1. ರಾಮ ಭಕ್ತರ ಟಾರ್ಗೆಟ್; ಸರ್ಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು
ಬೆಂಗಳೂರು: ಅತ್ತ ರಾಮಜನ್ಮಭೂಮಿ (Ram Janmabhoomi) ಅಯೋಧ್ಯೆಯಲ್ಲಿ ಜನವರಿ 22ರಂದು ರಾಮಮಂದಿರದ (Ram Mandir) ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗುತ್ತಿದ್ದರೆ, ಇತ್ತ ರಾಜ್ಯದಲ್ಲಿ ಅದೇ ರಾಮಜನ್ಮಭೂಮಿಗಾಗಿ ಹೋರಾಟ ಮಾಡಿದ್ದ ಪ್ರಕರಣವೊಂದು ರಿಓಪನ್ ಆಗಿದ್ದು, ಹೋರಾಟಗಾರರ ಬಂಧನಕ್ಕೆ ಮುಂದಾಗಲಾಗಿದೆ. ಇದು ಈಗ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ರಾಜ್ಯ ಸರ್ಕಾರದ ಈ ನಿಲುವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ನಾಳೆ (ಬುಧವಾರ) ರಾಜ್ಯಾದ್ಯಂತ ಬಂದ್‌ಗೆ ಕರೆ ಕೊಟ್ಟಿದೆ. ಅಲ್ಲದೆ, ಬಿಜೆಪಿ ನಾಯಕರೆಲ್ಲರೂ ಈಗ ರಾಜ್ಯ ಸರ್ಕಾರದ ವಿರುದ್ಧ ಮುಗಿ ಬಿದ್ದಿದ್ದಾರೆ. ಹೋರಾಟಗಾರರ ಬೆನ್ನಿಗೆ ನಿಲ್ಲುವುದಾಗಿ ಹೇಳಿದ್ದಾರೆ. ರಾಮ ಭಕ್ತರನ್ನು ಕಾಂಗ್ರೆಸ್ ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂದೂ ಆರೋಪಿಸಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Ram Janmabhoomi: ಅಯೋಧ್ಯೆ ಕೇಸ್ ರಿಓಪನ್; ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ: ವಿಜಯೇಂದ್ರ
ಈ ಸುದ್ದಿಯನ್ನೂ ಓದಿ : Rama Mandir Case : ಕರಸೇವಕರ ಬಂಧನದ ಹಿಂದೆ ದ್ವೇಷ ರಾಜಕಾರಣವಿಲ್ಲ ಎಂದ ಸಿದ್ದರಾಮಯ್ಯ
2. ಜಪಾನ್‌ನಲ್ಲಿ ವಿಮಾನ ದುರಂತ; 6 ಕೋಸ್ಟ್ ಗಾರ್ಡ್ ಸಿಬ್ಬಂದಿ ಪೈಕಿ ಐವರು ಸಾವು
ಟೋಕಿಯೊ: ಟೋಕಿಯೋ ವಿಮಾನ ನಿಲ್ದಾಣದಲ್ಲಿ (Tokyo international Airport) ಇಳಿಯುತ್ತಿದ್ದ ವಿಮಾನವೊಂದು ನಿಂತಿದ್ದ ಕೋಸ್ಟ್ ಗಾರ್ಡ್ ಪ್ಲೇನ್‌ಗೆ ಡಿಕ್ಕಿಯಾದ ಘಟನೆಯಲ್ಲಿ, ವಿಮಾನದಲ್ಲಿದ್ದ ಕರಾವಳಿ ಕಾವಲು ಪಡೆಯ ಆರು ಸಿಬ್ಬಂದಿಯ ಪೈಕಿ ಐವರು ಮೃತಪಟ್ಟಿದ್ದಾರೆ(Japan Planes collide) ಎಂದು ಜಪಾನ್ ಸಾರಿಗೆ ಸಚಿವರು ತಿಳಿಸಿದ್ದಾರೆ(Japanese transport minister). ಬೆಂಕಿ ಹೊತ್ತಿ ಉರಿದ ವಿಮಾನವನ್ನು ಕೋಸ್ಟ್ ಗಾರ್ಡ್‌ನ Ma72 fixed-wing ಎಂದು ಗುರುತಿಸಲಾಗಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
3. 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ; ರಾಜ್ಯ ಸರ್ಕಾರ ಸಲಹೆ
ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಕೊರೊನಾ (Coronavirus News) ರೂಪಾಂತರ ಜೆ.ಎನ್- 1 ಸೋಂಕು ಕಾಣಿಸಿಕೊಂಡಿದ್ದರೂ ಜನತೆ ಆತಂಕಗೊಳ್ಳುವುದು ಬೇಡ. ಈ ಸಂಬಂಧ ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ, 60 ವರ್ಷ ಮೇಲ್ಪಟ್ಟವರು ಹಾಗೂ ದೀರ್ಘವ್ಯಾದಿಯಿಂದ ಬಳಲುತ್ತಿರುವವರು ಬುಧವಾರದಿಂದಲೇ ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ವಾಕ್ಸಿನ್ ತೆಗೆದುಕೊಳ್ಳಬಹುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ (Medical Education Minister Dr Sharan Prakash Patil) ಸಲಹೆ ನೀಡಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
