Site icon Vistara News

BJP Karnataka: ವೇದಿಕೆಯಲ್ಲೇ ಕಿತ್ತಾಡಿಕೊಂಡ ಬಸವರಾಜ ಬೊಮ್ಮಾಯಿ ಹಾಗೂ ಬಸನನೌಡ ಪಾಟೀಲ್‌ ಯತ್ನಾಳ್‌

Basanagowda patil yatnal Basabvaraja bommai

#image_title

ಬೆಳಗಾವಿ: ರಾಜ್ಯ ಬಿಜೆಪಿ (BJP Karnataka) ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ನಂತರ ಜಿಲ್ಲಾ ಕಾರ್ಯಕರ್ತರ ಸಭೆಗಳು ನಡೆಯುತ್ತಿದ್ದು, ಇಬ್ಬರು ನಾಯಕರುಗಳು ವೇದಿಕೆ ಮೇಲೆಯೇ ಪರಸ್ಪರ ದೂಷಾರೋಪಣೆ ಮಾಡಿಕೊಂಡಿದ್ದಾರೆ. ಬೆಳಗಾವಿ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾತಿಗೆ ವೇದಿಕೆಯಲ್ಲೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಸಭೆ ಉದ್ದೇಶಿಸಿ ಬಸನಗೌಡ ಪಾಟೀಲ್ ಯತ್ನಾಳ ಮೊದಲಿಗೆ ಭಾಷಣ ಮಾಡಿದರು. ಇತ್ತೀಚೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಶಾಮನೂರು ಶಿವಶಂಕರಪ್ಪ ಹಾಗೂ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಆಗಿದ್ದ ವಿಚಾರವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು. ಯಾರು ಏನು ಮಾಡಿದ್ರು ಕಳೆದ ಚುನಾವಣೆಯಲ್ಲಿ ಅಂತ ಕಾರ್ಯಕರ್ತರಿಗೂ ಗೊತ್ತಿದೆ. ಕಾರ್ಯಕರ್ತರ ಬದಲು ಮೊದಲು ನಾಯಕರು ಬದಲಾಗಬೇಕು. ನಾಯಕರಿಗೆ ಆಗ ಭವಿಷ್ಯ ಇದೆ.

ಕಾರ್ಯಕರ್ತರೊಂದಿಗೆ ಕುಳಿತುಕೊಳ್ಳಿ ಎಂದು ನಾನು ಬಸವರಾಜ್ ಬೊಮ್ಮಾಯಿರಿಗೂ ಹೇಳಿದ್ದೆ. ಮಾಧ್ಯಮಗಳು ಫಿಪ್ಟಿ ಫಿಪ್ಟಿ ಆಗಿವೆ. ಕಾಂಗ್ರೆಸ್‌ನವರನ್ನೂ ಬೈತಾರೆ ನಮ್ಮನ್ನೂ ಬೈತಾರೆ. ಅವರನ್ನ ಕೆಡವತಿನಿ ಇವರನ್ನ ಕೆಡವತಿನಿ ಅಂತ ನೀವೆ ಬಿದ್ರಿ. ನಾನಂತೂ ಹೆಂಗರೆ ಮಾಡಿ ಆರಿಸಿ ಬಂದೆ ಎಂದರು.

ಯತ್ನಾಳನ ಸೋಲಿಸಬೇಕು ಹಿಂದುತ್ವದ ಧ್ವನಿ ಅಡಗಿಸಬೇಕು ಅಂತ ಪ್ಲಾನ್ ಇತ್ತು. ಪ್ರಧಾನಿಗಳನ್ನು ಬಹಳ ತಿರುಗಾಡಿಸಿದರು. ಬೆಂಗಳೂರಿನಲ್ಲಿ 25 ಕಿ.ಮೀ. ರೋಡ್ ಶೋ ಮಾಡಿದ್ರು ಎಂದು ತಿಳಿಸಿದರು.

