Site icon Vistara News

BJP Karnataka : ಕಾಂಗ್ರೆಸ್‌-ಜೆಡಿಎಸ್‌ ಸಭೆ ಮಾಡಿದರೆ ಚಪ್ಪಲಿಗಳು ಕೈಯಲ್ಲಿರುತ್ತವೆ: ನಳಿನ್‌ ಕುಮಾರ್‌ ಕಟೀಲ್‌ ಹೇಳಿಕೆ

bjp-karnataka-nalin-kumar-kateel-says-sandles-will-come-to-hand-in-congress-meeting

ಬೆಂಗಳೂರು: ರಸ್ತೆ, ಚರಂಡಿಯಂತಹ ವಿಚಾರಗಳಿಗಿಂತ ಜಿಹಾದ್‌ ವಿಚಾರವೇ ಮುಖ್ಯ ಎಂದು ಇತ್ತೀಚೆಗೆ ಟೀಕೆಗೆ ಒಳಗಾಗಿದ್ದ ರಾಜ್ಯ ಬಿಜೆಪಿ (BJP Karnataka) ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಇದೀಗ ಪ್ರತಿಪಕ್ಷಗಳ ಮೇಲೆ ಹರಿಹಾಯ್ದಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯೀಜಿಸಿದ್ದ ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಕಟೀಲ್‌, ಇಡೀ ದೇಶದಲ್ಲಿ ಮೊದಲ ಬಾರಿಗೆ ರೈತ ಬಜೆಟ್ ಮಾಡಿದ್ದು ಬಿ. ಎಸ್ ಯಡಿಯೂರಪ್ಪ ಸರ್ಕಾರ. ಈ ಹಿಂದೆ ನಾವು ಬೇರೆ ಬೇರೆ ಬಜೆಟ್ ನೋಡಿದ್ದೇವೆ. ಮಣ್ಣಿನ ಪರೀಕ್ಷಾ ಕೇಂದ್ರಗಳನ್ನು ಪ್ರತಿ ಜಿಲ್ಲೆಗೆ ಮಾಡಿದ ಕೀರ್ತಿ ಈ ಸರ್ಕಾರದ್ದು. ಇನ್ನು ಒಂದು ತಿಂಗಳಲ್ಲಿ ನಮ್ಮ ಸರ್ಕಾರ ಖಾನ ಭಾನ ಸಮಸ್ಯೆಗಳನ್ನು ಪರಿಹರಿಸುತ್ತದೆ.

ಡಬಲ್ ಇಂಜಿನ್ ಸರ್ಕಾರ ರಾಜ್ಯದ ರೈತ ಪರವಾಗಿದೆ. ಕೇಂದ್ರ ಸರ್ಕಾರ 6,000 ರೂ. ಪಿಎಂ ಕಿಸಾನ್ ಯೋಜನೆ ಮೂಲಕ ರೈತರಿಗೆ ನಿಜವಾಗಿ ಸನ್ಮಾನ ಮಾಡಿದೆ. ನಮ್ಮ ಯಡಿಯೂರಪ್ಪ ಸರ್ಕಾರ ಅದಕ್ಕೆ 4,000 ರೂ. ಕೊಟ್ಟು ರೈತರನ್ನು ಪ್ರೋತ್ಸಾಹಿಸಿದೆ. ರೈತರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ನಮ್ಮ ಬಿಜೆಪಿ ಸರ್ಕಾರ ಗೌರವಿಸಿದೆ. ರೈತರಿಗೆ ಉಪಯೋಗವಾಗುವಂತೆ ಕಿಸಾನ್ ಡ್ರೋನ್ ವ್ಯವಸ್ಥೆ ಮಾಡಿದೆ. ರೈತ ಮೋರ್ಚಾದ 3 ವರ್ಷದ ಸಾಧನೆ 2023 ರ ಚುನಾವಣೆಯಲ್ಲಿ ತಿಳಿಯುತ್ತದೆ. ಬೂತ್ ವಿಜಯ ಅಭಿಯಾನ ಶೇ.95 ರಷ್ಟು ಯಶಸ್ವಿಯಾಗಿದೆ. ಇಡೀ ರಾಜ್ಯದಲ್ಲಿ 15 ಲಕ್ಷ ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸುವ ಕಾರ್ಯ ನಡೆದಿದೆ ಎಂದರು.

