Site icon Vistara News

Textbook Revision: ಪಠ್ಯ ತೆಗೆದ ಬರಗೂರು, ಚಕ್ರತೀರ್ಥ ಮೂತಿಗೆ ಒರೆಸಿದರು ಎಂದ ಬಿ.ಸಿ. ನಾಗೇಶ್‌

Baraguru ramachandrappa BC Nagesh Rohith Chakrateertha

#image_title

ಬೆಂಗಳೂರು: ಪಠ್ಯಪುಸ್ತಕಗಳಲ್ಲಿ ಅನೇಕರ ಪಠ್ಯವನ್ನು ರೋಹಿತ್‌ ಚಕ್ರತೀರ್ಥ ತೆಗೆದರು ಎಂಬುದನ್ನು ನಿರಾಕರಿಸಿರುವ ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌, ಬರಗೂರು ರಾಮಚಂದ್ರಪ್ಪ ಸಮಿತಿಯೇ ಪಠ್ಯಗಳನ್ನು ತೆಗೆದಿದ್ದು. ಅದನ್ನು ರೋಹಿತ್‌ ಚಕ್ರತೀರ್ಥ ಮೂತಿಗೆ ಒರೆಸಿದರು ಅಷ್ಟೆ ಎಂದಿದ್ದಾರೆ.

ಈಗಿನ ಕಾಂಗ್ರೆಸ್‌ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾಗುವ ಸೂಚನೆಯಿದೆ. ಇದಕ್ಕೆ ಕಾರ್ಯತಂತ್ರ ರಚನೆ ಕುರಿತು ರಾಜ್ಯ ಬಿಜೆಪಿ ಕಚೇರಿಯಲ್ಲಿ ಪ್ರಮುಖರು ಸಭೆ ನಡೆಯಿತು. ಶಿಕ್ಷಣ ಕ್ಷೇತ್ರದ ವಿಧಾನಪರಿಷತ್ ಸದಸ್ಯರು ಮತ್ತು ಶಿಕ್ಷಣ ರಂಗದಲ್ಲಿ ಆಸಕ್ತಿ ಹೊಂದಿದ ಎಂಎಲ್‍ಎಗಳು, ಎಂಎಲ್‍ಸಿಗಳ ಸಭೆ ಕರೆದು ಪಠ್ಯಪುಸ್ತಕ ಪರಿಷ್ಕರಣೆಗೆ ನೂತನ ಸರಕಾರ ಮುಂದಾಗಿರುವ ಕುರಿತು ಚರ್ಚಿಸಸಬೇಕು. ಜುಲೈನಲ್ಲಿ ಅಧಿವೇಶನ ನಡೆಯಲಿದ್ದು, ಅದಕ್ಕೂ ಮೊದಲೇ ಈ ಸಭೆ ನಡೆಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಬಿ.ಸಿ. ನಾಗೇಶ್, ಸುರೇಶ್‍ಕುಮಾರ್, ವಿಧಾನಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಅ.ದೇವೇಗೌಡ, ವಿಧಾನಪರಿಷತ್‌ ಮಾಜಿ ಸದಸ್ಯ ಅರುಣ್‌ ಶಹಾಪುರ ಈ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯ ನಂತರ ಮಾತನಾಡಿದ ಬಿ.ಸಿ. ನಾಗೇಶ್‌, ಈ ಸರ್ಕಾರ ಧ್ವೇಷದಿಂದ ವರ್ತಿಸುತ್ತಿರುವುದು ಸರಿಯಲ್ಲ. ಬದಲಾದ ಸರ್ಕಾರ ಏಕಾಏಕಿ ಪಠ್ಯ ಪರಿಷ್ಕರಣೆ ಮಾಡಲು ಹೊರಟಿದೆ. ಯಾವುದೇ ವಿಚಾರವನ್ನ ಕೆಳಕ್ಕಿಳಿದು, ಆಳವಾಗಿ ಅಧ್ಯಯನ ಮಾಡಿ. ಅಕಸ್ಮಾತಾಗಿ ತಪ್ಪಾಗಿದ್ರೆ ತೆಗೀತೀವಿ ಅಂತ ಹೇಳ್ತಾರೆ. ಪಠ್ಯಪುಸ್ತಕ ಕೊಠಾರಿಯಾ ಕಮೀಷನ್ ಮಕ್ಕಳಿಗೆ ಪಾಠ ಮಾಡೋದು ಕೆರಿಕುಲಮ್‌ನಲ್ಲಿ ಇರಬೇಕು.

2005ರ ವರೆಗೂ ನ್ಯಾಷನಲ್ ಕೆರಿಕುಲಮ್ ಇರಲಿಲ್ಲ. 2005ರಲ್ಲಿ ಒಂದು ಫ್ರೇಮ್ ಆಗಬೇಕು ಅಂತ ಸಲಹೆ ಬಂತು. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಒಂದು ಕಮಿಟಿ ಮಾಡಲಾಗಿತ್ತು. ನೂರಕ್ಕೂ ಹೆಚ್ಚು ಶಿಕ್ಷಣ ತಜ್ಞರ ಚರ್ಚೆ ಬಳಿಕ 2013ರಲ್ಲಿ ಹೊಸ ಪಠ್ಯ ಬಂತು. ಮಕ್ಕಳ ಪಾಠ ಹೇಗಿರಬೇಕು ಅಂತ ಪಠ್ಯ ಭೋದನೆ ಮಾಡಿದ ಶಿಕ್ಷಕರ ಸಲಹೆ ಪಡೆಯಲಾಗಿತ್ತು. ಬಳಿಕ ಹಂತ ಹಂತವಾಗಿ ಪಠ್ಯ ಬಂತು.