ಸಾವಿರಾರು ಕೋಟಿ ರೂಪಾಯಿ ಅನುದಾನದಲ್ಲಿ ವಿಜಯಪುರ ಅಭಿವೃದ್ದಿ ಮಾಡಿದ್ವಿ. ನಮ್ಮ ಕೆಲವು ಅತೃಪ್ತ ಆತ್ಮಗಳು ಅವರನ್ನ ಕೆಡವ್ತಿನಿ ಇವರನ್ನ ಕೆಡವ್ತಿನಿ ಅಂತ ಓಡಾಡಿದ್ವು. ನಾನು ಹಾಗೂ ಬಸವರಾಜ್ ಬೊಮ್ಮಾಯಿ ಕ್ಷೇತ್ರಕ್ಕೆ ಹೋಗದಯೇ ಆರಿಸಿ ಬಂದ್ವಿ. ಸೋತಿದ್ದೇವೆ ಅಂತ ಮನೆಯಲ್ಲಿ ಕೂರುವ ಅವಶ್ಯಕತೆಯಿಲ್ಲ. ಎಂಪಿ ಟಿಕೆಟ್ ಯಾರಿಗೆ ನೀಡಿದ್ರು ದೇಶಕ್ಕಾಗಿ ಮತ ನೀಡಬೇಕಾಗಿದೆ. ಕರ್ನಾಟಕದಲ್ಲಿ ಅರಾಜಕತೆ ಶುರುವಾಗಿದೆ. ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಆಗ್ತಿವೆ. ದೇಶದಲ್ಲಿ ಪಾಕಿಸ್ಥಾನದ ಧ್ವಜ ಹಾರಾಡುತ್ತಿವೆ. ಗೂಂಡಾಗಳು ಬಂದು ನಾವೇ ಮುಖ್ಯಮಂತ್ರಿಗಳು ಅಂತಿದ್ದಾರೆ.

ವಿಜಯಪುರಲ್ಲಿ ಮತದಾನದ ಸಮಯದಲ್ಲಿ ಕೆಲ ಮುಸ್ಲಿಂರು ತೊಂದರೆ ಮಾಡಿದ್ರು. ನಮ್ಮ ಕಾರ್ಯಕರ್ತರು 200 ಜನ ಇದ್ರೂ ಸಹ ಸುಮ್ಮನೆ ಇದ್ರು. ನಾನು ಹೋಗಿ ಒಬ್ಬನ ಕೆನ್ನೆಗೆ ಹೊಡೆದೆ. ಅವನು ಅಮ್ಮಾಗೆ ಅಪ್ಪಾಗೆ ಅಂತ ಓಡಿ ಹೋದ ಎಂದು ವಿಜಯಪುರದ ಘಟನೆಯನ್ನು ನೆನೆದರು.

ಮುಂದಿನ ಚುನಾವಣೆಯಲ್ಲಿ (BJP Karnataka) 28ಕ್ಕೆ 28 ಸೀಟು ನಾವು ಗೆಲ್ಲಬೇಕು ಎಂದ ಯತ್ನಾಳ್‌, ಅಮೆರಿಕದಲ್ಲಿ ಪ್ರಧಾನಿಗಳ ಭಾಷಣದಲ್ಲಿ 15 ಬಾರಿ ಎದ್ದು ನಿಂತು ಗೌರವ ನೀಡಿದ್ರು. ಕಾಶ್ಮೀರದಲ್ಲಿ ರಾಮನ ಪೂಜೆ ಮಾಡ್ತಾರೆ, ರಾಮ ಮಂದಿರ ಆಗ್ತಿದೆ. ದೇಶವನ್ನು ದಿವಾಳಿ ಮಾಡೋಕೆ ಮೊನ್ನೆ ಕಳ್ಳರು ಲಂಫಗರು ಸೇರಿದ್ರು ಎಂದು ಪ್ರತಿಪಕ್ಷಗಳ ಸಭೆಯನ್ನು ಟೀಕಿಸಿದರು. ಅವರು ದೇಶವನ್ನು ಉದ್ಧಾರ ಮಾಡಲು ಸೇರಿಲ್ಲ ಅವರು ದೇಶ ಹಾಳು ಮಾಡಲು ಸೇರಿದ್ದು. ದೇಶದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ. 9ನೇ ನೇ ಸ್ಥಾನದಲ್ಲಿದ್ದ ದೇಶ ಈಗ 5 ನೇ ಸ್ಥಾನದಲ್ಲಿದೆ.

