Site icon Vistara News

Dalit Chief Minister: ಖರ್ಗೆಗೆ ಸಿಎಂ ಸ್ಥಾನ ತಪ್ಪಿಸಿದ್ದೇ ಡಿ.ಕೆ. ಶಿವಕುಮಾರ್‌: ದಲಿತ ಸಿಎಂ ಹೇಳಿಕೆ ಕುರಿತು ಬಿಜೆಪಿ ಟೀಕೆ

MLC Chalavadi Narayanaswamy latest statement

ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುವುದಕ್ಕೆ ಬೆಂಬಲ ಎಂಬ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ಂಾತಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಸ್ಥಾನ ತಪ್ಪಿಸಿದ್ದೇ ಡಿ.ಕೆ. ಶಿವಕುಮಾರ್‌ ಎಂದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಛಲವಾದಿ ನಾರಾಯಣ ಸ್ವಾಮಿ, ಡಿಕೆಶಿ ಹೇಳಿಕೆಯಿಂದ ಕಾಂಗ್ರೆಸ್ ನೆಲೆ ಕಳೆದುಕೊಂಡಿರೋದು ಗೊತ್ತಾಗುತ್ತೆ. ಕಾಂಗ್ರೆಸ್ ನವ್ರು ದಲಿತ ಸಿಎಂ ಮಾಡ್ತೀವಿ ಅಂತ ಮಾಡಲಿಲ್ಲ. ಜೆಡಿಎಸ್ ಜತೆ ಮೈತ್ರಿ ವೇಳೆ‌ ಖರ್ಗೆಗೆ ಸಿಎಂ ಮಾಡುವಂತೆ ಜೆಡಿಎಸ್ ನವರು ಹೇಳಿದ್ದರು..

ಆಗ ಕಾಂಗ್ರೆಸ್ ನಲ್ಲಿ ಖರ್ಗೆ ಸಿಎಂ ಆಗೋದನ್ನು ತಪ್ಪಿಸಿದ್ರು. ಕಾಂಗ್ರೆಸ್ ನಲ್ಲಿ ಖರ್ಗೆಯವರಿಗೆ ಸಿಎಂ ಹುದ್ದೆ ತಪ್ಪಲು ಕಾರಣವೇ ಡಿಕೆಶಿ. 2004 ರಲ್ಲಿ ಎಸ್ ಎಂ ಕೃಷ್ಣ ಅವರನ್ನು ಸಿಎಂ ಮಾಡಿದ್ರು. ಆಗಲೂ ಖರ್ಗೆಯವರಿಗೆ ಸಿಎಂ ಹುದ್ದೆ ತಪ್ಪಿಸಲಾಯ್ತು. 2013 ರಲ್ಲಿ ಪರಮೇಶ್ವರ್ ಅವರು ಸಿಎಂ‌ ಆಗುವ ಅವಕಾಶ ತಪ್ಪಿಸಲಾಯ್ತು.

ಸಿದ್ದರಾಮಯ್ಯ ಮತ್ತು ಅವರ ಗ್ಯಾಂಗ್ ಪರಮೇಶ್ವರ್ ರನ್ನು ಸೋಲಿಸಿದ್ರು. ಆ ಮೂಲಕ ಪರಮೇಶ್ವರ್ ಗೆ ಸಿಎಂ ಹುದ್ದೆ ತಪ್ಪಿಸಿದರು. ದಲಿತರ ಮೇಲೆ ಕಾಂಗ್ರೆಸ್ ಗೆ ಕಾಳಜಿ ಇಲ್ಲ. ಪರಮೇಶ್ವರ್ ಡಿಸಿಎಂ ಮಾಡಿ ಅಂದ್ರೂ ಸಿದ್ದರಾಮಯ್ಯ ಮಾಡಲಿಲ್ಲ.

ಬಿಜೆಪಿ ಅಧಿಕಾರಕ್ಕೆ ಬಂದ್ರೆ ದಲಿತರನ್ನ ಸಿಎಂ ಮಾಡ್ತಿರಾ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದು 70 ವರ್ಷ ಆಗಿದ್ರೂ ದಲಿತ ಅಧಿಕಾರ ಕೊಡಲಿಲ್ಲ. ಪರಮೇಶ್ವರ ಅವರನ್ನ ಡಿಸಿಎಂ ಮಾಡಿದ್ದು ಕುಮಾರಸ್ವಾಮಿ. ನಾವು ಅಧಿಕಾರಕ್ಕೆ ಬಂದು ಅವಕಾಶ ಸಿಕ್ಕಿದಾಗ ಯಾವುದೇ ಚರ್ಚೆ ಇಲ್ಲದೇ ದಲಿತರನ್ನ ಡಿಸಿಎಂ ಮಾಡಿದ್ದೀವಿ. ಈಗ ಸಿಎಂ ಮಾಡ್ತಿವಿ ಅಂತ ಡಿಕ್ಲೇರ್ ಮಾಡಬೇಕಾಗಿಲ್ಲ. ಕಾಂಗ್ರೆಸ್ ರೀತಿಯಲ್ಲಿ ಕೇವಲ ಓಟ್ ಬ್ಯಾಂಕ್ ಮಾಡಿಕೊಂಡಿಲ್ಲ. ನಾವು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗ್ತಿವಿ ಎಂದru.

ಕಮಲದ ಆಕಾರದಲ್ಲಿರುವ ಶಿವಮೊಗ್ಗ ಏರ್‌ಪೋರ್ಟ್‌ ಕಟ್ಟಡ ಮುಚ್ಚುವಂತೆ ಕೋರಿ ಕಾಂಗ್ರೆಸ್ ನಿಂದ ಚುನಾವಣಾ ಆಯೋಗಕ್ಕೆ ದೂರು ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನವರ ದೂರಿಗೆ ಅರ್ಥ ಇಲ್ಲ. ಏರ್‌ಪೋರ್ಟ್ ಕಟ್ಟಡ ಮುಚ್ಚಿ ಅನ್ನೋದು ಮೂರ್ಖತ‌ನ. ಕಾಂಗ್ರೆಸ್ ಪಕ್ಷದ ಗುರುತು ಹಸ್ತ, ಎಲ್ಲರಿಗೂ ಹಸ್ತ ಇದೆ, ಹಾಗಂತ ಹಸ್ತ ಮುಚ್ಚಿಕೊಳ್ಳಿ ಅಂತ ಹೇಳಲು ಆಗುತ್ತಾ..? ಹಾಗಾದರೆ ಹಸ್ತಗಳನ್ನು (ಕೈಗಳನ್ನು) ಎಲ್ಲಿ ಇಟ್ಕೊಬೇಕು?

ನಂದಿನಿ ವರ್ಸಸ್ ಅಮೂಲ್ ವಿಚಾರದಲ್ಲಿ ಕಾಂಗ್ರೆಸ್‌ ರಾಜಕೀಯ ಮಾಡ್ತಿದೆ. ಇದು ಕಾಂಗ್ರೆಸ್ ನ ರಾಜಕೀಯ ದಾಳ ಎಂದರು.

ಇದನ್ನೂ ಓದಿ: Karnataka Elections : ಸಿಎಂ ಸ್ಥಾನದ ಅವಕಾಶ ಖರ್ಗೆಗೆ ಬಿಟ್ಟು ಕೊಡಲು ರೆಡಿ ಎಂದ ಡಿಕೆಶಿ; ಏನಿದು ಹೊಸ ವರಸೆ

Exit mobile version