Site icon Vistara News

Rashtriya Swayamsevak Sangh: ಆರ್‌ಎಸ್‌ಎಸ್‌ ಸಂಸ್ಥೆಗಳಿಗೆ ಭೂಮಿ ಹಂಚಿಕೆಗೆ ತಡೆ: ಆರ್‌. ಅಶೋಕ್‌, ಬಿ.ವೈ. ವಿಜಯೇಂದ್ರ ಆಕ್ರೋಶ

bjp mlas lashes out over congress for stay on land allocation for rashtriya swayamsevak sangh affiliated organisations

#image_title

ಬೆಂಗಳೂರು: ಆರ್‌ಎಸ್‌ಎಸ್‌ನ (Rashtriya Swayamsevak Sangh) ಅಂಗಸಂಸ್ಥೆಗಳಿಗೆ ಬಿಜೆಪಿ ಸರ್ಕಾರ ಇದ್ದಾಗ ಭೂಮಿ ಹಂಚಿಕೆ ಮಾಡಿದ್ದನ್ನು ತಡೆ ಹಿಡಿಯುವ ಕಾಂಗ್ರೆಸ್‌ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಚನ್ನೇನಹಳ್ಳಿಯ ಜನಸೇವಾ ಟ್ರಸ್ಟ್‌, ರಾಷ್ಟ್ರೋತ್ಥಾನ ಪರಿಷತ್‌ ಸೇರಿ ಅನೇಕ ಸಂಸ್ಥೆಗಳಿಗೆ ಬಿಜೆಪಿ ಅವಧಿಯಲ್ಲಿ ಭೂಮಿ ಹಂಚಿಕೆ ಮಾಡಲಾಗಿತ್ತು. ಇದಕ್ಕೆ ತಡೆ ನೀಡಲಾಗಿದೆ ಎಂದು ಸದನದಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಉತ್ತರ ನೀಡಿದ್ದರು.

ವಿಧಾನಸೌಧದ ಬಳಿ ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯೆ ನೀಡಿ, ಈ ಸರ್ಕಾರ ಬಡವರು, ರೈತರ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ಕುಡಿಯುವ ನೀರಿಗೆ ಆಹಾಕಾರ ಇದೆ, ಬರ ಇದೆ. ಇದರ ಬಗ್ಗೆ ಸದನದಲ್ಲೂ ಚರ್ಚೆ ಆಗಲಿಲ್ಲ. ಗ್ಯಾರಂಟಿ ಕಾರ್ಡ್‌ಗಳಿಂದ ಜನಕ್ಕೆ ದೊಡ್ಡ ಸಹಾಯ ಏನೂ ಆಗ್ತಿಲ್ಲ. ಈ ನಡುವೆ ಜನಸೇವಾ ಟ್ರಸ್ಟ್ ಗೆ ಮಂಜೂರಾದ ಜಾಗಕ್ಕೆ ತಡೆ ನೀಡಿದ್ದಾರೆ.

ಇದು ನಿರೀಕ್ಷಿತವೇ ಆಗಿತ್ತು. ಈ ಸರ್ಕಾರ ಯಾವ ದಿಕ್ಕಿನಲ್ಲಿ ಸಾಗ್ತಿದೆ ಅಂತ ಅವರೇ ತೋರಿಸ್ತಿದಾರೆ. ಸಚಿವರು ಆರಂಭದಲ್ಲೇ ಆರ್‌ಎಸ್‌ಎಸ್‌ಗೆ ಮಂಜೂರಾದ ಭೂಮಿ ವಾಪಸ್ ಬಗ್ಗೆ ಮಾತನಾಡಿದ್ದರು. ಜನಸೇವಾ ವಿದ್ಯಾಕೇಂದ್ರ ಲಕ್ಷಾಂತರ ಬಡಮಕ್ಕಳಿಗೆ ವಿದ್ಯೆ ಕೊಡ್ತಿರುವ ಸಂಸ್ಥೆ. ಅಂತಹ ಸಂಸ್ಥೆಯಿಂದ ಭೂಮಿ ವಾಪಸ್ ಸರಿಯಿಲ್ಲ. ನಾನೂ ಅದೇ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ.

ಕೇಂದ್ರದ ಯೋಜನೆಗಳಿಗೆ, ಮೋದಿಯವತರಿಗೆ ಟೀಕೆ ಮಾಡೋದೇ ಇವರ ಉದ್ದೇಶ. ಬೊಮ್ಮಾಯಿ‌ ಅವರ ಅವಧಿಯ ಅನೇಕ ಯೋಜನೆಗಳಿಗೆ ಈ ಸರ್ಕಾರ ಮಣ್ಣು ಹಾಕಿದೆ. ಮುಂದಿನ ದಿನಗಳಲ್ಲಿ ಜನ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಆರ್‌. ಅಶೋಕ್‌ ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಇದ್ದಾಗ ರಾಷ್ಟ್ರೋತ್ತಾನಕ್ಕೆ ಜಮೀನು ಕೊಟ್ಟಿದ್ದೆವು. ಕಾಂಗ್ರೆಸ್ ಇದ್ದಾಗಲೂ ಚನ್ನೇನಹಳ್ಳಿಯಲ್ಲಿ ಕೊಟ್ಟಿತ್ತು. ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಓದಲು ಅವಕಾಶ ಇತ್ತು. ಈಗ ದ್ವೇಷದ ರಾಜಕಾರಣ ಮಾಡ್ತಿದೆ.

ನಮ್ಮ ಸರ್ಕಾರದ ವಿರುದ್ಧ SIT ರಚನೆ ಮಾಡಿದೆ. ಆದಿಚುಂಚನಗಿರಿ, ಹಿಂದುಳಿದ ಮಠಗಳಿಗೂ ನೀಡಿದ್ದೆವು. ಅದೇ ರೀತಿ ರಾಷ್ಟ್ರೋತ್ಥಾನಕ್ಕೂ ಕೊಡಲಾಗಿತ್ತು. ಅದನ್ನು ತಡೆಹಿಡಿಯುವ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇವರ ನಿಜಬಣ್ಣ ಮುಂದೆ ಬಯಲಾಗಲಿದೆ. ಇವರ ದ್ವೇಷದ ರಾಜಕಾವನ್ನ ನಾನು ಖಂಡಿಸುತ್ತೇನೆ ಎಂದರು.

ಇದನ್ನೂ ಓದಿ: Assembly Session: ಬಿಜೆಪಿ ಅವಧಿಯಲ್ಲಿ 224 ಎಕರೆ ಗೋಮಾಳ ಪರಭಾರೆ: ಇಸ್ಕಾನ್‌, ಆದಿಚುಂಚನಗಿರಿ, ಸಿದ್ಧಗಂಗಾ, ರಾಷ್ಟ್ರೋತ್ಥಾನ, ಇತ್ಯಾದಿ

ಹಾಲಿನ ದರ ಹೆಚ್ಚಳ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸರ್ಕಾರ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಹಾಳು ಮಾಡಲು ಹೊರಟಿದೆ. ಈಗಾಗಲೇ ಭಾಗ್ಯ ಕೊಡೋದಾಗಿ ಇಲ್ಲಸಲ್ಲದ ಆಮಿಷ ಹೊಡ್ಡಿದೆ. ಯಾರೂ ಫ್ರೀ ಬೇಕು ಅಂತ ಕೇಳಿರಲಿಲ್ಲ. ಹೀಗಾಗಿ ಎಲ್ಲಾ ದರ ಹೆಚ್ಚಳ ಮಾಡಬೇಕಾಗಿದೆ. ಹಾಲಿನ ದರ 5-6 ರೂ ಹೆಚ್ಚಳ ಮಾಡುವ ನಿರ್ಧಾರ ಇದೆ. ಒಂದು ಕೈಯ್ಯಲ್ಲಿ ಕೊಡೋದು, ಎರಡು ಕೈಯಲ್ಲಿ ಬಾಚಿಕೊಳ್ಳೋದು ಇವರ ಕೆಲಸ. ಎಲ್ಲಾ ದರ ಹೆಚ್ಚಾದ್ರೆ ಜನ ಹೇಗೆ ಬದುಕಬೇಕು? ಜನ ಬಸ್ಸಲ್ಲಿ ಹೋಗೋ ದರದಲ್ಲಿ ಟಮೋಟೋ, ತರಕಾರಿ, ಹಾಲು ತಗೋಳಿ. ಎಲ್ಲ ಹೆಣ್ಣುಮಕ್ಕಳೂ ಬಸ್‌ನಲ್ಲಿಓಡಾಡುತ್ತಾರೆ ಎಂದು ಇವರು ಭಾವಿಸಿದ್ದಾರೆ. ಹಳ್ಳಿ ಕಡೆ ಓಡಾಡುವುದಿಲ್ಲ, ನಗರದಲ್ಲಿ ಓಡಾಡ್ತಾರೆ ಅಷ್ಟೇ ಎಂದರು.

Exit mobile version