ಕಾಂಗ್ರೆಸ್, ಜೆಡಿಎಸ್ ಪಕ್ಷಗಳನ್ನು ಟೀಕಿಸಿದ ಕಟೀಲ್‌, ಅಪ್ಪ ಮಕ್ಕಳ ಪಾರ್ಟಿಯಲ್ಲಿ ಅಣ್ಣ ದೊಡ್ಡವನೋ ತಮ್ಮ ದೊಡ್ಡವನೋ ಎಂದು ಕಿತ್ತಾಟ ಶುರುವಾಗಿದೆ. ಇನ್ನೊಂದು ರಾಷ್ಟ್ರೀಯ ಪಾರ್ಟಿಯಲ್ಲಿ ಮುಖ್ಯಮಂತ್ರಿ ಯಾರೆಂಬ ಕಿತ್ತಾಟ ಆರಂಭವಾಗಿದೆ.

ಈ ಚುನಾವಣೆಯಲ್ಲಿ ಬೇರೆಬೇರೆ ಪಾರ್ಟಿಯವರು ಶರ್ಟ್ ಹೊಲಿಸಿ ಕಾಯುತ್ತಿದ್ದಾರೆ. ಕೆಲವರು ಕೋಟ್ ಹೊಲಿಸಲು ಅಂಗಡಿಗೆ ಕೊಟ್ಟಿದ್ದಾರೆ. ಇನ್ನೂ ಕೆಲವರು ಹೊಸ ಪ್ಯಾಂಟ್ ಶರ್ಟ್ ಖರೀದಿಸಿದ್ದಾರೆ. ಇನ್ನೂ ಕೆಲವರು ಅವರೊಳಗೇ ಪ್ಯಾಂಟ್, ಶರ್ಟ್ ಹರಿಯಲು ಶುರು ಮಾಡಿದ್ದಾರೆ. ನೋಡಿ 3 ಪಾರ್ಟಿಯಲ್ಲಿ ಮೂರು ವಿಭಿನ್ನತೆ. ರಾಷ್ಟ್ರೀಯ ಪಾರ್ಟಿ ಇನ್ನೊಂದಿದೆ. ಅವರ ಸಭೆ ಆದಾಗ ಚಪ್ಪಲಿಗಳು ಕೈಯಲ್ಲಿ ಇರುತ್ತದೆ ಎಂದು ತಿಳಿಸಿದರು.

ಇನ್ನೊಂದು ಕುಟುಂಬದ ಪಕ್ಷವಿದೆ. ಅಪ್ಪ ಮಕ್ಕಳ ಪಾರ್ಟಿ ಅದು. ಅವರ ಪಾರ್ಟಿಯ ಮೀಟಿಂಗ್ ಆದಾಗ ಒಬ್ಬನ ಚಪ್ಪಲಿ ಇನ್ನೊಬ್ಬನ ದೇಹದೊಳಗೆ ಇರುತ್ತದೆ. ಬಿಜೆಪಿಯಲ್ಲಿ ಮಾತ್ರ ಚಪ್ಪಲಿ ನಮ್ಮಲ್ಲೇ ಇರುತ್ತದೆ. ಶಾಂತವಾಗಿ ಸಭೆ ನಡೆಯುತ್ತದೆ ಎಂದು ತಿಳಿಸಿದರು.

ಈದನ್ನೂ ಓದಿ | Pragya Singh Thakur | ಲವ್‌ ಜಿಹಾದ್‌ ವಿರುದ್ಧ ಹಿಂದು ಹೆಣ್ಣುಮಕ್ಕಳು ಆಟಂ ಬಾಂಬ್‌ಗಳಾಗಬೇಕು: ಪ್ರಜ್ಞಾ ಸಿಂಗ್ ಕರೆ

Exit mobile version