ಗ್ಯಾರಂಟಿ ಯೋಜನೆಗಳದ್ದು ಮೂರು ತಿಂಗಳಲ್ಲಿ ಬಣ್ಣ ಬಯಲಾಗುತ್ತೆ. ಕಾಂಗ್ರೆಸ್‌ ನಾಯಕರು ಬಂದಾಗ ನಮ್ಮ ನಾಯಕರು ಸ್ವಾಗತ ಮಾಡ್ತಾರೆ. ಕಾರ್ಯಕರ್ತರಿಗೆ ಇದರಿಂದ ಗೊಂದಲ ಆಗುತ್ತೆ. ಇವರಿಬ್ಬರೂ ಒಬ್ಬರೇ ಇದ್ದಾರೆ ಅಂತ ಕಾರ್ಯಕರ್ತರು ಮಲಗುತ್ತಾರೆ. ಹೀಗಾಗಿ ನಾಯಕರು ಬುದ್ಧಿ ಕಲಿಯಬೇಕು. ಇನ್ನೆರಡು ವಾರದಲ್ಲಿ ಸಮಾನ ನಾಗರೀಕ ಸಂಹಿತೆ ಬರುತ್ತೆ. ಆಗ ಎಲ್ಲರೂ ಎರಡೇ ಹೆರಬೇಕು ಸಂವಿಧಾನದ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ. ಅದರ ಪ್ರಕಾರ ಇದರಿದ್ದರೆ ದೇಶ ಬಿಡಬೇಕಾಗುತ್ತದೆ. ಹಿಂದುತ್ವ ಒಂದೇ ಸಾಲೊಲ್ಲ. ಹಿಂದುತ್ವ ಪ್ಲಸ್ ಅಭಿವೃದ್ದಿ ಎರಡೂ ಬೇಕು ಎಂದರು.

ಬಸವರಾಜ ಬೊಮ್ಮಾಯಿ ಭಾಷಣ:
ನಂತರ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭಾಷಣ ಮಾಡಿದರು. ಕಾಂಗ್ರೆಸ್ ನಾಯಕರನ್ನು ಮನೆಗೆ ಕರೆಯಿಸಿಕೊಳ್ಳಬೇಡಿ ಎಂದು ಹೇಳಿದ್ದ ಬಸವನಗೌಡ ಪಾಟೀಲ ಯತ್ನಾಳ ಮಾತಿಗೆ ತಿರುಗೇಟು ನೀಡಿದ ಬೊಮ್ಮಾಯಿ, ಮೂವತ್ತು ವರ್ಷಗಳಿಂದ ನಾನು ರಾಜಕಾರಣದಲ್ಲಿ ಇದ್ದೇನೆ. ಯಾರ ಜೊತೆಗೂ ನಾನು ರಾಜೀ ಮಾಡಿಕೊಂಡು ರಾಜಕಾರಣ ಮಾಡಿಲ. ಮನೆಗೆ ಬಂದವರನ್ನು ಸ್ವಾಗತ ಮಾಡುವುದು ನಮ್ಮ ಪರಂಪರೆ. ನಾನೇನೂ ಯಾರನ್ನೂ ಮನೆಯೊಳಗಿನ ರೂಂಗೆ ಕರೆದುಕೊಂಡು ಹೋಗಿ ಮಾತನಾಡಿಲ್ಲ.

ಕಾಂಗ್ರೆಸ್ ನಾಯಕರ ಜತೆಗಿನ ಎಲ್ಲ ಮಾತುಕತೆಗಳು ಬಹಿರಂಗವಾಗಿಯೇ ನಡೆಯುತ್ತವೆ. ಬಿಜೆಪಿಯೇ ನನ್ನ ತಂದೆ-ತಾಯಿ, ಬಿಜೆಪಿ ಕಾರ್ಯಕರ್ತರು ನನ್ನ ಸಹೋದರ-ಸಹೋದರಿಯರು. ನಾನು ಸಿಎಂ ಆಗಿದ್ದಾಗ ಪಕ್ಷ, ಕಾರ್ಯಕರ್ತರ ಆಶಯದಂತೆ ಗೋಹತ್ಯೆ, ಮತಾಂತರ ‌ನಿಷೇಧ ಕಾಯ್ದೆ ಜಾರಿಗೆ ತಂದಿದ್ದೇನೆ. ಸಿಎಂ ಆಗಿದ್ದಾಗ ಕಾರ್ಯಕರ್ತರ ಹಿತ ಕಾದಿದ್ದೇನೆ,‌ ಮುಂದೆಯೂ ಕಾರ್ಯಕರ್ತರ ಹಿತ ಕಾಯುವೆ. ದೇಶ, ಧರ್ಮ ರಕ್ಷಣೆಗೆ ನಾನು ಸದಾ ಜಾಗೃತನಾಗಿ ಕೆಲಸ ಮಾಡುತ್ತೇನೆ. ಚುನಾವಣೆ ‌ಸೋಲನ್ನು ಮರೆತು ವೇದಿಕೆ ಮೇಲಿನ ಎಲ್ಲ ನಾಯಕರು ಒಂದಾಗೋಣ. ದೇಶದಲ್ಲಿ ‌ಪ್ರಧಾನಿ ನರೇಂದ್ರ ‌ಮೋದಿ ಅವರನ್ನು ‌ಇನ್ನೊಂದು ಅವಧಿಗೆ ಪ್ರಧಾನಿ ಮಾಡೋಣ. ಇದಕ್ಕಾಗಿ ಎಲ್ಲ ಪಕ್ಷಗಳ ನಾಯಕರು,‌ ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡೋಣ ಎಂದು ಬೊಮ್ಮಾಯಿ ಮನವಿ ಮಾಡಿದರು.