ಸಿದ್ದರಾಮಯ್ಯ ಸಿಎಂ‌ ಆಗಿದ್ದಾಗ ಇದು ಜಾರಿಗೆ ಬಂತು. ಪಠ್ಯ ರಚನೆಯಾದ ಹತ್ತು ವರ್ಷಗಳ ಬಳಿಕ ಪರಿಷ್ಕರಣೆ ಆಗಬೇಕು ಅಂತಿತ್ತು. ಆದರೆ ಬರಗೂರು ರಾಮಚಂದ್ರಪ್ಪ ಅವರು ಅನಾವಶ್ಯಕವಾಗಿ ತುರುಕಿದ್ದಾರೆ ಅಂತ ರಿಪೋರ್ಟ್ ಬಂತು. ಪೋಷಕರು ಕೂಡ ವಿರೋಧ ಮಾಡಿದ್ರು. ಬಳಿಕ NCERT ಕೂತು ಮಾಡಲಾಯ್ತು. ರೋಹಿತ್ ಚಕ್ರತೀರ್ಥ ಅವರ ಸಮಿತಿ ಎರಡು ವಿಚಾರ ಮಾತ್ರ ಪರಿಷ್ಕರಣೆ ಮಾಡಿತು. ಉಳಿದಂತೆ ಯಾವುದೇ ರಾಜಕೀಯ ದೃಷ್ಟಿಯಿಂದ ಪರಿಷ್ಕರಣೆ ಮಾಡಲಿಲ್ಲ. NEP ಬರ್ತಿರೋ‌ ದೃಷ್ಟಿಯಿಂದ ಪರಿಷ್ಕರಣೆ ಮಾಡಲಾಗಿತ್ತು.

ಪಠ್ಯ ಪರಿಷ್ಕರಣೆ ಬಗ್ಗೆ ಪಬ್ಲಿಕ್ ಡೊಮೈನ್‌ನಲ್ಲಿ ಹಾಕಲಾಗಿತ್ತು. ಈಗ ಕಾಂಗ್ರೆಸ್ ಸರ್ಕಾರ ಏಕಾಏಕಿ ಬದಲಾವಣೆ ಮಾಡೋದು ಸರಿಯಲ್ಲ. ಒಂದು ವೇಳೆ ಬದಲಾವಣೆ ಮಾಡಲೇಬೇಕು ಅಂತಿದ್ರೆ ಪಬ್ಲಿಕ್ ಡೊಮೈನ್ ನಲ್ಲಿ ಹಾಕಲಿ. ಪೋಷಕರು, ಶಿಕ್ಷಕರ ಅಭಿಪ್ರಾಯ ಪಡೆಯಲಿ. ಇಲ್ಲದಿದ್ರೆ ಸಾರ್ವಜನಿಕರ ಬಳಿ ಹೋಗ್ತೀವಿ ಎಂದರು.

ಸಿ.ಟಿ. ರವಿ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ ಎಲ್ಲ ಮಾಜಿ ಶಿಕ್ಷಣ ಸಚಿವರು, ಜತೆಗೆ ಶಿಕ್ಷಣ ಕ್ಷೇತ್ರದಲ್ಲಿ ಮೇಲ್ಮನೆ ಸದಸ್ಯರಾಗಿ ಕೆಲಸ ಮಾಡುತ್ತಿರುವ ಸದಸ್ಯರು ಒಟ್ಟು ಸೇರಿ ಸಭೆ ನಡೆಸಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರವಾಗಿ ಅವಲೋಕನ ಮಾಡದೆ, ಸಾಧಕ ಬಾಧಕ ಅಧ್ಯಯನ ಮಾಡದೆ, ರಾಜಕೀಯ ಕಾರಣಕ್ಕಾಗಿ ಪೂರ್ವಾಗ್ರಹಪೀಡಿತರಾಗಿ ಕೊಟ್ಟಿರುವ ಪಠ್ಯ ಪರಿಷ್ಕರಣೆ ಕುರಿತ ಹೇಳಿಕೆ ಅಸಹಿಷ್ಣು ಭಾವನೆಯಿಂದ ಕೂಡಿದೆ. ಕೆಲವು ಮಹನೀಯರ ಪಾಠವನ್ನು ಕೈಬಿಡಬೇಕು ಎಂಬ ಹೇಳಿಕೆ ಕುರಿತು ಸಮಗ್ರವಾಗಿ ಚರ್ಚಿಸಲಾಗಿದೆ. ಶಿಕ್ಷಣ ಕ್ಷೇತ್ರವು ಪೂರ್ವಾಗ್ರಹಪೀಡಿತ ಮನಸ್ಥಿತಿಯಿಂದ ಹೊರಬರಬೇಕು. ಉತ್ತಮ ನಾಗರಿಕರನ್ನು ಶಿಕ್ಷಣ ತಯಾರು ಮಾಡಬೇಕು. ಸಮಾನಮನಸ್ಕರ ಸಭೆ ನಡೆಸಿ ಸಲಹೆಗಳನ್ನು ಪಡೆಯಲಾಗುವುದು. ಅದರ ಬಳಿಕ ಮುಂದಿನ ರೂಪುರೇಷೆ ನಿರ್ಧರಿಸಲಾಗುತ್ತದೆ ಎಂದರು.

ಇದನ್ನೂ ಓದಿ: Uttara Kannada News: ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾಗಿದ್ದು ತಪ್ಪು: ಕಾಗೇರಿ

Exit mobile version