ಬೆಂಗಳೂರು: ಕನಕಪುರ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಬೇಕು ಎನ್ನುವುದು ಬಿಜೆಪಿ ನಿರ್ಧಾರವಾಗಿದ್ದು, ಅಲ್ಲಿಂದ ಗೆದ್ದೇಗೆಲ್ಲುವೆ ಎಂಬ ವಿಶ್ವಾಸವಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ನಾನು ಒಬ್ಬ ಸಮಾನ್ಯ ಕಾರ್ಯಕರ್ತನಿಂದ ಪಕ್ಷ ಈ ಮಟ್ಟಕ್ಕೆ ಬೆಳೆಸಿದೆ. ಏರ್ಮೆಜೆನ್ಸಿ ಸಮಯದಿಂದಲೂ ಹೋರಾಟ ಮಾಡ್ತಿದ್ದೇನೆ. ಪಕ್ಷ ಏನು ಹೇಳುತ್ತೋ ಅದನ್ನ ಮಾಡ್ತೀನಿ. ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದೇನೆ.
ಪಕ್ಷ ಕೊಟ್ಟ ಟಾಸ್ಕ್ ನಿರ್ವಹಿಸುವುದು ನನ್ನ ಜವಾಬ್ದಾರಿ. ಅಮಿತ್ ಶಾ ಚುನಾವಣಾ ಚಾಣಕ್ಯ. ಅವರು ಹೋದ ಕಡೆ ಗೆಲುವು ಸಾಧಿಸಿದ್ದಾರೆ. ಅವರು ಕೊಟ್ಟ ಟಾಸ್ಕ್ ನಿರ್ವಹಿಸುವುದು ನನ್ನ ಜವಾಬ್ದಾರಿ. ದೊಡ್ಡ ಅಂತರದಲ್ಲಿ ಗೆದ್ದು ಕೊಂಡು ಬರ್ತೀನಿ. ಇದು ಒಕ್ಕಲಿಗ ನಾಯಕರ ನಡುವಿನ ಫೈಟ್. ಡಬಲ್ ಇಂಜಿನ್ ಸರ್ಕಾರ ಬೇಕು ಅಂತ ಬಯಸುತ್ತಿದ್ದಾರೆ. ಕನಕಪುರ ಜನರಿಗೆ ಅಭಿವೃದ್ಧಿ ಬೇಕಾಗಿದೆ ಎಂದರು.
ಪದ್ಮನಾಭನಗರಕ್ಕೆ ಸಂಸದ ಡಿ.ಕೆ. ಸುರೇಶ್ ಬರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ಚುನಾವಣಾ ತಂತ್ರ ಅವರು ಮಾಡ್ತಾರೆ. ನಮ್ಮ ಚುನಾವಣೆ ತಂತ್ರ ನಾವು ಮಾಡ್ತೀವಿ ಎಂದರು.
ವರುಣದಲ್ಲಿ ಸೋಮಣ್ಣ ಗೆಲ್ಲುತ್ತಾರೆಯೇ ಎಂಬ ಪ್ರಶ್ನೆಗೆ, ಆ ಬಗ್ಗೆ ಸೋಮಣ್ಣ ಬಳಿ ಕೇಳಿ. ಅಮಿತ್ ಶಾ ರಣತಂತ್ರ ಮಾಡಿದ್ರೆ ಗೆಲುವು ಖಚಿತ. ನಾವು ಗೆದ್ದೆ ಗೆಲ್ಲುತ್ತೇವೆ ಎಂದರು.
ಇದನ್ನೂ ಓದಿ: R. Ashok: ಆರ್. ಅಶೋಕ್ ಪದ್ಮನಾಭನಗರದಲ್ಲೂ ಸೋಲುತ್ತಾರೆ: ರಘುನಾಥ ನಾಯ್ಡುವೇ ಅಭ್ಯರ್ಥಿ ಎಂದ ಡಿ.ಕೆ. ಶಿವಕುಮಾರ್