Site icon Vistara News

BJP Karnataka: ಕಾಂಗ್ರೆಸ್‌ಗೆ ಹೋಗಿರುವುದು ಕುಂಡದ ಗಿಡಗಳು; ಹೆಮ್ಮರಗಳು ಬಿಜೆಪಿಯಲ್ಲೇ ಇವೆ ಎಂದ ಸಿಎಂ ಬೊಮ್ಮಾಯಿ

CM Basavaraj Bommai speech against congress in Doddaballapur. Karnataka Election Updates.

#image_title

ದೊಡ್ಡಬಳ್ಳಾಪುರ: ಬಿಜೆಪಿಯಲ್ಲಿ ಟಿಕೆಟ್‌ ಸಿಗದೇ ಇರುವವರನ್ನು ತನ್ನ ಪಕ್ಷಕ್ಕೆ ಕರೆದುಕೊಂಡ ಕಾಂಗ್ರೆಸ್‌ ಏನೋ ದೊಡ್ಡ ಸಾಧನೆ ಮಾಡಿರುವಂತೆ ಹೇಳುತ್ತಿದೆ. ಅದು ತೆಗೆದುಕೊಂಡು ಹೋಗಿರುವುದು ಕುಂಡದಲ್ಲಿದ್ದ ಗಿಡಗಳನ್ನು ಮಾತ್ರ. ಆಳವಾಗಿ ಬೇರು ಬಿಟ್ಟ ಹೆಮ್ಮರಗಳು ಇನ್ನೂ ಬಿಜೆಪಿಯಲ್ಲೇ ಇವೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸೇರಿ ಅನೇಕರು ಕಾಂಗ್ರೆಸ್‌ ಸೇರ್ಪಡೆ ಕುರಿತು ಸಿಎಂ ಬಸವರಾಜಹ ಬೊಮ್ಮಾಯಿ ಮಾತನಾಡಿದ್ದಾರೆ.

ಭಾನುವಾರದಿಂದ ಆರಂಭವಾದನಜಯವಾಹಿನಿ ಯಾತ್ರೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಧೀರಜ್‌ ಮುನಿರಾಜು ಪರವಾಗಿ ಪ್ರಚಾರ ನಡೆಸುತ್ತ ಮಾತನಾಡಿದರು. (BJP Karnataka)

ಕಾಂಗ್ರೆಸ್ ಕಾಲದಲ್ಲಿ ನೇಕಾರರು ಅನೇಕ ಸಮಸ್ಯೆ ಎದುರಿಸಿದ್ದರು. ನೇಕಾರ ಸಮ್ಮಾನ ಯೋಜನೆಯನ್ನು ನಮ್ಮ ನಾಯಕರಾದ ಯಡಿಯೂರಪ್ಪ ಅರಂಭಿಸಿದರು‌. 2000 ರೂ ನೇಕಾರರಿಗೆ ಧನ ಸಹಾಯ ನೀಡಲಾಗುತ್ತಿತ್ತು‌. ಅದನ್ನು 5000 ರೂ.ಗೆ ಹೆಚ್ಚಳ ಮಾಡಿದ್ದೇನೆ‌. 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡಲಾಗುತ್ತಿದೆ. ನೇಕಾರರ ಅಭಿವೃದ್ಧಿ ನಿಗಮ ಮಾಡಿದ್ದೇವೆ. ನೇಕಾರರ ಆರೊಗ್ಯ, ಶಿಕ್ಷಣ ನೀಡಲು ನೇಕಾರರ ಅಭಿವೃದ್ಧಿ ನಿಗಮ ಮಾಡಿದ್ದೇವೆ ಎಂದರು.

ಹೂವು ಹಣ್ಣು ವ್ಯಾಪಾರ ಮಾಡುವ ತಿಗಳ ಸಮುದಾಯ ಇದೆ. ಆ ಸಮುದಾಯದ ಅಭಿವೃದ್ಧಿಗೆ ನಿಗಮ, ಗಾಣಿಗರ ಅಭಿವೃದ್ಧಿ ನಿಗಮ, ಕಾಯಕ ಮಾಡುವ ಕುಲಗಳಿಗೆ ಅಭಿವೃದ್ಧಿ ನಿಗಮ ಮಾಡಿದ್ದೇವೆ. ಒಕ್ಕಲಿಗರ ಅಭಿವೃದ್ಧಿ ನಿಗಮ, ವೀರಶೈವ ಅಭಿವೃದ್ಧಿ ನಿಗಮ, ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದೇವೆ. ಎಲ್ಲ ಸಮುದಾಯಗಳ ಅಭಿವೃದ್ಧಿಯನ್ನು ನಮ್ಮ ಸರ್ಕಾರ ಮಾಡಿದೆ ಎಂದರು.

ದೊಡ್ಡಬಳ್ಳಾಪುರದಲ್ಲಿ ಸೆಟಲೈಟ್ ಟೌನ್ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಶಿಕ್ಷಣ ಉದ್ಯೋಗ ದೊರೆಯುತ್ತವೆ. ಬೆಂಗಳೂರಿನ ಎಲ್ಲ ಸೌಕರ್ಯ ದೊಡ್ಡಬಳ್ಳಾಪುರದಲ್ಲಿ ಸಿಗುವಂತೆ ಮಾಡುತ್ತೇವೆ. ಹಾಲಿ ಶಾಸಕರು ಹತ್ತು ವರ್ಷ ಶಾಸಕರಾಗಿದ್ದಾರೆ. ಅವರನ್ನು ಈ ಬಾರಿ ಮನೆಗೆ ಕಳಿಸಬೇಕು. ದೊಡ್ಡಬಳ್ಳಾಪುರ ಅಭಿವೃದ್ಧಿಗೆ ಧೀರಜ್‌ಗೆ ಅವಕಾಶ ಕಲ್ಪಿಸಬೇಕು. ಮತ್ತೆ ನಮ್ಮ ಸರ್ಕಾರ ರಚನೆಯಾಗುತ್ತದೆ. ಈ ಭಾಗದಲ್ಲಿ ಕೆರೆ ಅಭಿವೃದ್ಧಿ ಮಾಡಬೇಕೆಂದು ಜನರ ಬೇಡಿಕೆ ಇದೆ‌. ಅದನ್ನು ಸಂಪುಟದ ಮೊದಲ ಸಭೆಯಲ್ಲಿಯೇ ತೀರ್ಮಾನ ಮಾಡಲಾಗುವುದು. ಈ ಬಾರಿ ದೊಡ್ಡಬಳ್ಳಾಪುರದ ದೊಡ್ಡ ಜನರು ಧೀರಜ್‌ನನ್ನು ಆಯ್ಕೆ ಮಾಡಿ ಕಳುಹಿಸಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: BJP ಜನಸ್ಪಂದನ | ಯುವ ಮುಖಂಡ, ಎಂಎಲ್‌ಎ ಟಿಕೆಟ್‌ ಆಕಾಂಕ್ಷಿ ಧೀರಜ್‌ ಮುನಿರಾಜ್ ಮನೇಲಿ ನಾಯಕರಿಗೆ ಟಿಫಿನ್‌

Exit mobile version