿರಣ ತಿಳಿಸಿದರು.

ಇದನ್ನೂ ಓದಿ: Saanya Iyer: ಸಾನ್ಯಾ ಅಯ್ಯರ್‌ ಬೋಲ್ಡ್‌ ಫೋಟೊಶೂಟ್‌ಗೆ ಸಂಸ್ಕೃತಿ ನೆನಪಿಸಿದ ನೆಟ್ಟಿಗರು!

ಈ ಭರವಸೆಗಳ ಈಡೇರಿಸುತ್ತೇವೆ- ಡಾ. ಕ್ರಾಂತಿಕಿರಣ

ದಿನದ ಇಪ್ಪತ್ತನಾಲ್ಕು ತಾಸು ನೀರಿನ ವ್ಯವಸ್ಥೆ, ಒಳ ಚರಂಡಿ ನಾಲೆಗಳ ವ್ಯವಸ್ಥೆ, ಎರಡು ಬೂತ್‌ಗಳ ನಡುವೆ ಒಂದು ಸುಲಭ ಶೌಚಾಲಯ, ಸಿಟಿ ಬಸ್‌ಗಳ ವ್ಯವಸ್ಥೆ, ಬಡವರಿಗಾಗಿ ಒಂದು ಸಾವಿರ ಮನೆಗಳ ನಿರ್ಮಾಣ, ಈ ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದ್ದು, ಅವರ ಸುರಕ್ಷತೆಗಾಗಿ ಒಂದು ಪೊಲೀಸ್ ಠಾಣೆ ಸ್ಥಾಪನೆ ಮಾಡುವುದು ಹಾಗೂ ಸಿಸಿ ಕ್ಯಾಮೆರಾಗಳ ಅಳವಡಿಕೆ, ಕಸ ಮುಕ್ತ ಪ್ರದೇಶ ಮಾಡಲು ಕಸ ವಿಲೇವಾರಿ ವಾಹನಗಳ ಸಂಖ್ಯೆ ಹೆಚ್ಚಿಸುವುದು, ಗಾರ್ಡನ್ ಹಾಗೂ ಮಕ್ಕಳಿಗಾಗಿ ಆಟದ ಮೈದಾನ ನಿರ್ಮಿಸುವುದು, ಉತ್ತಮ ಆರೋಗ್ಯಕ್ಕಾಗಿ ಆರೋಗ್ಯ ಕೇಂದ್ರ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಸೆಂಟರ್‌, ಎರಡು ಪ್ರಸೂತಿ ಕೇಂದ್ರಗಳ ಸ್ಥಾಪನೆ, ಇನ್‌ಫರ್ಟಿಲಿಟಿ ಕೇಂದ್ರ, ಈಗಿರುವ ಆಸ್ಪತ್ರೆಗಳನ್ನು ಅಭಿವೃದ್ಧಿ ಪಡಿಸಿ ನಂತರ ಆಧುನಿಕರಣಗೊಳಿಸುವುದು, ಮೋಬೈಲ್ ಕ್ಲಿನಿಕ್‌ ಸಿಬ್ಬಂದಿಯನ್ನು ಹೆಚ್ಚಿಸುವುದು, ಮಾನಸಿಕ ಆರೋಗ್ಯ ಸುಧಾರಣೆಗೆ ಜನಾಭಿವೃದ್ಧಿ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು ಎಂದು ಡಾ. ಕ್ರಾಂತಿಕಿರಣ ಭರವಸೆ ನೀಡಿದರು.

