Site icon Vistara News

BJP Karnataka: ಅನಂತಕುಮಾರ್‌ ನೆಟ್ಟ ಗಿಡ ಒಣಗುತ್ತಿದೆ ಎಂದ ತೇಜಸ್ವಿನಿ: ವಿಷಯವನ್ನು ರಾಜಕೀಯಕ್ಕೆ ತಿರುಗಿಸಿದ ನೆಟ್ಟಿಗರು

bjp karnataka vice president tejaswini ananthkumar tweet

#image_title

ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರಲ್ಲಿ ಪ್ರಮುಖರಾದ ಅನಂತಕುಮಾರ್‌ ಅವರು ಲಾಲ್‌ಬಾಗ್‌ನಲ್ಲಿ ನೆಟ್ಟ ಗಿಡ ಒಣಗಿ ಹೋಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಹಾಗೂ ಅನಂತಕುಮಾರ್‌ ಪತ್ನಿ ಟ್ವೀಟ್‌ ಮಾಡಿರುವುದು ಪಕ್ಷದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ತೇಜಸ್ವಿನಿ ಅನಂತಕುಮಾರ್‌, “ಈ ಗಿಡ ಜೂನ್ 5, 2015 ರಂದು ಲಾಲ್ ಬಾಗ್ ಪಶ್ಚಿಮ ದ್ವಾರದ ಬಳಿ ಶ್ರೀ. ಅನಂತಕುಮಾರ್ ಅವರು ನೆಟ್ಟಿದ್ದು. ಯಾಕೋ ಮುದುರಿ ಹೋಗಿದೆ. ಲಾಲ್ ಬಾಗ್ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದೇವೆ. ಶ್ರೀ ಅನಂತಕುಮಾರರ ಅನುಪಸ್ಥಿತಿಯಲ್ಲಿ ಈ ಗಿಡವನ್ನು ಉಳಿಸುವ ಜವಾಬ್ದಾರಿ ನಮ್ಮದು, ಎಂಬುದು ನನ್ನ ಭಾವನೆ” ಎಂದಿದ್ದಾರೆ.

ತೇಜಸ್ವಿನಿ ಅನಂತಕುಮಾರ್‌ ಅವರು ಎಲ್ಲಿಯೂ ಇದು ಪಕ್ಷದ ಕುರಿತಾದದ್ದು ಅಥವಾ ಮಂಗಳವಾರ ಜಗದೀಶ್‌ ಶೆಟ್ಟರ್‌ ಸುದ್ದಿಗೋಷ್ಠಿ ನಡೆಸಿದ ಬಿ.ಎಲ್‌. ಸಂತೋಷ್‌ ಅವರ ಕುರಿತಾದದ್ದು ಎಂದು ಹೇಳಿಲ್ಲ. ಆದರೆ ನೆಟ್ಟಿಗರು ಈ ವಿಚಾರವನ್ನು ರಾಜಕೀಯಕ್ಕೆ ತಾಳೆ ಮಾಡುತ್ತಿದ್ದಾರೆ.

ಈಗಿನ ಬಿಜೆಪಿ ಪರಿಸ್ಥಿತಿ ನೋಡಿ ಪಾಪ ನೊಂದು ಬೆಂದಿರಬೇಕು ನೋಡಿ. ಸ್ವಲ್ಪ ನೀರ ಹಾಕಿ ಸಮಾಧಾನ ಮಾಡಿ ಎಂದು ಪ್ರಾಬುದ್ಧ ಭಾರತ್‌ ಎನ್ನುವವರು ಟ್ವೀಟ್‌ ಮಾಡಿದ್ದಾರೆ. “ಕಮಲ ಕರ್ನಾಟಕದಲ್ಲಿ, ಈ ಗಿಡ ಲಾಲ್ಬಾಗ್ ನಲ್ಲಿ!” ಎಂದು ನವೀಣ್‌ ಕುಮಾರ್‌ ಮ ಹಂಚಿನಮನಿ ಹೇಳಿದ್ದಾರೆ.

“B L ಸಂತೋಷ್, ಜೋಶಿ ಇಂದ ಗಿಡ ಮುದಾರಿ ಹೋಗಿದೆ ಅಷ್ಟೇ ಮೇಡಂ” ಎಂದು ಅಕ್ಷಯ್‌ ಎಂ.ಕೆ. ಎನ್ನುವವರು ಟ್ವೀಟ್‌ ಮಾಡಿದ್ದಾರೆ. “ಎಲ್ಲಾ ಗಿಡಗಳನ್ನು ಉಳಿಸುವ ಜವಾಬ್ದಾರಿ ಎಲ್ಲರದ್ದೂ. ಅದರಲ್ಲಿ, ಅವರು ನೆಟ್ಟಿದ್ದು ಇವರು ನೆಟ್ಟಿದ್ದು ಅಂತ ಏನಿಲ್ಲ. ಗಿಡಗಳೆಲ್ಲ ಒಂದೇ. ನೀರು ಹಾಕಿ ಸಂರಕ್ಷಣೆ ಮಾಡೋದು ಎಲ್ಲರ ಕರ್ತವ್ಯ.” ಎಂದು ಅಪೂರ್ವ ಎನ್ನುವವರು ಹೇಳಿದ್ದಾರೆ.

“ನೋಡಿ ಅನಂತ್ ಕುಮಾರ್ ಅವ್ರೆ ನೆಟ್ಟಿರೋ ಗಿಡಕ್ಕೆ ಈ ಸ್ಥಿತಿ, ಇನ್ನ (ಅ)ಸಾಮಾನ್ಯ ಜನರ ಪರಿಸ್ಥಿತಿ ಹೇಗಿರಬೇಡ?? ರಾಜಕೀಯ ಬಿಡೋಣ, ಪ್ರಜಾಕೀಯ ಮಾಡೋಣ” ಎಂದು ವಿನಯ್‌ ಎನ್ನುವವರು ಹೇಳಿದ್ದಾರೆ.

ತೇಜಸ್ವಿನಿ ಅವರು 2019ರಲ್ಲಿ ಲೋಕಸಭೆ ಟಿಕೆಟ್‌ ಕೈತಪ್ಪಿದಾಗಲೂ ಆರ್‌ಎಸ್‌ಎಸ್‌ ಪ್ರಾರ್ಥನೆಯನ್ನು ಉಲ್ಲೇಖಿಸಿ, ತತ್ವ ಸಿದ್ಧಾಂತಕ್ಕೆ ಬದುಕಬೇಕೆ ವಿನಃ ವೈಯಕ್ತಿಕ ಸ್ವಾರ್ಥಕ್ಕಲ್ಲ ಎಂಬ ಪರೋಕ್ಷ ಸಂದೇಶವನ್ನು ನೀಡಿದ್ದರು.

ಇದನ್ನೂ ಓದಿ: Tejaswini Ananth Kumar | ತೇಜಸ್ವಿನಿ ಅನಂತಕುಮಾರ್‌ಗೆ ʼಬಸವಾತ್ಮಜೆʼ ಪ್ರಶಸ್ತಿ

Exit mobile version