Site icon Vistara News

‌BJP Manifesto: 224 ಕ್ಷೇತ್ರದ 8 ಸಾವಿರ ಸ್ಥಳಗಳಿಂದ ಬಿಜೆಪಿ ಪ್ರಣಾಳಿಕೆಗೆ ಸಲಹೆ ಸ್ವೀಕಾರ: ಸಚಿವ ಡಾ. ಕೆ. ಸುಧಾಕರ್‌

bjp-going-to-collect-suggession-from-all-constituencies-of-karnataka-for-manifesto

#image_title

ಬೆಂಗಳೂರು: ರಾಜ್ಯದ ಎಲ್ಲ 224 ವಿಧಾನಸಭೆ ಕ್ಷೇತ್ರಗಳಿಂದಲೂ 8 ಸಾವಿರ ಸಲಹೆ ಪೆಟ್ಟಿಗೆಗಳ ಮೂಲಕ ಸಾರ್ವಜನಿಕರಿಂದ ಬಿಜೆಪಿ ಪ್ರಣಾಳಿಕೆಗೆ (‌BJP Manifesto) ಅಭಿಪ್ರಾಯ ಸಂಗ್ರಹಿಸಲಾಗುತ್ತದೆ ಎಂದು ಬಿಜೆಪಿ ಚುನಾವಣಾ ಪ್ರಣಾಳಿಕೆ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಾ. ಕೆ. ಸುಧಾಕರ್‌, ಪ್ರಣಾಳಿಕೆ ಸಲಹಾ ಸಮಿತಿ ಉದ್ಘಾಟನೆ ಆಗ್ತಾಯಿದೆ. ನಾವು ಜನರಿಂದ ಸಲಹೆ ಪಡೆಯಲು ಮುಂದಾಗಿದ್ದೀವಿ. ನಮ್ಮ ಪ್ರಣಾಳಿಕೆ ಬಹಳ ನೈಜವಾಗಿ ಇರಬೇಕು.

೯ ವರ್ಷಗಳಿಂದ ಮೋದಿ ಯಾವ ರೀತಿಯ ಕೆಲಸ ಮಾಡಿದ್ದಾರೆ ಗೊತ್ತಿದೆ. ಹಾಗೇ ರಾಜ್ಯದಲ್ಲಿ ಬಿಎಸ್ವೈ ಮತ್ತು ಬೊಮ್ಮಾಯಿ ಹೇಗೆ ಕೆಲಸ ಮಾಡಿದ್ದಾರೆ, ಕೇಂದ್ರ ಮತ್ತು ರಾಜ್ಯ ಯಾವ ಕೆಲಸ ಮಾಡ್ತಾಯಿದೆ ಅನ್ನೋದು ಮುಖ್ಯ. ಅನೇಕ ಕ್ಷೇತ್ರದಲ್ಲಿ ಪ್ರಗತಿ ಆಗಿದೆ. ಜಗತ್ತಿಗೆ ಕೋವಿಡ್ ಸಂಕಷ್ಟ ಎದುರಾಗಿತ್ತು. ಇದರ ಜತೆಗೆ ರಷ್ಯಾ ಮತ್ತು ಉಕ್ರೇನ್ ಯುದ್ಧದಿಂದಾಗಿ ಜಗತ್ತಿನಲ್ಲಿ ಸಮಸ್ಯೆಗಳು ಇದ್ದವು.

ಇವುಗಳ ನಡುವೆ ನಮ್ಮ ಶೇಕಡಾ ೭ ರಷ್ಟು ಆರ್ಥಿಕ ಪ್ರಗತಿ ಆಗಿದೆ. ರಾಜ್ಯದಲ್ಲಿ ಮೂರು ವರ್ಷ ಗಳ ಸಾಧನೆ ನಿಮಗೆ ಗೊತ್ತಿದೆ. ವಿದೇಶಿ ಬಂಡವಾಳದಲ್ಲಿ ಶೇಕಡಾ ೩೦ ರಷ್ಟು ಹೆಚ್ಚಾಗಿದೆ. ಮೂರು ಟ್ರಿಲಿಯನ್ ಆರ್ಥಿಕ ಗುರಿಯನ್ನು ಮೋದಿ ಇಟ್ಕೊಂಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಸರ್ಕಾರದ ಮಟ್ಟದಲ್ಲಿ ಅನೇಕ ಸಾಧನೆಗಳಾಗಿವೆ. ರಾಜ್ಯದಿಂದ ಒಂದು ಟ್ರಿಲಿಯನ್ ಆರ್ಥಿಕತೆಯ ಕೊಡಗೆಯನ್ನು ಕೇಂದ್ರಕ್ಕೆ ಕೊಡಲು ಸರ್ಕಾರ ಅನೇಕ ಕ್ರಮಗಳನ್ನು ಜಾರಿ ಮಾಡಿದೆ.

