Site icon Vistara News

BJP Protest: ಪ್ರತಿಭಟನೆ ವೇಳೆ ಶಾಸಕ ವೇದವ್ಯಾಸ್ ಕಾಮತ್ ಧಮ್ಕಿ; ಕೆರಳಿದ ಪೊಲೀಸ್‌!

BJP Protest

ಬೆಂಗಳೂರು: ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ ಖಂಡಿಸಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ (BJP Protest) ಹಾಕಲು ಯತ್ನಿಸಿದ ಬಿಜೆಪಿಯ ರಾಜ್ಯ ಅಧ್ಯಕ್ಷ ಬಿ..ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್‌.ಅಶೋಕ್‌ ಸೇರಿ ಹಲವು ನಾಯಕರನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದರು. ಪ್ರತಿಭಟನಾಕಾರರನ್ನು ಬಸ್‌ ಹತ್ತಿಸುವ ವೇಳೆ ಧಮ್ಕಿ ಹಾಕಿದ್ದರಿಂದ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಜತೆ ಪೊಲೀಸ್‌ ಒಬ್ಬರು ವಾಗ್ದಾದ ನಡೆಸಿರುವುದು ಕಂಡುಬಂದಿದೆ.

ಬಸ್‌ ಬಾಗಿಲಲ್ಲಿ ನಿಂತಿದ್ದ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಅವರು ಕೆಳಗಿದ್ದ ಒಬ್ಬ ಪೊಲೀಸ್‌ಗೆ ಹೇಯ್ ಅಂದಿದ್ದಾರೆ. ಇದರಿಂದ ಕೆರಳಿದ ಪೊಲೀಸ್, ಶಾಸಕನ ಜತೆ ವಾಗ್ವಾದಕ್ಕೆ ಇಳಿದಿದ್ದಾರೆ. ಪೊಲೀಸರು ಹೋಗಪ್ಪ ಬಾರಪ್ಪ ಎಂದರೆ ಕೇಳಿಸಿಕೊಂಡು ಸುಮ್ಮನಿರಬೇಕಾ? ಎಂದು ಶಾಸಕ ಕಾಮತ್ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದಲ್ಲಿ ದಿನಕ್ಕೊಂದು ಹಗರಣ: ವಿಜಯೇಂದ್ರ ಅಕ್ರೋಶ

ಪ್ರತಿಭಟನೆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಾತನಾಡಿ, ರಾಜ್ಯದಲ್ಲಿ ದಿನಕ್ಕೊಂದು ಹಗರಣ ನಡೆಯುತ್ತಿದೆ. ಹಗಲು ದರೋಡೆ ಮಾಡುತ್ತಿದ್ದಾರೆ. ಸಿಎಂ ಮನೆ ಮುತ್ತಿಗೆಗೆ ಹೊರಟರೆ ಬಂಧನ ಮಾಡುವ ಕೆಲಸ ನಡೆಯುತ್ತಿದೆ. ನಾವು ಭ್ರಷ್ಟಾಚಾರ ವಿರೋಧಿಸಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ಮೈಸೂರು ಮುಡಾ ಹಗರಣ ನಡೆದಿದೆ. ಸಿಎಂ ಮೈಸೂರಿನವರು, ಅವರ ಗಮನಕ್ಕೆ ಬಾರದೆ ಹಗರಣ ನಡೆದಿರುವುದಿಲ್ಲ. ಅವರೇ ಸ್ವತಃ ಹಣಕಾಸು ಸಚಿವರು. ಯಾವೆಲ್ಲಾ ಹಗರಣ ನಡೆದಿದೆ, ಎಲ್ಲವೂ ತನಿಖೆ ಮಾಡಬೇಕು. ಬಿಜೆಪಿಗೆ ತಿರುಗುಬಾಣ ಆದರೂ ಎದುರಿಸುತ್ತೇವೆ. ಬೈರತಿ ಸುರೇಶ್ ಅವರು ಸಿಎಂಗೆ ಪರಮಾಪ್ತರಿದ್ದಾರೆ. ಹಾಗಾಗಿ ಸೂಕ್ತ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ | Mangalore News: ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿತ; ಮಣ್ಣಿನಡಿ ಸಿಲುಕಿದ ಇಬ್ಬರು ಕಾರ್ಮಿಕರು

ನಮ್ಮ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ, ಸಿಎಂ ತವರಿನ ಮುಡಾದಲ್ಲಿ 4 ಸಾವಿರ ಕೋಟಿ ಹಗರಣ ಆಗಿದೆ. ಬೈರತಿ ಸುರೇಶ್ ಅವರು ಮೈಸೂರಲ್ಲಿ ಅಧಿಕಾರಿಗಳ ಸಭೆ ಮಾಡಿದ್ದರು, ಅಧಿಕಾರಿಗಳ ವರ್ಗಾವಣೆ ಮಾಡಿದ್ದಾರೆ. ಆದರೆ ಅವರನ್ನು ಸಸ್ಪೆಂಡ್ ಮಾಡಿಬೇಕಿತ್ತು. ಇವರ ಬುಡಕ್ಕೆ ಬರುತ್ತೆ ಅಂತ ಸಸ್ಪೆಂಡ್ ಮಾಡಿಲ್ಲ. ಕಡತಗಳನ್ನ ತಿದ್ದುಪಡಿ ಮಾಡಲು ಬೈರತಿ ಸುರೇಶ್ ತಂದಿದ್ದಾರೆ. ಯಾವುದೇ ತಿದ್ದುಪಡಿ ಮಾಡಿದ್ರೂ ಭ್ರಷ್ಟಾಚಾರ ಹೊರಗೆ ಬರಲಿದೆ. ಬಿಜೆಪಿ ಅವಧಿಯದ್ದೂ ಸೇರಿಸಿ, ಇವರ ಸರ್ಕಾರದ ಭ್ರಷ್ಟಾಚಾರ ತನಿಖೆ ಮಾಡಲಿ. ಅಲ್ಲಿಯವರೆಗೂ ಸಿಎಂ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು.

Exit mobile version