ಬೆಂಗಳೂರು: ಚುನಾವಣೆ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಇನ್ನೂ 20 ಬಾರಿ ಬರುತ್ತಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ರಾಜ್ ಚುನಾವಣಾ ನಿರ್ವಹಣಾ ಸಮಿತಿ ಕಾರ್ಯಾಗಾರದಲ್ಲಿ ಕಟೀಲ್ ಮಾತನಾಡಿದ್ದಾರೆ.
ಪ್ರಧಾನಿಗಳು 20 ಬಾರಿ ರಾಜ್ಯಕ್ಕೆ ಬರ್ತಾರೆ. ಮೋದಿ, ಅಮಿತ್ ಶಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಬರ್ತಾರೆ ಎಂದರು. ರಾಜ್ಯದಲ್ಲಿ ಚುನಾವಣೆ ಕಾವು ಏರುತ್ತಿದೆ. ಪ್ರತಿ ದಿನ ಮಾಧ್ಯಮಗಳಲ್ಲಿ ಸರ್ವೆಗಳು ಬರ್ತಾಯಿವೆ. ಆದ್ರೆ ರಾಜ್ಯ ಸಂಚಾರ ಮಾಡಿರುವ ನಾನು ಹೇಳ್ತಾಯಿದ್ದೀನಿ, ಪೂರ್ಣ ಪ್ರಮಾಣದ ಬಹುಮತದೊಂದಿಗೆ ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಬರಲಿದೆ.
ಎರಡು ದಿನಗಳ ಕಾಲ ರಾಜ್ಯ ಕೋರ್ ಕಮಿಟಿ ಸಭೆ ನಡೆದಿದೆ. ಒಂದೇ ಒಂದು ಕ್ಷೇತ್ರದಲ್ಲೂ ಅಸಮಾಧಾನವಿಲ್ಲ. ಪಕ್ಷ ಹಲವಾರು ಯಾತ್ರೆಗಳನ್ನು ನಡೆದ ಎಲ್ಲ ಯಾತ್ರೆಗಳಲ್ಲಿ ಜನರು ಸಾಗರದಂತೆ ಬಂದಿದ್ದರು. ಚುನಾವಣಾ ಕಾವು ಏರುತ್ತಿದೆ. ನನ್ನ ರಾಜಕೀಯ ಅನುಭವದ ಆಧಾರದಲ್ಲಿ ಹೇಳುತ್ತೇನೆ, ನಾವೇ ಬಹುಮತದ ಸರ್ಕಾರ ರಚಿಸುತ್ತೇವೆ. ಅಭೂತಪೂರ್ವ ಗೆಲುವು ಬಿಜೆಪಿ ಸಾಧಿಸಲಿದೆ. ಮತ್ತೊಮ್ಮೆ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗಲಿದೆ.
ನಮ್ಮ ಗೆಲುವಿನ ರೂವಾರಿಗಳು ನಿರ್ವಹಣಾ ಸಮಿತಿಗಳದ್ದೇ ಆಗಿರಲಿದೆ. 224 ಕ್ಷೇತ್ರದಲ್ಲೂ ಶಕ್ತಿಕೇಂದ್ರಕ್ಕೆ ಮೇಲ್ಪಟ್ಟ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಆಲಿಸಿದ್ದೇವೆ. ಎರಡು ದಿನ ಜಿಲ್ಲೆಯ ಎಲ್ಲ ಪ್ರಮುಖರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಅಭ್ಯರ್ಥಿ ಯಾರಾದರೂ ಗೆಲುವಿಗೆ ಶ್ರಮಿಸುವ ಒಮ್ಮತದ ಅಭಿಪ್ರಾಯ ಬಂದಿದೆ. ಮೂರು ತಿಂಗಳಿನಿಂದ ಚುನಾವಣಾ ತಯಾರಿ ಕೆಲಸ ಆರಂಭಿಸಲಾಗಿದೆ. ಬೂತ್ ಸಂಕಲ್ಪ, ವಿಜಯ ಸಂಕಲ್ಪ ಅಭಿಯಾನ ಮಾಡಲಾಗಿದೆ. ನಾಲ್ಕು ಕೋಟಿ ಜನರ ಸಂಪರ್ಕ, ಬೂತ್ ಸಂಕಲ್ಪ ಅಭಿಯಾನದಲ್ಲಿ ಆಗಿದೆ. ಅಮಿತ್ ಶಾ ಕಾರ್ಯಕ್ರಮಕ್ಕಾಗಿ ಮಂಡ್ಯದಲ್ಲಿ ಅತಿ ಹೆಚ್ಚು ಜನ ಸೇರಿದ್ದು ಇತಿಹಾಸವಾಗಿದೆ. ಮೋದಿ ಸಾಧನೆ ಹಳ್ಳಿಗಳಿಗೆ ತಲುಪಿದೆ. ಹಳ್ಳಿ ಹಳ್ಳಿಯಲ್ಲಿ ಬಿಜೆಪಿ ಪರ ವಾತಾವರಣ ನಿರ್ಮಾಣ ಆಗಿದೆ. ದೇಶದಲ್ಲಿ ಅತಿ ಹೆಚ್ಚು ಮೋದಿ ಪೂಜಿಸುವ ರಾಜ್ಯ ಕರ್ನಾಟಕ ಎಂದರು.
ಬಿಜೆಪಿ ಸರ್ಕಾರದ ಮೇಲೆ ಜನರ ಭಾವನೆ ವಿಶ್ವಾಸಗಳು ಜಾಸ್ತಿಯಾಗಿವೆ. ಯಾವುದೇ ಸರ್ಕಾರ ತೆಗೆದುಕೊಳ್ಳದ ನಿರ್ಣಯವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ. ಹತ್ತಾರು ಕಾರ್ಯಕ್ರಮ ಕೊಟ್ಟ ಕೀರ್ತಿ ನಮ್ಮ ಬೊಮ್ಮಾಯಿ ಅವರಿಗೆ ಸಲ್ಲುತ್ತದೆ. ಜನರರು ಆಶೀರ್ವಾದ ಮಾಡಲು ಸಿದ್ದರಿದ್ದಾರೆ. ಆಶೀರ್ವಾದಕ್ಕೆ ತಕ್ಕಂತೆ ನಾವು ಎಲ್ಲರು ಕೆಲಸ ಮಾಡಬೇಕು. ನಿರ್ವಹಣೆ ಸಮಿತಿಯನ್ನು ಶೋಭಾ ಅವರಿಗೆ ಕೊಟ್ಟಿದ್ದಾರೆ, ಇದು ನಮ್ಮ ಸೌಭಾಗ್ಯ,. ಭೂಗತವಾಗಿ ಕೆಲಸ ಮಾಡಿದ ನಿರ್ವಹಣಾ ಸಮಿತಿಯಿಂದ ನಮಗೆ ಗೆಲುವು ಸಿಗುತ್ತದೆ.
ಕಾಂಗ್ರೆಸ್, ಜೆಡಿಎಸ್ ಎರಡು ಕೂಡ ಪ್ರಚಾರದಲ್ಲಿ ನಮಗಿಂತ ಹಿಂದೆ ಇದ್ದಾವೆ. ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆ ಮಾಡೋದು ಶತಸಿದ್ದ. ಯಾವುದೇ ಸರ್ಕಾರ ತೆಗೆದು ಕೊಳ್ಳದ ನಿರ್ಣಯ ವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ ಎಂದರು.
ಇದನ್ನೂ ಓದಿ: BJP Karnataka: ಯಾರೇ ಅಭ್ಯರ್ಥಿಯಾದರೂ ಕೆಲಸ ಮಾಡಬೇಕು ಅಷ್ಟೆ: ಟಿಕೆಟ್ ಆಯ್ಕೆಯ ಸುಳಿವು ಬಿಟ್ಟುಕೊಟ್ಟರೇ ಶೋಭಾ ಕರಂದ್ಲಾಜೆ?