Site icon Vistara News

BJP Karnataka:‌ ಬಿಜೆಪಿ ಪಟ್ಟಿ ಬಹುತೇಕ ಸಿದ್ಧ; ಬುಧವಾರದವರೆಗೆ ಬಿಡುಗಡೆ ಇಲ್ಲ: ದಿಢೀರನೆ ಬೆಂಗಳೂರಿನ ಕಡೆಗೆ ಯಡಿಯೂರಪ್ಪ

bjp karnataka ticket may be announced wednesday

#image_title

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಟಿಕೆಟ್‌ ಘೋಷಿಸಲು ಭಾನುವಾರ ದಿನಪೂರ್ತಿ ಸಭೆಯ ನಂತರ ಸೋಮವಾರವೂ ಬಿಜೆಪಿ ಸಭೆಗಳು ಮುಂದುವರಿದಿವೆ. ಅನೇಕ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮವಾಗಿದ್ದರೂ ಇನ್ನೂ ಕಗ್ಗಂಟಾಗಿರುವ ಅನೇಕ ಕ್ಷೇತ್ರಗಳಿವೆ. ಇದೇ ವೇಳೆ ಬಿಜೆಪಿಯ ಅನೇಕ ಆಕಾಂಕ್ಷಿಗಳಿಗೆ ಮೌಖಿಕವಾಗಿ ಹೈಕಮಾಂಡ್‌ ಸೂಚನೆ ನೀಡಿದ್ದು, ನಾಮಪತ್ರ ದಿನಾಂಕವನ್ನೂ ನಿಗದಿಪಡಿಸಿಕೊಂಡಿದ್ದಾರೆ. ಮಂಗಳವಾರ ಅಥವಾ ಬುಧವಾರ ಪಟ್ಟಿ ಬಿಡುಗಡೆ ಆಗಬಹುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನವದೆಹಲಿಯಲ್ಲಿ ಮಾರಥಾನ್‌ ಸಭೆಯ ನಂತರ ಮಾತನಾಡಿದ ಪ್ರಲ್ಹಾದ ಜೋಶಿ, ಬಿಜೆಪಿ ಪಟ್ಟಿ ಬಹುತೇಕ ಸಿದ್ಧವಾಗಿದೆ. ಶೀಘ್ರದಲ್ಲೆ ಬಿಡುಗಡೆ ಆಗುತ್ತದೆ ಎಂದಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಮಂಗಳವಾರ ಮತ್ತೊಂದು ಸುತ್ತಿನ ಸಭೆ ಇದೆ. ಮಂಗಳವಾರ ಅಥವಾ ಬುಧವಾರ ಪಟ್ಟಿ ಬಿಡುಗಡೆ ಆಗಲಿದೆ ಎಂದರು.

ರಾಜ್ಯ ಹಾಗೂ ಕೇಂದ್ರದ ಕೆಲಸಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತೇವೆ. ನಾನು ಈಗಾಗಲೆ ಶೀಗ್ಗಾಂವಿಯಲ್ಲಿ ಸ್ಪರ್ಧಿಸಿದ್ದೇನೆ, ಬೇರೆ ಕ್ಷೇತ್ರದಲ್ಲಿ ಹೋಗುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದೇನೆ. ಇದೀಗ ಬಿಡುಗಡೆ ಆಗಲಿರುವ ಪಟ್ಟಿಯಲ್ಲಿ ಶಿಗ್ಗಾಂವಿ ಅಭ್ಯರ್ಥಿ ಹೆಸರೂ ಇರಲಿದೆ ಎಂದರು.

ದೆಹಲಿಯಲ್ಲಿ ನಡೆಯುತ್ತಿರಯವ ಸರಣಿ ಸಭೆಯಲ್ಲಿ ರಾಜ್ಯದ ಎಲ್ಲ ಕ್ಷೇತ್ರಗಳ ಕುರಿತೂ ಚರ್ಚೆ ನಡೆಸಲಾಗಿದೆ. ಇವುಗಳಲ್ಲಿ ಸುಮಾರು ನೂರು ಕ್ಷೇತ್ರಗಳ ಅಭ್ಯರ್ಥಿಗಳ ಕುರಿತು ಯಾವುದೇ ಆಕ್ಷೇಪಣೆ ಇಲ್ಲ ಎನ್ನಲಾಗಿದೆ. ಆದರೆ ಕೆಲವು ಕ್ಷೇತ್ರಗಳಲ್ಲಿ ಒಬ್ಬರಿಗಿಂತ ಹೆಚ್ಚು ಪ್ರಬಲ ಆಕಾಂಕ್ಷಿಗಳಿದ್ದು, ಆಯ್ಕೆ ಕಷ್ಟವಾಗುತ್ತಿದೆ.

ಸುಮಾರು 130-140 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಬೇಕು ಎಂದು ಬಿಜೆಪಿ ನಿರ್ಧಾರ ಮಾಡಿದೆ. ಇದಕ್ಕೆ ಪ್ರಮುಖವಾಗಿ 10 ಕ್ಷೇತ್ರಗಳು ಅಡ್ಡಿಯಾಗಿವೆ ಎನ್ನಲಾಗಿದೆ.

ಕುಂದಗೋಳ ಕ್ಷೇತ್ರಕ್ಕೆ ಎಸ್. ಐ ಚಿಕ್ಕನಗೌಡರ್ ಹಾಗೂ ಎಂ. ಆರ್. ಪಾಟೀಲ್ ಮಧ್ಯೆ ಫೈಟ್ ನಡೆಯುತ್ತಿದೆ
ಅಥಣಿ ಕ್ಷೇತ್ರಕ್ಕೆ ಮಹೇಶ್ ಕುಮಟಳ್ಳಿ ಹಾಗೂ ಲಕ್ಷಣ್ ಸವದಿ ಮಧ್ಯೆ ಫೈಟ್ ನಡೆಯುತ್ತಿದೆ
ಕಾಗವಾಡ ಕ್ಷೇತ್ರಕ್ಕೆ ಶ್ರೀಮಂತ್ ಪಾಟೀಲ್ ಹಾಗೂ ಭರಮಗೌಡ
ಕನಕಗಿರಿ ಕ್ಷೇತ್ರಕ್ಕೆ ಬಸವರಾಜ್ ದಡೆಸೂಗೂರು ಹಾಗೂ ಪಿ. ವಿ. ರಾಜ್ ಗೋಪಾಲ್
ಚನ್ನಗಿರಿ ಕ್ಷೇತ್ರಕ್ಕೆ ಮಾಡಾಳ್‌ ಮಲ್ಲಿಕಾರ್ಜುನ ಹಾಗೂ ಶಿವಕುಮಾರ್
ತುಮಕೂರು ನಗರ ಜ್ಯೋತಿ ಗಣೇಶ್ ಹಾಗೂ ಸೊಗಡು ಶಿವಣ್ಣ
ಶಿವಮೊಗ್ಗ ನಗರ ಕ್ಷೇತ್ರಕ್ಕೆ ಕೆ. ಎಸ್. ಈಶ್ವರಪ್ಪ ಹಾಗೂ ಆಯನೂರ್ ಮಂಜುನಾಥ್
ವಿಜಯನಗರ ಕ್ಷೇತ್ರಕ್ಕೆ ರವೀಂದ್ರ ಹಾಗೂ ಉಮೇಶ್ ಶೆಟ್ಟಿ
ಬಸವನಗುಡಿ ಕ್ಷೇತ್ರಕ್ಕೆ ರವಿ ಸುಬ್ರಹ್ಮಣ್ಯ ಹಾಗೂ ತೇಜಸ್ವಿನಿ ಅನಂತ್ ಕುಮಾರ್
ಗಾಂಧಿನಗರ ಕ್ಷೇತ್ರಕ್ಕೆ ಸಪ್ತಗಿರಿ ಗೌಡ ಹಾಗೂ ಕೃಷ್ಣಯ್ಯ ಶೆಟ್ಟಿ ಮಧ್ಯೆ ಫೈಟ್ ನಡೆಯುತ್ತಿದೆ.

ಈ ಕ್ಷೇತ್ರಗಳಲ್ಲಿ ಪ್ರಮುಖವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ನಂತರದಲ್ಲಿ ಪಟ್ಟಿಯನ್ನು ಘೋಷಣೆ ಮಾಡಲು ಬಿಜೆಪಿ ನಿರ್ಧಾರ ಮಾಡಿದೆ. ಆದರೆ ಈಗಾಗಲೆ ಹೆಸರು ಅಂತಿಮಗೊಂಡಿರುವವರಿಗೆ ಮೌಖಿಕವಾಗಿ ತಿಳಿಸಲಾಗುತ್ತಿದೆ. ಈಗಾಗಲೆ ಅನೇಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಕೆಲವರು ದಿನಾಂಕವನ್ನೂ ನಿಗದಿಪಡಿಸಿಕೊಂಡು ಬೆಂಬಲಿಗರ ಮೂಲಕ ಪ್ರಕಟಿಸಿದ್ದಾರೆ.

ನಾಮಪತ್ರ ಸಲ್ಲಿಕೆ ದಿನಾಂಕ ಘೋಷಣೆ

ಇನ್ನೂ ದೆಹಲಿಯಲ್ಲಿ ಬಿಜೆಪಿ ಟಿಕೆಟ್‌ ಅಯ್ಕೆ ಪ್ರಕ್ರಿಯೆ ನಡೆಯುತ್ತಲೇ ಇದೆ. ಆದರೆ ಅನೇಕ ಆಕಾಂಕ್ಷಿಗಳಿಗೆ ನಾಮಪತ್ರ ಸಲ್ಲಿಸಲು ಸಿದ್ಧವಾಗುವಂತೆ ಬಿಜೆಪಿ ನಾಯಕರು ತಿಳಿಸಿದ್ದಾರೆ. ಈಗಾಗಲೆ ಅನೇಕ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಲು ಸಿದ್ಧವಾಗುತ್ತಿದ್ದಾರೆ. ಏಪ್ರಿಲ್‌ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗುತ್ತದೆ, ಏಪ್ರಿಲ್‌ 20ರವರೆಗೆ ಅವಕಾಶವಿದೆ. ರಾಜ್ಯ ಅನೇಕ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು ಈಗಾಗಲೆ ನಾಮಪತ್ರ ಸಲ್ಲಿಕೆಗೆ ದಿನಾಂಕ ನಿಗದಿ ಮಾಡಿಕೊಂಡಿದ್ದಾರೆ.

