Site icon Vistara News

BJP Karnataka: ಬಿ.ಎಲ್‌. ಸಂತೋಷ್‌ ಹೇಳಿದಂತೆ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ: ಸಭೆ ನಂತರ ಬಿ.ಎಸ್‌. ಯಡಿಯೂರಪ್ಪ ಮಾತು

Kaveri guest house in Bengaluru

#image_title

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ (BJP Karnataka) ಎರಡು ಬಣ ಎಂದೇ ಹೇಳಲಾಗುವ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಮಂಗಳವಾರ ಬೆಳಗ್ಗೆ ಮಹತ್ವದ ಸಭೆ ನಡೆಸಿದ್ದಾರೆ.

ಬಿ.ಎಸ್‌. ಯಡಿಯೂರಪ್ಪ ಅವರ ನಿವಾಸ ʼಕಾವೇರಿʼಗೆ ಆಆಗಮಿಸಿದ ಬಿ.ಎಲ್‌. ಸಂತೋಷ್‌ ಸುಮಾರು ಅರ್ಧ ಗಂಟೆ ಸಭೆ ನಡೆಸಿದರು. ಮುಂದೆ ರಾಷ್ಟ್ರೀಯ ನಾಯಕರ ನಿರಂತರ ಸಭೆಗಳು, ಬಂಡಾಯ ಎದ್ದಿರುವ ಕ್ಷೇತ್ರಗಳ ಕುರಿತಂತೆ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ.

ನಂತರ ಸುದ್ದಿಗಾರರ ಜತೆಗೆ ಮಾತನಡಿದ ಬಿ.ಎಸ್‌. ಯಡಿಯೂರಪ್ಪ, ಇವತ್ತಿನಿಂದ ಚುನಾವಣೆ ಮುಗಿಯುವವರೆಗೂ ನನ್ನ ಪ್ರವಾಸ ಆರಂಭವಾಗಿದೆ. ಜಗಳೂರು, ಮಾಯಕೊಂಡ, ದಾವಣಗೆರೆ ಭಾಗದಲ್ಲಿ ಪ್ರವಾಸ. ವಾತಾವರಣ ನಮ್ಮ ನಿರೀಕ್ಷೆ ಮೀರಿ ಚೆನ್ನಾಗಿದೆ. ಎಲ್ಲ ಕಡೆ ಬಿಜೆಪಿ ಗಾಳಿ ಬೀಸುತ್ತಿದೆ.

ಮಾಧ್ಯಮಗಳನ್ನು ಮೆಚ್ಚಿಸಲು ನಾನು ಈ ಮಾತು ಹೇಳುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‌ ಶಾ ಬಂದ ಮೇಲೆ ಇನ್ನೂ ದೊಡ್ಡ ಅಲೆ ಏಳುತ್ತದೆ. 140ಕ್ಕೂ ಹೆಚ್ಚು ಸೀಟ್‌ ಬಿಜೆಪಿ ಗೆದ್ದು ಸರ್ಕಾರ ರಚನೆ ಮಾಡುವುದು ನಿಶ್ಚಿತ. ಯಾರದೇ ಬೆಂಬಲ ಇಲ್ಲದೆ ಸರ್ಕಾರ ಮಾಡುತ್ತೇವೆ ಎಂದರು.

ಬಿ.ಎಲ್‌. ಸಂತೋಷ್‌ ಅವರೊಂದಿಗಿನ ಸಭೆ ಕುರಿತು ಪ್ರತಿಕ್ರಿಯಿಸಿ, ಪ್ರಸಕ್ತ ರಾಜಕೀಯ ಪರಿಸ್ಥಿತಿ ಚರ್ಚೆ ಮಾಡಿದ್ದಾರೆ. ನಮ್ಮ ಹಿರಿಯರಾಗಿ, ಎಲ್ಲೆಲ್ಲಿ ಏನೇನು ಮಾಡಬೇಕು ಎಂದು ಸಲಹೆ ನೀಡಿದ್ದಾರೆ ಹಿರಿಯರಾಗಿ. ಅದರಂತೆಯೇ ನಾವೆಲ್ಲ ಓಡಾಟ ಮಾಡುತ್ತಿದ್ದೇವೆ. ನಡೆಯುತ್ತಿರುವ ಕೆಲಸಗಳ ಕುರಿತು ಅವರೂ ಸಮಾಧಾನವಾಗಿದ್ದಾರೆ. 140ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂಬ ವಿಶ್ವಾಸ ಅವರಿಗೂ ಇದೆ ಎಂದರು.

ಇದನ್ನೂ ಓದಿ: BL Santhosh : ಚರೈವೇತಿ ಚರೈವೇತಿ, ಯಹೀ ತೋ ಮಂತ್ರ್‌ ಹೈ ಅಪ್ನಾ; ಶೆಟ್ಟರ್‌ ಆರೋಪಗಳಿಗೆ ಪ್ರತಿಯಾಗಿ ಬಿ.ಎಲ್‌ ಸಂತೋಷ್‌ ಹೇಳಿದ್ದೇನು?

Exit mobile version