ಶೈಕ್ಷಣಿಕ ಕ್ರಾಂತಿಗೆ ಮುಂದು

ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡುವ ಯೋಜನೆಯನ್ನು ಹೊಂದಿದ್ದೇನೆ. ಪಿಯುಸಿ ಸರ್ಕಾರಿ ಕಾಲೇಜಿನ ಸ್ಥಾಪನೆ, ಐ.ಟಿ.ಐ ತರಬೇತಿ ಕೇಂದ್ರ ಸ್ಥಾಪನೆ, ಡಿಗ್ರಿ ಮಹಾವಿದ್ಯಾಲಯದ ಸ್ಥಾಪನೆ, ಈಗಿರುವ ಸರ್ಕಾರಿ ಶಾಲೆಗಳನ್ನು ಸುಧಾರಿಸುವುದು, ಬಡ ವಿದ್ಯಾರ್ಥಿಗಳಿಗಾಗಿ ಸಿ.ಇ.ಟಿ, ನೀಟ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಕಡಿಮೆ ದರದಲ್ಲಿ ಕೋಚಿಂಗ್‌ ಕೇಂದ್ರವನ್ನು ಸ್ಥಾಪನೆ ಮಾಡುವುದು, ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ ಮಾಡುವುದು. ಔದ್ಯೋಗಿಕವಾಗಿ ಮುನ್ನುಗ್ಗಲು ಹಲವಾರು ಯೋಜನೆಗಳನ್ನು ತೆಗೆದುಕೊಳ್ಳುವುದು. ಅದಕ್ಕಾಗಿ ಕಬ್ಬು ಬೆಳೆಗಾರರಿಗಾಗಿ ಸಕ್ಕರೆ ಕಾರ್ಖಾನೆ, ಹೂವು ಬೆಳೆಗಳನ್ನು ಹೆಚ್ಚಿಸುವುದು ಹಾಗೂ ರಫ್ತಿಗೆ ಅನುವು ಮಾಡಿಕೊಡುವುದು, ಸಾವಯವ ಕೃಷಿಗೆ ಒತ್ತು ನೀಡುವುದು ಹಾಗೂ ಸಿರಿಧಾನ್ಯ ಬೆಳೆಯಲು ಉತ್ತೇಜಿಸುವುದು. ಸೋಲಾರ್‌ ಪಾರ್ಕ್‌, ಜವಳಿ ಪಾರ್ಕ್‌ ನಿರ್ಮಿಸಿ ಯುವಕರಿಗೆ ಉದ್ಯೋಗ ಅವಕಾಶ ಹೆಚ್ಚಿಸುವುದು. ಹೋಂ ಫುಡ್ ಇಂಡಸ್ಟ್ರಿಗೆ, ಆಟೋಮೊಬೈಲ್ ಇಂಡಸ್ಟ್ರಿ ಅಭಿವೃದ್ಧಿಯನ್ನು ಮಾಡಲಾಗುವುದು. ಈ ಮೂಲಕ ಈ ಭಾಗದ ಜನರ ಆದಾಯ ಹೆಚ್ಚಿಸಿ, ಅವರ ಜೀವನ ಗುಣಮಟ್ಟವನ್ನು ಸುದಾರಿಸುವ ಗುರಿಯನ್ನು ಹೊಂದಲಾಗಿದ್ದು, ಈ ಎಲ್ಲ ಅಂಶಗಳನ್ನು ನಮ್ಮ ಪ್ರಣಾಳಿಕೆಯು ಹೊಂದಿವೆ ಎಂದು ತಿಳಿಸಿದರು.

ಕಾಂಗ್ರೆಸ್‌ ವಿರುದ್ಧ ಡಾ. ಕ್ರಾಂತಿಕಿರಣ ವಾಗ್ದಾಳಿ; ಫುಲ್‌ ವಿಡಿಯೊ ಇಲ್ಲಿದೆ

ಈ ಸಂದರ್ಭದಲ್ಲಿ ಪ್ರಭು ನವಲಗುಂದಮಠ, ರಂಗಾ ಬದ್ದಿ, ಅಶೋಕ ಕಾಟವೆ, ಶಿವು ಮೆಣಸಿಕಾಯಿ, ಯಮನೂರಪ್ಪ ಜಾದವ, ಬಸವರಾಜ ಅಮ್ಮಿನಬಾವಿ, ಸತೀಶ ಶೇರವಾಡಕರ, ಲಕ್ಷ್ಮೀಕಾಂತ ಘೋಡಕೆ, ಗುರು ಪಾಟಿಲ, ಮಂಜುನಾಥ ನಾಗನಗೌಡ್ರ, ಭಾರತಿ ರವೀಂದ್ರ ಏಳ್ಕಾನ ರವರು ಉಪಸ್ಥಿತರಿದ್ದರು.

ಇದನ್ನೂ ಓದಿ: Karnataka Election : ಸಿದ್ದು, ಡಿಕೆಶಿ ಟಿಪ್ಪು ಸುಲ್ತಾನ್‌ ವಂಶಕ್ಕೆ ಸೇರಿದವರು ಎಂದು ದೂಷಿಸಿದ ಅಸ್ಸಾಂ ಸಿಎಂ

ಪ್ರಣಾಳಿಕೆ ಬಿಡುಗಡೆ

ಇದೇ ವೇಳೆ ಹುಬ್ಬಳ್ಳಿ- ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಜಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು. ಬಿಜೆಪಿ ಅಭ್ಯರ್ಥಿ ಡಾ. ಕ್ರಾಂತಿಕಿರಣ ಅವರಿಂದ ಪ್ರಣಾಳಿಕೆ ಬಿಡುಗಡೆಯಾಗಿದ್ದು, “ನನ್ನ ಕ್ಷೇತ್ರ ತೀರ್ಥ ಕ್ಷೇತ್ರ” ಎನ್ನುವ ಘೋಷಣೆಯೊಂದಿಗೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ.

Exit mobile version