ಹೊಳಲ್ಕೆರೆ ಕ್ಷೇತ್ರದಿಂದ ಎಂ. ಚಂದ್ರಪ್ಪ ಏಪ್ರಿಲ್‌ 19ರಂದು
ಹಿರೇಕೆರೂರಿನಿಂದ ಬಿ.ಸಿ. ಪಾಟೀಲ್‌ ಏಪ್ರಿಲ್‌ 18ರಂದು
ಬ್ಯಾಡಗಿ ಕ್ಷೇತ್ರಕ್ಕೆ ವಿರೂಪಾಕ್ಷಪ್ಪ ಕೆ. ಬಳ್ಳಾರಿ ಏಪ್ರಿಲ್‌ 14ರಂದು
ವಿಜಯಪುರದಲ್ಲಿ ಬಸನಗೌಡ ಪಾಟೀಲ್‌ ಯತ್ನಾಳ್‌ ಶೀಘ್ರದಲ್ಲೆ
ಶೃಂಗೇರಿಯಿಂದ ಡಿ.ಎನ್‌. ಜೀವರಾಜ್‌ ಏಪ್ರಿಲ್‌ 13ರಂದು
ಹಾಸನದಿಂದ ಪ್ರೀತಂ ಜೆ. ಗೌಡ ಏಪ್ರಿಲ್‌ 14ರಂದು ನಾಮಪತ್ರ ಸಲ್ಲಿಕೆಗೆ ದಿನಾಂಕ ನಿಗದಿ ಮಾಡಿಕೊಂಡಿದ್ದಾರೆ.

ಆದರೆ ಯಾರೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ತಮ್ಮ ಬೆಂಬಲಿಗರ ಮೂಲಕ ಸಾಮಾಜಿಕ ಜಾಲತಾಣ, ವಾಟ್ಸ್‌ಅಪ್‌ ಮೂಲಕ ಹರಿಬಿಟ್ಟಿದ್ದಾರೆ. ಟಿಕೆಟ್‌ ಘೋಷಣೆಗೂ ಮುನ್ನವೇ ಅಧಿಕೃತವಾಗಿ ಘೋಷಣೆ ಮಾಡಿದರೆ ತಪ್ಪು ಸಂದೇಶ ಹೋಗಬಹುದು ಎಂಬ ಕಾರಣಕ್ಕೆ ಈ ತಂತ್ರ ಮಾಡಿದ್ದಾರೆ. ಇನ್ನು ಕೆಲವು ಆಕಾಂಕ್ಷಿಗಳು ತಮಗೇ ಟಿಕೆಟ್‌ ನೀಡುವಂತೆ ವರಿಷ್ಠರ ಮೇಲೆ ಒತ್ತಡ ಹೇರಲೂ ಹೀಗೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಕುತೂಹಲ ಮೂಡಿಸಿದ ಬಿಎಸ್‌ವೈ ನಡೆ

ಶನಿವಾರದಿಂದ ಸೋಮವಾರದವರೆಗೆ ನಿರಂತರ ಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಭಾಗವಹಿಸಿದರು. ಆದರೆ ಮಂಗಳವಾರವೂ ಸಭೆ ನಡೆಯುತ್ತದೆ ಎಂದು ವರಿಷ್ಠರು ತಿಳಿಸಿದಾಗ ಯಡಿಯೂರಪ್ಪ ದಿಢೀರನೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜತೆಗೆ ಮಾತನಾಡಿದ ಪ್ರಲ್ಹಾದ ಜೋಶಿ, ಯಡಿಯೂರಪ್ಪ ಅವರು ಮಾರ್ಗದರ್ಶನ ನೀಡಿದ್ದಾರೆ. ತುರ್ತು ಕಾರ್ಯದ ನಿಮಿತ್ತ ಅವರು ತೆರಳಿದ್ದಾರೆ ಎಂದು ಹೇಳಿದ್ದಾರೆ.

ಸಭೆಯಲ್ಲಿ ಭಾಗವಹಿಸದೇ ಇರಲು ಮುನಿಸು ಕಾರಣವೇ ಎಂಬ ಪ್ರಶ್ನೆಗಳು ಎದ್ದಿದ್ದು, ಯಡಿಯೂರಪ್ಪ ಅವರು ಬೆಂಗಳೂರಿಗೆ ಆಗಮಿಸಿದ ನಂತರ

ಇದನ್ನೂ ಓದಿ: BJP Karnataka: ದೆಹಲಿಯಲ್ಲಿ ನಡೆಯಬೇಕಿದ್ದ ಬಿಜೆಪಿ ಟಿಕೆಟ್‌ ಆಯ್ಕೆ ಪೂರ್ವಭಾವಿ ಸಭೆ ರದ್ದು

Exit mobile version