Site icon Vistara News

Congress Vs BJP | ನರ ಹಂತಕ ಎಂದು ಮೋದಿಯ ನಿಂದನೆ, ಬಿಜೆಪಿ ನಾಯಕರ ಮೇಲೆ ಹಲ್ಲೆ ಯತ್ನ: ಶಾಸಕ ರಾಮಲಿಂಗಾ ರೆಡ್ಡಿ ಬೆಂಬಲಿಗರ ಬಂಧನಕ್ಕೆ ಆಗ್ರಹ

Anil shetty11

ಬೆಂಗಳೂರು: ಬಿಟಿಎಂ ಲೇಔಟ್‌ ಶಾಸಕರಾದ ರಾಮಲಿಂಗಾ ರೆಡ್ಡಿ ಅವರ ಹಿಂಬಾಲಕರು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ಮೇಲೆ ಹಲ್ಲೆಗೆ ಮುಂದಾಗಿದ್ದಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ನರಹಂತಕ ಎಂದು ನಿಂದಿಸಿರುವ ಬಗ್ಗೆ ಎಸ್‌.ಜಿ. ಪಾಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮವಾರ ಈ ಘಟನೆ ನಡೆದಿದ್ದು, ಪೊಲೀಸರು ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆಗೆ ಮುಂದಾಗಿದೆ.

ಬಿಜೆಪಿ ರಾಜ್ಯ ಯುವ ಮೋರ್ಚಾದ ಕೋಶಾಧ್ಯಕ್ಷರಾದ ಅನಿಲ್ ಶೆಟ್ಟಿ ಅವರ ನೇತೃತ್ವದಲ್ಲಿ ಎಸ್‌.ಜಿ. ಪಾಳ್ಯ ಪ್ರದೇಶದಲ್ಲಿ ʻದೀಪ ಬೆಳಗಿಸಿ, ಕಮಲ ಅರಳಿಸಿʼ ಅಭಿಯಾನ ನಡೆಸುತ್ತಿದ್ದರು. ಇದು ಮನೆ ಮನೆಗೆ ಹೋಗಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಕೊಡುವ ಕಾರ್ಯಕ್ರಮ.

ಅರುಣಾಚಲ ದೇವಸ್ಥಾನದ ಮುಂದೆ ಜಗಳ
ದೇವಸ್ಥಾನದ ಮುಂದೆಯೇ ಅನಿಲ್‌ ಶೆಟ್ಟಿ ಪ್ರತಿಭಟನೆ

ಹೀಗೆ ಮನೆಗಳಿಗೆ ಹೋಗಿ ಮರಳಿ ಬರುವಾಗ ಅರುಣಾಚಲ ದೇವಸ್ಥಾನದ ಬಳಿ ಅನಿಲ್ ಶೆಟ್ಟಿ ಮತ್ತು ಎಸ್ ಜಿ ಪಾಳ್ಯದ ಸ್ಥಳೀಯ ಕಾರ್ಯಕರ್ತರನ್ನು ತಡೆದ ಶಾಸಕರಾದ ರಾಮಲಿಂಗ ರೆಡ್ಡಿ ಅವರ ಹಿಂಬಾಲಕರಾದ ಕಾಂಗ್ರೆಸ್ ಮುಖಂಡರಾದ ಎಂ.ವೈ. ಲೋಕೇಶ್ ಮತ್ತು ಎಸ್‌.ಟಿ.ಡಿ ಮಂಜುನಾಥ್ ಮತ್ತು ಇನ್ನಿತರರು ಹಲ್ಲೆ ಮಾಡಿ. ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದೇವಸ್ಥಾನದ ಮುಂದೆ ಅನಿಲ್‌ ಶೆಟ್ಟಿ ಮತ್ತು ಇತರರ ಮೇಲೆ ಏರಿ ಹೋದ ಕಾಂಗ್ರೆಸ್‌ ನಾಯಕರು, ಜತೆಗೆ ನರೇಂದ್ರ ಮೋದಿ ಅವರನ್ನು ನರಹಂತಕ ಎಂದು ನಿಂದಿಸಿದ್ದಾರೆ.

ಬಿಜೆಪಿ ಬಿಟಿಎಂ ಮಂಡಲ ಅಧ್ಯಕ್ಷರಾದ ರಾಜೇಂದ್ರ ರೆಡ್ಡಿ ಅವರು, ವಾರ್ಡ್ ಅಧ್ಯಕ್ಷರಾದ ರಮೇಶ್ ರೆಡ್ಡಿ ಅವರೊಂದಿಗೆ ಕಾರ್ಯಕರ್ತರು ತೆರಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೋದಿ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿದವನನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದರು. ಆದರೆ, ಪೊಲೀಸರು ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ ಎನ್ನುವುದು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ | Karnataka Election | ಎಚ್‌.ಡಿ. ಕೋಟೆಯಲ್ಲಿ ಅಭ್ಯರ್ಥಿ ಪ್ರಕಟಿಸದ ದಳಪತಿಗಳು, ಬಿಜೆಪಿ ಕದ ತಟ್ಟಿದ ಆಕಾಂಕ್ಷಿಗಳು

Exit mobile version