4. Hit and Run Law: ಹೆದ್ದಾರಿ, ರಸ್ತೆ ಬಂದ್ ಮಾಡಿ ಪ್ರತಿಭಟಿಸುತ್ತಿರುವ ಚಾಲಕರು! ಕಾರಣ ಏನು?
ನವದೆಹಲಿ: ಹೊಸ ವರ್ಷದ (New year) ಮೊದಲ ದಿನದಿಂದಲೇ ರಾಷ್ಟ್ರಾದ್ಯಂತ ಸಾರಿಗೆ ಮುಷ್ಕರಕ್ಕೆ (Truck Drivers Protest) ಕರೆ ನೀಡಲಾಗಿದ್ದು, ಮಂಗಳವಾರ ಹಲವು ರಾಜ್ಯಗಳಲ್ಲಿ ಭಾರೀ ತೊಂದರೆಯುಂಟಾಗಿದೆ. ಹಿಟ್ ಆ್ಯಂಡ್ ರನ್ ಅಪಘಾತ (Hit and Run Law) ಪ್ರಕರಣಕ್ಕೆ ಸಂಬಂಧಿಸಿದ ಕಾನೂನಿನಲ್ಲಿ ಸೇರಿಸಲಾಗಿರುವ ಹೊಸ ದಂಡ ನಿಬಂಧನೆಯ ವಿರುದ್ಧ ಟ್ರಕ್ ಚಾಲಕರು ಮುಷ್ಕರವನ್ನು ನಡೆಸುತ್ತಿದ್ದಾರೆ. ಭಾರತೀಯ ದಂಡ ಸಂಹಿತೆ ಬದಲಿಗೆ ಹೊಸದಾಗಿ ಜಾರಿಗೆ ತಂದಿರುವ ಭಾರತೀಯ ನ್ಯಾಯ ಸಂಹಿತಾ (BNS) ಕಾನೂನಿನಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಚಾಲಕರಿಗೆ 10 ವರ್ಷಗಳವರೆಗೆ ಶಿಕ್ಷೆ ಸೇರಿದಂತೆ ಕಠಿಣವಾದ ನಿಬಂಧನೆಯನ್ನು ಸೇರಿಸಲಾಗಿದೆ(10 Years Jail). ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
5. ಬಿಜೆಪಿ ಸೇರುವ ನಾಯಕರಿಗೂ ಇನ್ನು ಸ್ಕ್ರೀನಿಂಗ್! ಸಮಿತಿ ರಚನೆ
ಹೊಸದಿಲ್ಲಿ: ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ (Lok Sabha Election 2024) ಮುನ್ನ ಬಿಜೆಪಿಗೆ ಸೇರಲು ಮುಂದಾಗುವ ಇತರ ಪಕ್ಷಗಳ ನಾಯಕರ ಸಾಮರ್ಥ್ಯ, ಕ್ರಿಯಾಶೀಲತೆ ಇತ್ಯಾದಿಗಳನ್ನು ಪರಿಶೀಲಿಸಲು ಬಿಜೆಪಿ ಹೊಸದೊಂದು ಫಿಲ್ಟರ್ ಸೇರಿಸಲು ಮುಂದಾಗಿದೆ. ಇದಕ್ಕಾಗಿ ಹೊಸ ಸಮಿತಿಯನ್ನು (bjp screening committee) ರಚಿಸಲಾಗುತ್ತಿದ್ದು, ಅದರ ಪರಿಶೀಲನೆಯ ಬಳಿಕ ನಾಯಕರ ಸೇರುವಿಕೆ ನಿರ್ಧಾರವಾಗಲಿದೆಯಂತೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
6. ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ ಸತ್ತಿದ್ದಾನೆಯೇ? ಫ್ಯಾಕ್ಟ್ ಚೆಕ್ ಇಲ್ಲಿದೆ
ನವದೆಹಲಿ: ಭಾರತಕ್ಕೆ ಮೋಸ್ಟ್ ವಾಂಟೆಡ್ ಆಗಿರುವ ಪಾಕಿಸ್ತಾನ ಮೂಲದ ಭಯೋತ್ಪಾದಕ ಮಸೂದ್ ಅಜರ್ (Masood Azhar) ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದಾನೆ ಎಂಬುದಾಗಿ ಸುದ್ದಿ ಹರಡುತ್ತಿದೆ. ಅದೇ ಸುದ್ದಿಯೀಗ ಚರ್ಚೆಯ ವಿಷಯವಾಗಿದೆ ಈಗ ಸಾಮಾಜಿಕ ಆ ರೀತಿಯ ಮಾಧ್ಯಮದಲ್ಲಿ ಹಲವಾರು ಪೋಸ್ಟ್ಗಳು ವೈರಲ್ ಆಗುತ್ತಿವೆ. ದಶಕಗಳಿಂದ ಭಾರತದಲ್ಲಿ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿಷಪ್ರಾಶನಕ್ಕೆ ಒಳಗಾಗಿ ಸಾವನ್ನಪ್ಪಿದ್ದಾನೆ ಎಂಬುವ ಪೋಸ್ಟರ್ಗಳು ಹರಿದಾಡಿದ ಬೆನ್ನಲ್ಲೇ ಮಸೂದ್ ವಿಡಿಯೊಗಳು ಹರಿದಾಡುತ್ತಿವೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
7. Gold Price: ಚಿನ್ನದ ಮೇಲೆ ಹೂಡಿಕೆಗೆ ಇದು ‘ಬಂಗಾರ’ದ ಸಮಯ; 10 ಗ್ರಾಂಗೆ 70 ಸಾವಿರ ರೂ.!?
ನವದೆಹಲಿ: ಆರ್ಥಿಕ ಹಿಂಜರಿತ ಅನಿಶ್ಚಿತತೆ (Economic recession)ಮತ್ತು ಭೌಗೋಳಿಕ ಸಂಘರ್ಷಗಳ (geopolitical tensions) ನಡುವೆಯೇ ಈ ವರ್ಷ ಬಂಗಾರದ ಬೆಲೆ ಭಾರೀ ಏರಿಕೆ ಕಾಣುವ ನಿರೀಕ್ಷೆ ಇದೆ ಎಂದು (Gold Price) ಅಖಿಲ ಭಾರತ ರತ್ನ ಮತ್ತು ಚಿನ್ನಾಭರಣ ದೇಶಿ ಸಮಿತಿ(GJC) ಅಭಿಪ್ರಾಯ ಮಾಡಿದೆ. 2024ರ ವರ್ಷದಲ್ಲಿ 10 ಗ್ರಾಮ್ ಬಂಗಾರ ಬೆಲೆ 70 ಸಾವಿರ ರೂ.ವರೆಗೂ ಏರಿಕೆಯಾಗುವ ನಿರೀಕ್ಷೆ ಇದೆ. ಹಣದುಬ್ಬರ ವಿರುದ್ಧ ಬಂಗಾರ ಖರೀದಿಯು ಈ ವರ್ಷ ಅತ್ಯುತ್ತಮ ಆಯ್ಕೆ ಎನಿಸಿಕೊಳ್ಳಲಿದೆ(best time to invest). ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
8. ಭಾರತ ತಂಡಕ್ಕೆ ಶುಭ್ಮನ್ ಗಿಲ್ ನಾಯಕ?