ಯುಪಿಎ ಇದ್ದಾಗ ಹೂಡಿಕೆ ಬರ್ತಿರ್ಲಿಲ್ಲ. ಯುಪಿಎ ಅವಧಿಗಿಂತ 9 ಪಟ್ಟು ಹೆಚ್ಚು ಹೂಡಿಕೆ ರಾಜ್ಯದಲ್ಲಿ ಆಗ್ತಿದೆ. ಏರ್ಪೋರ್ಟ್, ಸಬರ್ಬನ್, ಮೆಟ್ರೋ, ರೈಲ್ವೇ ಯೋಜನೆಗಳು ಸಾಕಾರಗೊಳ್ತಿವೆ. ಇದೆಲ್ಲ ಡಬಲ್ ಇಂಜಿನ್ ಸರ್ಕಾರಗಳಿಂದ ಸಾಧ್ಯವಾಗಿದೆ. ಏನ್ ಮಾಡಿದೀರ ನೀವು ಅನ್ನೋರಿಗೆ ಡಬಲ್ ಇಂಜಿನ್ ಸರ್ಕಾರಗಳ ಕಾರ್ಯಕ್ರಮಗಳು ಉತ್ತರ ಕೊಡ್ತಿವೆ. ಶಿವಮೊಗ್ಗ ಏರ್ಪೋರ್ಟನ್ನು ಮೋದಿ ಉದ್ಘಾಟಿಸಲಿದ್ದಾರೆ. ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಆಗ್ತಿದೆ. ಬೆಂಗಳೂರು-ಮೈಸೂರು ದಶಪಥ ರಸ್ತೆ ಇಷ್ಟರಲ್ಲೇ ಲೋಕಾರ್ಪಣೆ ಆಗಲಿದೆ.

ಕಾಂಗ್ರೆಸ್ ಅವಧಿಯಲ್ಲಿ ನೋಡಿದಾಗಲು, ಈಗಲೂ 90 ರಷ್ಟು ಡಬಲ್ ಆಗಿದೆ. ಬೆಂಗಳೂರಿನ ಸಬ್ ಅರ್ಬನ್ ರೈಲ್ವೆಗೆ ಕೇಂದ್ರದಿಂದ ಹೆಚ್ಚು ಒತ್ತು ನೀಡಲಾಗಿದೆ. ರಾಷ್ಟ್ರೀಯ ಯೋಜನೆ ಕೂಡ ರೈಲ್ವೆ ಮತ್ತು ಏರ್ಪೋರ್ಟ್ ನಲ್ಲಿ ಆಗಿದೆ. ರೈಲ್ವೆ ಯೋಜನೆ ಪ್ರಯಾಣಿಕರಿಗೆ ಮಾತ್ರವಲ್ಲ, ವಿದ್ಯಾರ್ಥಿಗಳಿಗೆ, ರೈತರಿಗೆ, ಅಸಹಾಯಕರಿಗೆ ಅನುಕೂಲ ಮಾಡಿಕೊಟ್ಟಿದೆ.

ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಅಂತ ಮಾಡಿದ್ರು, ಹತ್ತು ಸಾವಿರ ಕೋಟಿ ಘೋಷಣೆ ಮಾಡಿ ಐದು ಸಾವಿರ ಕೋಟಿಯೂ ಕೊಡಲಿಲ್ಲ. ಕೇಂದ್ರ ಸರ್ಕಾರ 5,300 ಕೋಟಿ ರೂ. ಭದ್ರ ಮೇಲ್ಡಂಡೆ ಯೋಜನೆಗೆ ಕೊಡಲಾಗಿದೆ. ಇದನ್ನ ಡಬಲ್ ಇಂಜಿನ್ ಸರ್ಕಾರ ಮಾಡಿದೆ. ಅಂದು ಕಾಂಗ್ರೆಸ್ ಸರ್ಕಾರ ಇದ್ದಾಗ ಮಹದಾಯಿ ಇಂದ ನೀರನ್ನ ಕರ್ನಾಟಕಕ್ಕೆ ಕೊಡುವ ಪ್ರಸ್ತಾವನೆ ಇಲ್ಲ ಅಂತ ಹೇಳಿದ್ರು. ಆದ್ರೆ ಈಗ ಕೇಂದ್ರ ಸರ್ಕಾರ ನೀರು ಪೂರೈಸುವ ಕೆಲಸ ಮಾಡಿದೆ.

