Site icon Vistara News

BJP Politics: ತಂದೆಗೆ ಮಕ್ಕಳ ಚಿಂತೆ, ಮಕ್ಕಳಿಗೆ ತಂದೆ ಚಿಂತೆ: ರಾಜ್ಯ ಬಿಜೆಪಿಯಲ್ಲಿ ಕುಟುಂಬದ ಟಿಕೆಟ್‌ ಕುರಿತು ಆತಂಕ

bjp-politics-senior leaders trying to get ticket fot family members

#image_title

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ (BJP Politics) ಯಾರಿಗೆ ಟಿಕೆಟ್‌ ನೀಡುತ್ತದೆ ಎಂಬ ಚರ್ಚೆಗಳು ನಡೆಯುತ್ತಿರುವಾಗಲೇ, ತಮ್ಮ ಕುಟುಂಬದವರಿಗೆ ಟಿಕೆಟ್‌ ಕೊಡಿಸುವುದು ಹೇಗೆ ಎಂದು ಅನೇಕರು ಆಲೋಚಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ತಮ್ಮ ಪುತ್ರರಿಗೆ ಟಿಕೆಟ್ ಕೊಡಿಸೋದೆ ಈಗ ನಾಯಕರಿಗೆ ಚಾಲೆಂಜ್ ಆಗಿದೆ.

ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣವಿದೆ ಎನ್ನುತ್ತ ಪದೇಪದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್‌ ಶಾ ಹೇಳುತ್ತಿದ್ದಾರೆ. ಪರಿವಾರವಾದಿ ಪಕ್ಷಗಳಿಂದ ಜನರ ಕಲ್ಯಾಣ ಸಾಧ್ಯವಿಲ್ಲ ಎನ್ನುವುದನ್ನು ಆಗಿಂದಾಗ್ಗೆ ಹೇಳುತ್ತಲೇ ಇದ್ದಾರೆ. ಇದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗಿಂತಲೂ ಬಿಜೆಪಿ ವಲಯದಲ್ಲೇ ಆತಂಕಕ್ಕೆ ಕಾರಣವಾಗಿದೆ.

ಬಿಜೆಪಿಯ ಅನೇಕ ನಾಯಕರು ತಮ್ಮ ಕುಟುಂಬದವರಿಗೆ ಟಿಕೆಟ್‌ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಗುಜರಾತ್‌ ಚುನಾವಣೆಯಲ್ಲಿ ಹೆಚ್ಚಿನ ಹಾಲಿ ಶಾಸಕರಿಗೆ ಟಿಕೆಟ್‌ ಕೈತಪ್ಪಿತ್ತು. ತಮ್ಮ ಪುತ್ರ, ಪುತ್ರಿ, ಸಹೋದರನಿಗೆ ಟಿಕೆಟ್‌ ಕೊಡಿಸುವ ಪ್ರಯತ್ನ ಏನಾಗಬಹುದು ಎಂದು ಅನೇಕ ಶಾಸಕರಲ್ಲಿ ಆತಂಕ ಮೂಡಿಸಿದೆ.

ಈಗಾಗಲೆ ಕುಟುಂಬದ ಸದಸ್ಯರು ಈಗಾಗಲೆ ತಮ್ಮ ತಂದೆಯ ಕೇತ್ರದಲ್ಲಿ ಕ್ರಿಯಾಶೀಲರಾಗಿದ್ದಾರೆ. ಅನೇಕರು ಮತ್ತೊಂದು ಕ್ಷೇತ್ರದಲ್ಲಿ ಪ್ರಾಬಲ್ಯ ಬೆಳೆಸಿಕೊಳ್ಳುತ್ತಿದ್ದಾರೆ. ಕಳೆದ ಚುನಾವಣೆ ಸಮಯದಲ್ಲಿ ಹಾಗೂ ಹೀಗೂ ಯಡಿಯೂರಪ್ಪ ಮತ್ತಿತರರ ನಾಯಕರನ್ನು ಹಿಡಿದು ಟಿಕೆಟ್‌ ಗಿಟ್ಟಿಸಲಾಗಿತ್ತು. ಈ ಬಾರಿ ಕುಟುಂಬ ರಾಜಕಾರಣದ ನೆಪವೊಡ್ಡಿ ಹೊಸ ಮುಖಗಳಿಗೆ ಟಿಕೆಟ್‌ ನೀಡಬೇಕು ಎಂದು ನಿರ್ಧರಿಸಿದರೆ ಏನು ಮಾಡುವುದು ಎಂಬ ಚಿಂತೆ ಮೂಡಿಸಿದೆ.

ಇದನ್ನೂ ಓದಿ: Karnataka Election: ಎಲ್ಲ ಪಕ್ಷಗಳಲ್ಲಿ ಕುಟುಂಬ ರಾಜಕಾರಣವಿದೆ, ಆದ್ರೆ ಬಿಜೆಪಿಗೆ ಕಾರ್ಯಕರ್ತರೇ ಕುಟುಂಬ: ಜೆ.ಪಿ.ನಡ್ಡಾ

ಮುಖ್ಯವಾಗಿ ಸಚಿವ ವಿ. ಸೋಮಣ್ಣ ಪುತ್ರನಿಗೆ ಟಿಕೆಟ್‌ ಕೊಡಿಸುವ ಪ್ರಯತ್ನದಲ್ಲಿದ್ದಾರೆ. ಅದೇ ರೀತಿ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಕೆ.ಈ. ಕಾಂತೇಶ್‌ಗೆ ಟಿಕೆಟ್‌ ಬೇಕೆಂದು ಒತ್ತಾಯಿಸುತ್ತಿದ್ದಾರೆ. ಸಚಿವ ಗೋವಿಂದ ಕಾರಜೋಳ ಪುತ್ರ ಕಳೆದ ಚುನಾವಣೆಯಲ್ಲಿ ನಾಗಠಾಣ ದಿಂದ ಸ್ಪರ್ಧಿಸಿ 4,000 ಮತಗಳ ಅಂತರದಿಂದ ಸೋಲು ಕಂಡಿದ್ದರು. ಇದರ ಜತೆಗೆ ಜಗದೀಶ್ ಶೆಟ್ಟರ್, ಎಂಟಿಬಿ ನಾಗರಾಜ್ ಹಾಗೂ ಲಕ್ಷ್ಮಣ ಸವದಿ ಸಹ ಪುತ್ರನಿಗೆ ಟಿಕೆಟ್‌ ಕೊಡಿಸಲು ಪ್ರಯತ್ನದಲ್ಲಿದ್ದಾರೆ.

Exit mobile version