ಲೋಕಸಭೆ, ವಿಧಾನಸಭೆಯೇ ಬೇರೆ ಬೇರೆ ಆಗಿದೆ. ಮತ್ತೆ ಮೋದಿಯವರನ್ನ ಪ್ರಧಾನಿ ಮಾಡಲು ಕಾರ್ಯಕರ್ತರು ಸಂಕಲ್ಪ ಮಾಡಬೇಕು. ನರೇಂದ್ರ ಮೋದಿ ಬಂದ ಮೇಲೆ ಸ್ವಚ್ಛ, ದಕ್ಷ ಆಡಳಿತ ನೀಡಿದ್ದಾರೆ. ದೇಶದಲ್ಲಿ 12 ಕೋಟಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಪ್ರತಿ ಮನೆಗೆ ನೀರನ್ನು ಕೊಡುವ ಬಗ್ಗೆ ಪ್ರಧಾನಿ ಹೇಳಿದ್ರು. 40 ಲಕ್ಷ ಮನೆಗಳಿಗೆ ರಾಜ್ಯದಲ್ಲಿ ನೀರು ಕೊಡಲಾಗಿದೆ. ರೈತರು, ವಿದ್ಯಾರ್ಥಿಗಳಿಗೆ ಹಲವು ಕಾರ್ಯ ಮಾಡಿದೇವೆ. ದೇಶ ನರೇಂದ್ರ ಮೋದಿ ಆಡಳಿತದಲ್ಲಿ ಸುರಕ್ಷಿತವಾಗಿದೆ. ಪಾಕಿಸ್ತಾನದ ಸೊಕ್ಕು ಅಡಗಿಸಿದ್ದು ಪ್ರಧಾನಿ ನರೇಂದ್ರ ಮೋದಿ. ಪಟ್ನಾದಲ್ಲಿ ತೃತೀಯ ರಂಗದ ನಾಯಕರ ಸಭೆ ನಡೆದಿದೆ. ದೇಶದ ಉದ್ಧಾರ ಬಗ್ಗೆ ಚರ್ಚೆ ಆಗಿಲ್ಲ, ನರೇಂದ್ರ ಮೋದಿ ಹೇಗೆ ಸೋಲಿಸಬೇಕು., ರಾಹುಲ್ ಗಾಂಧಿಗೆ ಮದುವೆ ಮಾಡುವ ಬಗ್ಗೆ ಚರ್ಚೆ ಆಗಿದೆ.

