ಕಡೂರು: ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಸಾಮಾಜಿಕ ನ್ಯಾಯದ ಕುರಿತು ಭಾಷಣ ಮಾಡಿದರೇ ಹೊರತು, ನಿಜವಾಗಿ ಸಾಮಾಜಿಕ ನ್ಯಾಯ ನೀಡಿದ್ದು ಬಿಜೆಪಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಬೃಹತ್ ಜನಸಂಕಲ್ಪ ಯಾತ್ರೆಯಲ್ಲಿ ಬೊಮ್ಮಾಯಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ, ಮಾಜಿ ಶಾಸಕರಾದ ಜೀವರಾಜ್, ಕೇಂದ್ರ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.
ಪಂಚ ಪಾಂಡವರು ಈ ಬಾರಿ ಗೆಲ್ಲುತ್ತೇವೆ ಎಂದು ಗುಡುಗಿದ ಸಿ.ಟಿ. ರವಿ:
ಕೆಲವರು ಕಡೂರಿನವರೆಗೆ ಬಂದು ಆನಂತರ ಸುಳ್ಳೇ ಹೇಳುತ್ತಿದ್ದರು. ಕೆಲವರು ಮೂಗಿಗೆ ಮೊಣಕೈಗೆ ತುಪ್ಪ ಸವರುತ್ತಿದ್ದರು. ಆದರೆ ನಾವು ಕೆಲಸ ಮಾಡಿ ಲೆಕ್ಕ ಕೊಡಲು ಬಂದಿದ್ದೇವೆ. ನೂರಾರು ಕೆರೆಗಳಿಗೆ ನೀರು ತುಂಂಬಿಸಲಾಗಿದೆ. ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿದರೂ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಏನೂ ಕೆಲಸ ಮಾಡದೇ ಜಿಲ್ಲೆಗೆ ಅನ್ಯಾಯ ಮಾಡಿವೆ. ಅದನ್ನು ಇಲ್ಲಿಯ ಜನರು ಎಂದಿಗೂ ಮರೆಯಬಾರದು.
ಚಿಕ್ಕಮಗಳೂರಿಗೆ ಪ್ರತ್ಯೇಕವಾದ ಹಾಲು ಒಕ್ಕೂಟ ಬೇಕು ಎಂದು ನಾವು ಕೇಳುತ್ತಿದ್ದೆವು. ಕಾಂಗ್ರೆಸ್-ಜೆಡಿಎಸ್ ಇದ್ದಾಗ ಕೇಳಿದೆವು, ಕೊಡಲಿಲ್ಲ. ಈಗ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ, ನಾವು ಯಾರನ್ನೂ ಬೇಡುವ ಸ್ಥಿತಿ ಇಲ್ಲ.
ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ: ನಾವು ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಂಚ ಪಾಂಡವರಿದ್ದೇವೆ. ಭೀಮನ ಜಾಗದಲ್ಲಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಇದ್ದಾರೆ. ಮಹಾಭಾರತದಲ್ಲಿ ಬಿಜೆಪಿ ಎದುರಿಗೆ ಬಂದರೆ ರಾಜಕೀಯವಾಗಿ ಎದುರಿಸಲು ಯಾರಿಂದಲೂ ಎದುರಿಸಲು ಸಾಧ್ಯವಿಲ್ಲ. ಕಳೆದ ಬಾರಿ ಅಲ್ಪ ಮತದಲ್ಲಿ ಜೀವರಾಜ್ ಸೋತರು. ಆದರೆ ಈ ಬಾರಿ ಐದಕ್ಕೆ ಐದೂ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ.