Site icon Vistara News

Save Nandini: ಗೋಹತ್ಯೆ ಬೆಂಬಲಿಸಿದವರು ನಂದಿನಿ ಉಳಿಸಲು ಮುಂದಾಗಿದ್ದಾರೆ: ಕಾಂಗ್ರೆಸ್‌ ವಿರುದ್ಧ ಎನ್‌. ರವಿಕುಮಾರ್‌ ಟೀಕೆ

bjp mlc n ravikumar press meet on save nandini campaign

#image_title

ಬೆಂಗಳೂರು: ದೇಶದಲ್ಲಿ ಅಮುಲ್‍ಗೆ ಸ್ಪರ್ಧೆ ಒಡ್ಡುವ ಮಾದರಿಯಲ್ಲಿ ಕೆಎಂಎಫ್ (ನಂದಿನಿ) ಸಂಸ್ಥೆಯನ್ನು ಬೆಳೆಸುತ್ತೇವೆ. ನಂದಿನಿ ವಿಚಾರದಲ್ಲಿ ಕಾಂಗ್ರೆಸ್ ಆರೋಪ ಆಧಾರರಹಿತ ಮತ್ತು ಅವರದು ರೋಗಿಷ್ಠ ಮನಸ್ಥಿತಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಟೀಕಿಸಿದರು.

ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿಯು ನಂದಿನಿಯನ್ನು ಮುಳುಗಿಸುತ್ತದೆ ಎಂಬ ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿ, ನಂದಿನಿ ಮಾತ್ರವಲ್ಲದೆ ರಾಜ್ಯದ ಹಸುಗಳನ್ನು ರಕ್ಷಿಸುವ ಜವಾಬ್ದಾರಿ ನಮ್ಮದು. ಅದಕ್ಕೇ ಗೋಹತ್ಯಾ ನಿಷೇಧ ಮಾಡಿದ್ದೇವೆ. ಕಾಂಗ್ರೆಸ್, ಜೆಡಿಎಸ್ ಪಕ್ಷದ ನಾಯಕರದ್ದು ದ್ವಿಮುಖ ನೀತಿ. ಗೋಹತ್ಯೆ ಆಗುತ್ತಿರಬೇಕು ಆದರೆ, ನಂದಿನಿ ಉಳಿಯಬೇಕೆಂದರೆ ಅದು ಹೇಗೆ ಸಾಧ್ಯ? ಗೋಹತ್ಯೆ ನಿಷೇಧ ಕಾಯ್ದೆ ವಿರುದ್ಧ ಮತ ಹಾಕಿದವರು ನೀವು ಎಂದು ಕಾಂಗ್ರೆಸನ್ನು ಟೀಕಿಸಿದರು.

ನಂದಿನಿಯನ್ನು ದೇಶದ ದೊಡ್ಡ ಹೈನುಗಾರಿಕಾ ಸಂಸ್ಥೆಯಾಗಿ ಮಾಡುತ್ತೇವೆ. ವಿಶ್ವದಲ್ಲಿ ಭಾರತ ಮೊದಲು ಎಂಬ ತತ್ವ ನಮ್ಮದು. ಭಾರತದಲ್ಲಿ ಕಾಂಗ್ರೆಸ್ ಮೊದಲು, ಕಾಂಗ್ರೆಸ್‍ನಲ್ಲಿ ಸೋನಿಯಾ- ರಾಹುಲ್ ಗಾಂಧಿ ಮೊದಲು ಎನ್ನುವ ಚಿಂತನೆ ಕಾಂಗ್ರೆಸ್ಸಿಗರು. ಜೆಡಿಎಸ್ ಕೂಡ ಕುಟುಂಬ ಮೊದಲು ಎಂಬ ನೀತಿ ಹೊಂದಿದೆ. ಭಯೋತ್ಪಾದನೆ, ನಕ್ಸಲಿಸಂ ನಿರ್ಮೂಲನೆ ಮಾಡಿದ್ದು ಮೋದಿಜಿ, ಬೊಮ್ಮಾಯಿ ಸರಕಾರ ಎಂದ ಅವರು, ಪಿಎಫ್‍ಐ ಬ್ಯಾನ್ ಮಾಡಿದವರು ನಾವು. ಅವರ ವಿರುದ್ಧ ಇದ್ದ ಪ್ರಕರಣಗಳನ್ನು ರದ್ದು ಮಾಡಿದ್ದು ನೀವು. 370 ನೇ ವಿಧಿ ರದ್ದು ಮಾಡಿದ್ದು ನಾವು; ಇದು ನಿಮಗೆ ಅರಿವಿಲ್ಲವೇ ಎಂದು ಕೇಳಿದರು.

ಕಾಂಗ್ರೆಸ್, ಜೆಡಿಎಸ್‍ನವರು ಬೋಧನೆ ನಿಲ್ಲಿಸಿ. ಕಾಂಗ್ರೆಸ್ ಹುಲಿಗಳು ಗುಹೆ ಸೇರಿವೆ. ಪ್ರಾಣಿಹತ್ಯೆ ಮಾಡುವವರು ನಾವಲ್ಲ. ಮನುಷ್ಯರು, ಪ್ರಾಣಿಗಳ ರಕ್ಷಣೆ ಜವಾಬ್ದಾರಿ ನಮ್ಮದು. ಇದನ್ನು ಸಿದ್ದರಾಮಯ್ಯನವರು ಅರ್ಥ ಮಾಡಿಕೊಳ್ಳಲಿ ಎಂದು ಆಗ್ರಹಿಸಿದರು.

ಈದನ್ನೂ ಓದಿ: Karnataka Election 2023 : ಮೀಸಲಾತಿ ಬದಲಿಸಿ ಇತಿಹಾಸ ಸೃಷ್ಟಿ, ಬಿಜೆಪಿಗೆ ಬಹುಮತ ಖಚಿತ ಎಂದ ರವಿಕುಮಾರ್‌

Exit mobile version