ಮೋದಿ ಸೋಲಲ್ಲ, ರಾಹುಲ್ ಮದುವೆ ಆಗಲ್ಲ

ಮೋದಿ ಸೋಲಲ್ಲ, ರಾಹುಲ್ ಮದುವೆ ಆಗಲ್ಲ. ಮೋದಿ ಎದುರಿಸಲು ವಿರೋಧ ಪಕ್ಷದಲ್ಲಿ ಒಬ್ಬ ನಾಯಕ ಇಲ್ಲ.
25 ಸ್ಥಾನಗಳನ್ನು ರಾಜ್ಯದಲ್ಲಿ ಮತ್ತೆ ಗೆಲ್ಲುತ್ತೇವೆ. ವಿಧಾನಸಭೆ ಚುನಾವಣೆ ಸೋಲಿಗೆ ನಾನೇ ಹೊಣೆ‌ ಹೊರುತ್ತೇನೆ. ಪ್ರಾಮಾಣಿಕ ಕೆಲಸ ಮಾಡಿ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇವೆ. ಐದು ಸಾವಿರ ಕೋಟಿ ಅನುದಾನದವನ್ನು ಉತ್ತರ ಕರ್ನಾಟಕ ನೀರಾವರಿ ಕೊಟ್ಟಿದ್ದೇನೆ. ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆಯ ಘೋಷಣೆ ಮಾಡಿದ್ದೇನೆ. ನಮ್ಮ ಅಭಿವೃದ್ಧಿ ಕಾರ್ಯ ಜನರಿಗೆ ತಲುಪಿಸುವುದರಲ್ಲಿ ನಾವು ವಿಫಲ ಆಗಿದ್ದೇವೆ. ಆಸೆ, ಆಮಿಷಗಳಿಂದ ಏನಾಗಲಿದೆ ಎಂಬುದು ಗೊತ್ತಾಗಲಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಇದನ್ನೂ ಓದಿ:BJP Karnataka: ಒಬ್ಬರನ್ನೂ ಗೆಲ್ಲಿಸಲು ಆಗದವರನ್ನು ಕೋರ್‌ ಕಮಿಟಿಯಿಂದ ಕಿತ್ಹಾಕಿ: ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕೋಲಾಹಲ

ಕೆಎಸ್‌ಆರ್‌ಟಿಸಿ ಮುಚ್ಚುವ ಸ್ಥಿತಿ ನಿರ್ಮಾಣ ಆಗಿದೆ. ಡೀಸೆಲ್ ಇಲ್ಲದೇ ಬಸ್ ಗಳು ನಿಲ್ಲುವ ಸ್ಥಿತಿ ನಿರ್ಮಾಣ ಆಗಲಿದೆ. ಕರ್ನಾಟಕ ಕತ್ತಲಲ್ಲಿ ಮುಳುಗುವ ಸ್ಥಿತಿ ನಿರ್ಮಾಣ ಆಗಲಿದೆ. ಗ್ಯಾರಂಟಿಗೆ ಕಂಡಿಷನ್ ಹಾಕಿದ್ದು ಯಾಕೆ? ಒಂದೇ ತಿಂಗಳಲ್ಲಿ ಸರ್ಕಾರ ಜನಪ್ರಿಯತೆ ಕಳೆದುಕೊಂಡಿದ್ದು ಇದೇ ಮೊದಲು. ಮಳೆ ಇಲ್ಲ, ಜಲಾಶಯಗಳಲ್ಲಿ ನೀರು ಇಲ್ಲ ಈ ಬಗ್ಗೆ ಇವರಿಗೆ ಚಿಂತನೆ ಇಲ್ಲ. ಅಕ್ಕಿ ಕೊಟ್ಟಿಲ್ಲ ಎಂದು ಪ್ರತಿಭಟನೆ ಮಾಡಲು ಯಾವ ನೈತಿಕತೆ ಇದೆ. ಸರ್ಕಾರದಲ್ಲಿದ್ದುಕೊಂಡು ಇವರು ಪ್ರತಿಭಟನೆ ಮಾಡ್ತಿದ್ದಾರೆ. ಅಕ್ಕಿ ಖರೀದಿಯಲ್ಲಿ ಹುನ್ನಾರ ಆಗಿದೆ, ಏನಾಗಿದೆ ಎಂಬುದು ನನಗೆ ಗೊತ್ತು. ಕೆಲವೇ ದಿನಗಳಲ್ಲಿ ಇವರ ಬಣ್ಣ ಬಯಲು ಆಗಲಿದೆ. ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ರು. ಈಗ ಪರ್ಸೆಂಟೇಜ್ ಫಿಕ್ಸ್ ಆಗುತ್ತಿದೆ. ಯಾವ ಯಾವ ಮಂತ್ರಿ ಗುತ್ತಿಗೆದಾರನಿಗೆ ಕರೆದು ಏನ್ ಹೇಳಿದ್ದಾರೆ ಗೊತ್ತು. ದೆಹಲಿಯವರಿಗೆ ಈಗ ಕರ್ನಾಟಕ ಎಟಿಎಂ ಆಗಿದೆ ಎಂದರು.

Exit mobile version