ಬೆಂಗಳೂರು: ಅಫ್ಘಾನಿಸ್ತಾನ ವಿರುದ್ಧದ ಮುಂಬರುವ ಟಿ20 ಐ ಸರಣಿಗೆ ಭಾರತದ ತಂಡವನ್ನು ಇನ್ನೂ ಘೋಷಿಸಲಾಗಿಲ್ಲ. ಆದರೂ ನಾಯಕತ್ವದ ರೇಸ್ನಲ್ಲಿ ಹೊಸ ಸುಳಿವು ಸಿಕ್ಕಿದೆ. ಅಫ್ಘಾನಿಸ್ತಾನದ ರಶೀದ್ ಖಾನ್ ಎದುರು ಭಾರತದ ನಾಯಕನಾಗಿ ಆರಂಭಿಕ ಆಟಗಾರ ಶುಬ್ಮನ್ ಗಿಲ್ (Shubhman Gill) ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
9. ಈ ವರ್ಷದ ದುಬಾರಿ ಚಿತ್ರ ಇದು; ಕಲೆಕ್ಷನ್‌ನಲ್ಲಿ ಕೆಜಿಎಫ್, ಬಾಹುಬಲಿ ಮೀರಿಸುತ್ತಾ?
ಮುಂಬೈ: ಹೊಸ ಭರವಸೆಯೊಂದಿಗೆ ಚಿತ್ರರಂಗ 2024ಕ್ಕೆ ಕಾಲಿಟ್ಟಿದೆ. ಸಿನಿಮಾ ರಂಗಕ್ಕೆ ಸಂಬಂಧಿಸಿ ಹೇಳುವುದಾದರೆ 2023 ಮಿಶ್ರಫಲ ತಂದುಕೊಟ್ಟಿತ್ತು. ಕಳೆದ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಬಾಲಿವುಡ್ ಚಿತ್ರಗಳು ಪಾರಮ್ಯ ಮೆರೆದಿದ್ದರೆ ಕನ್ನಡ ಸೇರಿದಂತೆ ದಕ್ಷಿಣ ಬಾರತ ಚಿತ್ರಗಳು ಸಾಧಾರಣ ಯಶಸ್ಸು ದಾಖಲಿಸಿದ್ದವು. ಹೀಗಾಗಿ ಈಗ 2024ರತ್ತ ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಈ ವರ್ಷ ಬಹು ನಿರೀಕ್ಷಿತ ಚಿತ್ರಗಳು ತೆರೆ ಬರಲಿವೆ. ಅದರಲ್ಲೂ ಭಾರತದ ಎರಡನೇ ಅತೀ ದೊಡ್ಡ ಬಜೆಟ್‌ನ ಸಿನಿಮಾ ಎಂದೇ ಕರೆಯಲ್ಪಡುವ ಪ್ರಭಾಸ್-ದೀಪಿಕಾ ಪಡುಕೋಣೆ (Prabhas-Deepika Padukone) ಅಭಿನಯದ ʼಕಲ್ಕಿ 2898 ಎಡಿʼ (Kalki 2898 AD) ಬಿಡುಗಡೆಯಾಗಲಿದ್ದು, ಹಲವು ದಾಖಲೆ ನಿರ್ಮಿಸಲಿದೆ ಎನ್ನುವ ಲೆಕ್ಕಾಚಾರ ಆರಂಭವಾಗಿದೆ (Expensive Film). ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
10. ಐಷಾರಾಮಿ ಕಾರು ಬಿಟ್ಟು ಲೋಕಲ್ ರೈಲು ಏರಿದ್ದೇಕೆ ಕೋಟ್ಯಧಿಪತಿ ಉದ್ಯಮಿ?
ಮುಂಬೈ: ಭಾರತದಲ್ಲಿ ರೈಲು ಸಂಚಾರ ವ್ಯವಸ್ಥೆ ಅತ್ಯಂತ ಜನಪ್ರಿಯ. ಬಹುತೇಕ ಮಂದಿ ತಮ್ಮ ದೈನಂದಿನ ಸಂಚಾರಕ್ಕೆ ರೈಲನ್ನೇ ಅವಲಂಬಿಸಿದ್ದಾರೆ. ಅದರಲ್ಲೂ ದೇಶದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ಹೆಚ್ಚಿನ ಮಂದಿ ರೈಲಿನಲ್ಲೇ ಓಡಾಡುತ್ತಾರೆ. ಇದೀಗ ಮುಂಬೈಯ ಲೋಕಲ್ ರೈಲಿನಲ್ಲಿ ಕೋಟ್ಯಧಿಪತಿ ಉದ್ಯಮಿ ಸಂಚರಿಸುತ್ತಿರುವ ವಿಡಿಯೊ ವೈರಲ್ ಆಗಿದೆ (Viral Video). ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.