ಬೆಂಗಳೂರು ನಗರಕ್ಕೆ ಬ್ರಾಂಡ್ ಬೆಂಗಳೂರು ಹೆಸರು ಉಳಿಸೋದ್ರ ಜತೆಗೆ ಬಿಯಾನ್ಡ್ ಬೆಂಗಳೂರು ಕಾರ್ಯಕ್ರಮ ಮೂಲಕ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಲಾಗಿದೆ. ಕೊಪ್ಪಳದಲ್ಲಿ ಆಟಿಕೆ ತಯಾರಿಕೆ ಕೈಗಾರಿಕೆ ಆರಂಭಿಸಿ ಉದ್ಯೋಗ ನೀಡಲಾಗ್ತಿದೆ. ಆತ್ಮ ನಿರ್ಭರ ಭಾರತದ ಮೂಲಕ ಸ್ವಾವಲಂಭಿಗಳಾಗ್ತಿದ್ದೇವೆ. ಕಳೆದ ಎಂಟು ವರ್ಷಗಳಲ್ಲಿ 1.1 ಲಕ್ಷ ಕೋಟಿ ರೂ. ರಾಷ್ಟ್ರೀಯ ಹೆದ್ದಾರಿಗೆ ನೀಡಿದ್ದಾರೆ. ಈವರೆಗೂ 4,000 ಕಿಮೀ ರಸ್ತೆ ನಿರ್ಮಾಣ ಆಗಿದೆ. ಕೊರೋನಾ ಸಂದರ್ಭದಲ್ಲಿ ದೇಶದಲ್ಲಿ 250 ಕೋಟಿ ಡೋಸ್ ಕೊಡಲಾಗಿದೆ. ಫ್ರೀಟೆಸ್ಟಿಂಗ್, ಫ್ರೀ ಸ್ಯಾಂಪ್ಲಿಂಗ್ ಮಾಡಲಾಗಿದೆ. ಯಾವುದೇ ದೇಶದಲ್ಲಿ ಈ ರೀತಿಯ ಉಚಿತ ಚಿಕಿತ್ಸೆ ನೀಡಿಲ್ಲ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಸುಧಾಕರ್, ಭತ್ತ ಯಾರದ್ದು, ಅಕ್ಕಿ ಯಾರದ್ದು, ತೌಡು ಯಾರದ್ದು ಅನ್ನೋದು ಜನತೆ ಮುಂದೆ ಇದೆ. ಅಕ್ಕಿ ಕೊಟ್ಟಿದ್ದು ಕೇಂದ್ರ ಸರ್ಕಾರ. ಆದ್ರೆ ಅಕ್ಕಿ‌ ಕೊಟ್ಟಿದ್ದು ನಾವು ಅಂತ ಸಿದ್ದರಾಮಯ್ಯ ಮಾರ್ಕೆಟಿಂಗ್ ಮಾಡ್ಕೊಂಡ್ರು. ಕಾಂಗ್ರೆಸ್‌ನವರು ಇದ್ದಾಗ ಹೇಳಿಕೆಗಳನ್ನಷ್ಟೇ ಕೊಡ್ತಿದ್ರು, ಏನೂ‌ ಮಾಡ್ತಿರ್ಲಿಲ್ಲ. ಕೃಷಿ ಬಗ್ಗೆ ಮಾತಡ್ತಾರೆ ಆದ್ರೆ ಕಾಂಗ್ರೆಸ್ ನವರು ರೈತರಿಗೆ ಒಂದು ನಿರ್ಧಿಷ್ಟವಾದ ಕಾರ್ಯಕ್ರಮ ಕೊಟ್ಟಿಲ್ಲ ಎಂದರು.

