Site icon Vistara News

Belur Election Results: ಬೇಲೂರಿನಲ್ಲಿ ಬಿಜೆಪಿಯ ಎಚ್‌.ಕೆ.ಸುರೇಶ್‌ಗೆ ಜಯ

Belur Election Results H K Suresh wins

Belur Election Results H K Suresh wins

ಹಾಸನ: ರಾಜ್ಯ ವಿಧಾನಸಭಾ ಚುನಾವಣೆಯ (Belur Election Results) ಮತ ಎಣಿಕೆ ಕಾರ್ಯ ಶನಿವಾರ ನಡೆದಿದ್ದು, ಬೇಲೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಚ್‌.ಕೆ.ಸುರೇಶ್ ಗೆಲುವು ಪಡೆದಿದ್ದಾರೆ. ಇವರು 7,736 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಬಿ. ಶಿವರಾಮ್ ವಿರುದ್ಧ ವಿಜಯಿಯಾಗಿದ್ದಾರೆ.

ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಎಚ್. ಕೆ. ಸುರೇಶ್ 63,571 ಮತಗಳು, ಕಾಂಗ್ರೆಸ್ ಅಭ್ಯರ್ಥಿ ಬಿ. ಶಿವರಾಮ್ 55,835 ಮತ, ಜೆಡಿಎಸ್ ಅಭ್ಯರ್ಥಿ ಕೆ. ಎಸ್.ಲಿಂಗೇಶ್ 38,893 ಮತ ಪಡೆದಿದ್ದಾರೆ.

ಇದನ್ನೂ ಓದಿ | Karnataka Election Results 2023 : ಹಾಸನದ ಜಿದ್ದಾಜಿದ್ದಿಯಲ್ಲಿ ಜೆಡಿಎಸ್‌ಗೆ ಗೆಲುವು; ಪ್ರೀತಂ ಸೋಲಿಸಿದ ಸ್ವರೂಪ್‌

ಕಳೆದ ಚುನಾವಣೆ ಫಲಿತಾಂಶ

2018ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ಎಸ್. ಲಿಂಗೇಶ್ 64,368 ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದರು. ಬಿಜೆಪಿ ಅಭ್ಯರ್ಥಿ ಎಚ್.ಕೆ.ಸುರೇಶ್ 44,578 ಮತ, ಕಾಂಗ್ರೆಸ್ ಅಭ್ಯರ್ಥಿ ಕೀರ್ತನಾ ರುದ್ರೇಶ್ ಗೌಡ 39,519 ಮತಗಳನ್ನು ಪಡೆದಿದ್ದರು.

Exit mobile version