ಬಾಗಲಕೋಟೆ, ಕರ್ನಾಟಕ: ಹಿಂದುತ್ವಕ್ಕಾಗಿ ಹೋರಾಟ ಮಾಡಿ, ಪ್ರಾಣ ಕಳೆದುಕೊಂಡ ಕುಟುಂಬದವರಿಗೆ ಟಿಕೆಟ್ ನೀಡುತ್ತಾ ಹೋದರೆ, ಬಹಳ ಟಿಕೆಟ್ ಕೊಡಬೇಕಾಗುತ್ತದೆ ಎಂದು ಬಿಜೆಪಿಯ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ (KS Eshwarappa) ಅವರು ಲಘುವಾಗಿ ಹೇಳಿದ್ದಾರೆ(Karnataka election 2023).
ಬಿಜೆಪಿಗಾಗಿ, ಹಿಂದುತ್ವಕ್ಕಾಗಿ ಹೋರಾಡಿ ಮಡಿದವರ ಕುಟುಂಬದವರಿಗೆ ಬಿಜೆಪಿ ಟಿಕೆಟ್ ಕೊಡೋದಿಲ್ವಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ ಅವರು, ”ಪ್ರಾಣ ಕಳೆದುಕೊಂಡ ಹಿಂದು ಹೋರಾಟಗಾರರಿಗೆ ಟಿಕೆಟ್ ಕೊಡೋದು ಅಂತಾದರೆ, ಬಹಳಷ್ಟು ಜನರಿಗೆ ಟಿಕೆಟ್ ಕೊಡಬೇಕಾಗುತ್ತದೆ. ಅದು ಆಗದ ಮಾತು. ಹಾಗಂತ, ಹೋರಾಟಕ್ಕೆ ಬೆಲೆ ಇಲ್ಲ ಎಂದಲ್ಲ. ಟಿಕೆಟ್ ಕೊಡಬೇಕಾದರೆ ಅವರು ಗೆಲವು ಸಾಧ್ಯತೆ, ಸಂಘಟನೆಗೆ ಎಷ್ಟು ಕೆಲಸ ಮಾಡಿದ್ದಾರೆ ಎಂಬುದನ್ನು ನೋಡಬೇಕಾಗುತ್ತದೆ” ಎಂದು ಹೇಳುವ ಮೂಲಕ, ಪ್ರಾಣ ತ್ಯಾಗಕ್ಕೆ ಟಿಕೆಟ್ ಸಿಗುವುದಿಲ್ಲ ಎಂಬರ್ಥದಲ್ಲಿ ಈಶ್ವರಪ್ಪ ಅವರು ಮಾತನಾಡಿದ್ದಾರೆ.
ಯಾರಿಗೆ ಟಿಕೆಟ್ ಕೊಡಬೇಕು, ಯಾರಿಗೆ ಕೊಡಬಾರದು ಎಂಬುದನ್ನು ಚುನಾವಣಾ ಸಮಿತಿ ನಿರ್ಧಾರ ಮಾಡುತ್ತದೆ. ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ಪಾರದರ್ಶಕವಾಗಿ ನಡೆಯುತ್ತೆ ಎಂದು ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡರು.
Karnataka election 2023: ಮಾಡಾಳ್ ಮನೆಯಲ್ಲಿ ದುಡ್ಡು, ಇದು ಬಿಜೆಪಿ ಭ್ರಷ್ಟಾಚಾರ ಅಲ್ಲವೇ?
ಮಾಡಾಳ್ ವಿರುಪಾಕ್ಷಪ್ಪ ಮನೆಯಲ್ಲಿ ದುಡ್ಡು ಸಿಕ್ಕಿದೆ, ಇದು ಬಿಜೆಪಿಯ ಭ್ರಷ್ಟಾಚಾರ ಅಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ ಅವರು, ಮಾಡಾಳ್ ವಿರೂಪಾಕ್ಷ ಅವರ ಮಗ ಸರ್ಕಾರಿ ಅಧಿಕಾರಿ. ಸರ್ಕಾರಿ ಅಧಿಕಾರಿ ಅವ್ಯವಹಾರ ಮಾಡಿದ್ದಾರೆ. ಅವರನ್ನು ಲೋಕಾಯಕ್ತನವರು ಅರೆಸ್ಟ್ ಮಾಡಿದ್ದಾರೆ. ಕೇಸ್ ಹಾಕಲಾಗಿದ್ದು, ಆ ಬಗ್ಗೆ ತನಿಖೆ ಕೂಡಾ ನಡೆಯುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: Karnataka Elections 2023 : ಕೆ.ಎಸ್. ಈಶ್ವರಪ್ಪಗೆ ಕರೆ ಮಾಡಿ ಕುಶಲೋಪರಿ ವಿಚಾರಿಸಿದ ನರೇಂದ್ರ ಮೋದಿ, ಕುಟುಂಬ ಫುಲ್ ಖುಷ್
ಸಿದ್ದರಾಮಯ್ಯ ಯಾವಾಗ ಜೈಲಿಗೆ ಹೋಗುತ್ತಾರೆ?
ಸಿದ್ದರಾಮಯ್ಯ ಯಾವಾಗ ಜೈಲಿಗೆ ಹೋಗುತ್ತಾರೆಂಬ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ಕಬ್ಬಿಣ ಕಾಯಿಸ್ತಾರೆ. ಚೆನ್ನಾಗಿ ಕಾಯಿಸಿದ ಮೇಲೆ ಬರೆ ಹಾಕೋದು. ನೋಡ್ತಾ ಇರಿ, ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಇಬ್ಬರಿಗೂ ಬರೆ ಹಾಕುತ್ತೇವೆ ಎಂದು ಹೇಳಿದರು.