Site icon Vistara News

ವಿಸ್ತಾರ ನ್ಯೂಸ್ ಚಾನೆಲ್ ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಶುಭ ಹಾರೈಕೆ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಮಂಗಳವಾರ ವಿಸ್ತಾರ ನ್ಯೂಸ್ ಕಚೇರಿಗೆ ಭೇಟಿ ನೀಡಿ ಶುಭ ಹಾರೈಸಿದರು.

ಉತ್ತಮ ಧ್ಯೇಯೋದ್ದೇಶ ಮತ್ತು ಹಲವು ವಿಶಿಷ್ಟ ಯೋಜನೆಗಳನ್ನು ಹೊಂದಿರುವ ವಿಸ್ತಾರ ನ್ಯೂಸ್ ನಾಡಿನಾದ್ಯಂತ ಜನಪ್ರಿಯವಾಗಲಿ. ಉತ್ತಮ ಗುಣಮಟ್ಟದ ಮತ್ತು ಉಪಯುಕ್ತ ಸುದ್ದಿಗಳು ವಿಸ್ತಾರ ಮೂಲಕ ಜನತೆಗೆ ಲಭ್ಯವಾಗಲಿ ಎಂದು ಸಿ ಟಿ ರವಿ ಆಶಿಸಿದರು.

ವಿಸ್ತಾರ ನ್ಯೂಸ್ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ, ವಿಸ್ತಾರ ಮೀಡಿಯಾ ಪ್ರೈ.ಲಿ.ನ ಚೇರ್ಮನ್, ಎಂಡಿ ಎಚ್ ವಿ ಧರ್ಮೇಶ್ ಅವರು ಸಿ ಟಿ ರವಿ ಅವರಿಗೆ ಹೂಗುಚ್ಛ ನೀಡಿ ಗೌರವಿಸಿದರು. ವಿಸ್ತಾರ ನ್ಯೂಸ್ ಕಾರ್ಯ ನಿರ್ವಾಹಕ ಸಂಪಾದಕ ಶರತ್ ಎಂ ಎಸ್, ಸಿಒಒ, ಸಿಟಿಒ ಪರಶುರಾಮ್, ಇನ್ ಫುಟ್-ಔಟ್ ಫುಟ್ ಮುಖ್ಯಸ್ಥ ಮಂಜುನಾಥ್ ಪಿ ಪಾಲಿಟಿಕಲ್ ವಿಭಾಗದ ಮುಖ್ಯಸ್ಥ ಮಾರುತಿ ಪಾವಗಡ ಜತೆಗಿದ್ದರು.

ಇದನ್ನೂ ಓದಿ | ವಿಸ್ತಾರ ನ್ಯೂಸ್‌ ಕಚೇರಿಗೆ ಭೇಟಿ ನೀಡಿದ ಕಾಂಗ್ರೆಸ್‌ ಹಿರಿಯ ನಾಯಕ ದಿನೇಶ್‌ ಗುಂಡೂರಾವ್‌

ಇದನ್ನೂ ಓದಿ | ವಿಸ್ತಾರ ನ್ಯೂಸ್‌ ಕಚೇರಿಗೆ ಖ್ಯಾತ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಭೇಟಿ

Exit mobile version