Site icon Vistara News

BJP Karnataka: ನರೇಂದ್ರ ಮೋದಿ-ಬಿ.ಎಸ್‌. ಯಡಿಯೂರಪ್ಪ, ಜನರ ನಡುವಿನಿಂದ ಬಂದ ನಾಯಕರು: ಶೋಭಾ ಕರಂದ್ಲಾಜೆ

Bajrang Dal is BJP's organization, Says Minister Shobha Karandlaje

ಬೆಂಗಳೂರು: ಬಿಜೆಪಿ ಅಭಿವೃದ್ಧಿಯ ಆಧಾರದಲ್ಲಿ ಧನಾತ್ಮಕ ಕಾರ್ಯಸೂಚಿಯೊದಿಗೆ ಚುನಾವಣೆಗೆ ಹೋಗಬೇಕು ಎನ್ನುವ ಆಶಯ ಇದೆ ಎಂದು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರ ನೇತೃತ್ವದಲ್ಲಿ ಮೂಲಸೌಕರ್ಯದ ಅಭಿವೃದ್ಧಿ, ಸಂಪರ್ಕ ಕ್ಷೇತ್ರದ ಗಮನಾರ್ಹ ಅಭಿವೃದ್ಧಿ ಬಿಜೆಪಿ ಗೆಲುವಿಗೆ ಪೂರಕ. ಬಡವರಿಗೆ ಅಗತ್ಯವಿರುವ ಸೌಕರ್ಯಗಳಿಗಾಗಿ ಸ್ವಾತಂತ್ರ್ಯ ಬಂದ ಏಳು ದಶಕಗಳ ನಂತರವೂ ಜನರು ತೊಳಲಾಡುವ ಪರಿಸ್ಥಿತಿ ಇತ್ತು. ಜನರ ಕಷ್ಟಗಳನ್ನು ಬಗೆಹರಿಸುವಲ್ಲಿ ನರೇಂದ್ರ ಮೋದಿ ದೊಡ್ಡ ಹೆಜ್ಜೆ ಇಟ್ಟರು. ಗಾಂಧೀಜಿ ಹೇಳಿದಂತೆ ಸ್ವಚ್ಛತೆಗೆ ಆದ್ಯತೆ ಕೊಡಲಾಯಿತು ಎಂದರು.

ಕಾಂಗ್ರೆಸ್ಸಿಗರಿಗೆ ಬಡವರ ಕಷ್ಟ, ಬಡತನದ ಅರಿವೇ ಇಲ್ಲ ಎಂದು ಆರೋಪಿಸಿದ ಅವರು, ಜನರ ಮಧ್ಯೆಯಿಂದ ಬಂದ ನಾಯಕರು ಯಡಿಯೂರಪ್ಪ ಮತ್ತು ಮೋದಿಯವರು. ಅವರು, ಭರವಸೆ ಕೊಡದೆ ಜನರ ಕಷ್ಟ ಅರ್ಥ ಮಾಡಿಕೊಂಡು ಜನರಿಗೆ ಸಹಾಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಭರವಸೆ ಕೇವಲ ಆಶ್ವಾಸನೆಯಾಗಿ ಉಳಿಯಲಿದೆ. ಕಾಂಗ್ರೆಸ್ ಆಡಳಿತ ಇರುವ ರಾಜಸ್ಥಾನ ಮತ್ತು ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ಮುಖಂಡರೇ ಸಿಡಿದೆದ್ದಿದ್ದಾರೆ.

ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಸದೆ ಇರುವುದೇ ಇದಕ್ಕೆ ಕಾರಣ. ಬೇರೆ ರಾಜ್ಯಗಳಲ್ಲಿ ಭರವಸೆ ಹಾಗೇ ಉಳಿದುದು ಯಾಕೆ? ಅದನ್ನು ಅನುಷ್ಠಾನಕ್ಕೆ ತರಲಿಲ್ಲವೇಕೆ? 2001ರಲ್ಲಿ ಇದೇ ರಾಜ್ಯದಲ್ಲಿ ಕೊಟ್ಟ ನಿರುದ್ಯೋಗಿ ಯುವಕರಿಗೆ 5 ಸಾವಿರ ರೂ. ಕೊಡುವ ಭರವಸೆ ಯಾಕೆ ಈಡೇರಿಸಲಿಲ್ಲ? ಎಂದು ಸವಾಲು ಹಾಕಿದರು. ಇದು ಕಾಂಗ್ರೆಸ್- ಬಿಜೆಪಿ ನಡುವಿನ ವ್ಯತ್ಯಾಸ. ಬಿಜೆಪಿ ನುಡಿದಂತೆ ನಡೆಯುವ ಪಕ್ಷ. 2023ರ ಚುನಾವಣೆಯಲ್ಲೂ ನಮ್ಮ ವಿಶ್ವಾಸ ಬಹುಮತದ ಅಧಿಕಾರವಾಗಿ ಪರಿವರ್ತನೆ ಆಗಲಿದೆ ಎಂದು ತಿಳಿಸಿದರು.

ಕಾಂಗ್ರೆಸ್‍ನಲ್ಲಿ 4 ಸಿಎಂ ಅಭ್ಯರ್ಥಿಗಳು
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶೋಭಾ ಕರಂದ್ಲಾಜೆ, ಕಾಂಗ್ರೆಸ್ ಪಕ್ಷದಲ್ಲಿ 4 ಮುಖ್ಯಮಂತ್ರಿ ಅಭ್ಯರ್ಥಿಗಳಿದ್ದಾರೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ಅವರಲ್ಲದೆ, ಮಲ್ಲಿಕಾರ್ಜುನ ಖರ್ಗೆ ಅವರೂ ಸಿಎಂ ಅಭ್ಯರ್ಥಿ ಆಗಿದ್ದಾರೆ. ಇದರ ಬಗ್ಗೆಯೇ ಜಗಳವಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: Musk Follows Modi: ಟ್ವಿಟರ್‌ನಲ್ಲಿ ಮೋದಿಯನ್ನು ಫಾಲೋ ಮಾಡಿದ ಎಲಾನ್‌ ಮಸ್ಕ್‌; ಭಾರತಕ್ಕೂ ಬರುತ್ತಾ ಟೆಸ್ಲಾ?

Exit mobile version