ಇದನ್ನೂ ಓದಿ: Chikkaballapur Nandi Rathothsava: ಸಚಿವ ಸುಧಾಕರ್ ಚಾಲನೆ ಕೊಟ್ಟ ಮರುಕ್ಷಣವೇ ಮುರಿದು ಬಿದ್ದ ಭೋಗನಂದೀಶ್ವರನ ರಥ ಚಕ್ರ

ರಾಜ್ಯದ ಜನರ ಮೂಲಕ ಪ್ರಣಾಳಿಕೆಗೆ ಸಲಹೆ ಪಡೀತೇವೆ. ರಾಜ್ಯದ ಮೂಲೆ ಮೂಲೆಗೆ ತೆರಳಿ ಸಲಹೆ ಪಡೀತೇವೆ. ರಾಜ್ಯದ 8 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಸಲಹಾ ಸಂಗ್ರಹ ಪೆಟ್ಟಿಗೆ ಇಡ್ತೇವೆ. ರಾಜ್ಯದಲ್ಲಿ ೮ ಸಾವಿರ ಪ್ರಣಾಳಿಕೆ ಸಲಹಾ ಪಟ್ಟಿಗೆ ಇಡಲು ತೀರ್ಮಾನ ಮಾಡಲಾಗಿದೆ. ಪ್ರತಿ ಮಂಡಲ ೫೦ ಪ್ರಣಾಳಿಕೆ ಸಲಾಹ ಪೆಟ್ಟಿಗೆ ಇಡುತ್ತೇವೆ. ಜನರು 85951 58158 ಈ ನಂಬರ್‌ಗೆ ವಾಟ್ಸಪ್ ಸಹ ಮಾಡಬಹುದು. ವೆಬ್ ಸೈಟ್ ಮೂಲಕ ಜನರು ತಮ್ಮ ಸಲಹೆಗಳನ್ನು ಕೊಡಬಹುದು. ಮಾಚ್೯ ೨೫ ರತನಕ ಈ ಸಲಹಾ ಪಟ್ಡಿಗೆ ಇರಲಿದೆ.

ಯಾವ್ಯಾವ ವೃತ್ತಿ ಮಾಡುತ್ತಿದ್ದಾರೆ ಅವರ ಬಳಿ ಹೋಗಿ 224 ಕ್ಷೇತ್ರದಲ್ಲಿ ಸಲಹೆ ಪಡೀತೀವಿ.. ಸಮೃದ್ಧ ಕರ್ನಾಟಕವೇ ಬಿಜೆಪಿಯ ಭರವಸೆ ಅನ್ನೋದು ನಮ್ಮ ಸ್ಲೋಗನ್. ಅದೇ ರೀತಿ ಬಿಜೆಪಿ ಎಲ್ಲರ ಆಶೋತ್ತರ ಈಡೇರಿಸಲಿದೆ. ನಿಮ್ಮ ಬಳಿ ಬರ್ತಿದ್ದೇವೆ, ನಿಮ್ಮೆಲ್ಲರ ಸಹಕಾರ ಬೇಕು. ಭವ್ಯ ಭವಿಷ್ಯವನ್ನು ನಿರ್ಮಾಣ ಮಾಡಲು ನಾವು ಸಿದ್ಧತೆ ಮಾಡಿಕೊಳ್ತಿದ್ದೇವೆ.

50 ಸೆಕ್ಟರ್ ಸಭೆ ಮಾಡಲು ನಿರ್ಧಾರ ಮಾಡಲಾಗಿದೆ. ಕೃಷಿ ವಲಯ, ತೋಟಗಾರಿಕೆ, ರೇಷ್ಮೆ, ಬೆಳೆಯಾಧಾರಿತ ಮಾಡುವ ಕಡೆ ಸಭೆ. ಕೈಗಾರಿಕೆ ವಲಯದಲ್ಲಿ ಸಣ್ಣ ಮತ್ತು ಸೆಮಿ ಕಂಡೆಕ್ಟರ್ ಸಭೆ. ವಿವಿಧ ಪ್ರಕೋಷ್ಟದ ಸದಸ್ಯರು ಎಲ್ಲಾ ಕ್ಷೇತ್ರದಲ್ಲಿದ್ದು, ಅವರ ಸಹಕಾರದೊಂದಿಗೆ ಜನರನ್ನು ತಲುಪುತ್ತೇವೆ. ರೈತ ಮೋರ್ಚಾ, ಯುವಮೋರ್ಚಾ, ಮಹಿಳಾ ಮೋರ್ಚಾ ಮೂಲಕ ಜನರನ್ನು ತಲುಪಿ ಸಲಹೆ ಪಡೆಯುತ್ತೇವೆ. ವಿವಿಧ ಸೆಕ್ಟರ್ ಸಭೆಗಳನ್ನು ಮಾಡುವಾಗ ಕೇಂದ್ರದ ನಾಯಕರು ಬರಲಿದ್ದಾರೆ ಎಂದರು. ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಉಪಸ್ಥಿತರಿದ್ದರು.

Exit mobile version