Site icon Vistara News

ಎಚ್ಡಿಕೆಗೆ ನಾಯಕತ್ವ ನೀಡುವ ದಾರಿದ್ರ್ಯ ಬಿಜೆಪಿಗಿಲ್ಲ; ಸುನೀಲ್ ಕುಮಾರ್! ಸೋತರೂ ಬುದ್ಧಿ ಬಂದಿಲ್ಲ ಎಂದ ಶರವಣ

TA Sharavana and Sunil kumar

ಬೆಂಗಳೂರು, ಕರ್ನಾಟಕ: ಮುಂಬರುವ ಲೋಕಸಭೆ ಚುನಾವಣೆಗೆ (Lok Sabha Election 2024) ಜಾತ್ಯತೀತ ಜನತಾ ದಳ(JDS) ಜತೆಗೆ ಭಾರತೀಯ ಜನತಾ ಪಾರ್ಟಿಯು(BJP) ಮೈತ್ರಿ ಮಾಡಿಕೊಳ್ಳಲಿದೆ ಎಂಬ ಸುದ್ದಿಗಳಿವೆ. ಉಭಯ ಪಕ್ಷಗಳ (BJP and JDS) ನಾಯಕರು ಈ ಬಗ್ಗೆ ಆಗಾಗ ಸುಳಿವು ನೀಡುತ್ತಿದ್ದಾರೆ ಕೂಡ. ಆದರೆ, ಬಿಜೆಪಿಯ ನಾಯಕ, ಕಾರ್ಕಳದ ಶಾಸಕ ವಿ ಸುನೀಲ್ ಕುಮಾರ್ (v sunil kumar) ಅವರು, ”ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ (Former H D Kumarswamy) ಅವರಿಗೆ ನಾಯಕತ್ವ ನೀಡುವ ದಾರಿದ್ರ ಬಿಜೆಪಿಗಿಲ್ಲ” ಎಂದು ಹೇಳುವ ಮೂಲಕ ರಾಜಕೀಯ ಪಡಸಾಲೆಯಲ್ಲಿ ಗುಸು ಗುಸು ಚರ್ಚೆಗೆ ಕಾರಣವಾಗಿದ್ದಾರೆ. ಸುನೀಲ್ ಕುಮಾರ್ ಅವರ ಈ ಹೇಳಿಕೆಯು ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳಲ್ಲಿ ಸಂಚಲನ ಸೃಷ್ಟಿಸಿದೆ. ಈ ಮಧ್ಯೆ, ಸುನೀಲ್ ಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಜೆಡಿಎಸ್ ನಾಯಕ ಟಿ ಎ ಶರವಣ(TA Sharavana), ”ಚುನಾವಣೆಯಲ್ಲಿ ಸೋತು ಸುಣ್ಣವಾದರೂ ಬಿಜೆಪಿ ನಾಯಕರಿಗೂ ಇನ್ನೂ ಬುದ್ಧಿ ಬಂದಿಲ್ಲ” ಎಂದು ಹೇಳಿದ್ದಾರೆ.

ಸುನೀಲ್ ಕುಮಾರ್ ಹೇಳಿದ್ದೇನು?

ಜೆಡಿಎಸ್‌ ಜತೆ ಮೈತ್ರಿಯ ಅನಿವಾರ್ಯತೆ ಬಿಜೆಪಿಗಿಲ್ಲ, ಲೋಕಸಭೆಯಲ್ಲಿ ಕಳೆದ ಸಲದಷ್ಟೇ ಸೀಟು ಗೆಲ್ಲುತ್ತೇವೆ. ಹೆಚ್‌ಡಿಕೆಗೆ ನಾಯಕತ್ವ ನೀಡುವ ದಾರಿದ್ರ್ಯ ಬಿಜೆಪಿಗಿಲ್ಲ ಎಂದು ಬಿಜೆಪಿಯ ನಾಯಕ ಸುನೀಲ್ ಕುಮಾರ್ ಅವರು ಟ್ವೀಟ್ ಮಾಡಿದ್ದರು. ಜೆಡಿಎಸ್‌ ಜತೆ ಬಿಜೆಪಿ ಮೈತ್ರಿ ಮಾತು ಚಾಲ್ತಿಯಲ್ಲಿರುವಾಗಲೇ ಟ್ವೀಟ್ ಸಂಚಲನ ಸೃಷ್ಟಿಸಿದೆ. ಆದರೆ, ಇದು ಸುನಿಲ್ ಕುಮಾರ್ ವೈಯಕ್ತಿಕ ಅಭಿಪ್ರಾಯವೇ? ಉನ್ನತ ನಾಯಕರ ಮಾತೇ ಎಂಬುದು ಸ್ಪಷ್ಟವಾಗಿಲ್ಲ.

ಜೆಡಿಎಸ್ ನಾಯಕ ಟಿ ಎ ಸರವಣ್ ಹೇಳಿದ್ದೇನು?

ಬಿಜೆಪಿ ಹಿರಿಯ ಶಾಸಕರು, ಮಾಜಿ ಮಂತ್ರಿಗಳಾದ ಸುನಿಲ್ ಕುಮಾರ್ ಅವರು ಜೆಡಿಎಸ್ ಬಗ್ಗೆ ತಿರಸ್ಕಾರ ಭಾವ ಬರುವ ರೀತಿ ಪತ್ರಿಕಾ ಸಂದರ್ಶನ ಮತ್ತು ಟ್ವಿಟರನಲ್ಲಿ ಹೇಳಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಸುನೀಲ್ ಕುಮಾರ್ ಅವರ ಈ ಹೇಳಿಕೆ ಹಾಸ್ಯಾಸ್ಪದ. ಕುಮಾರಸ್ವಾಮಿ ಅವರಿಗೆ ನಾಯಕತ್ವ ನೀಡುವಷ್ಟು ದಾರಿದ್ರ್ಯ ಬಂದಿಲ್ಲ ಎಂದು ಅವರು ಹೇಳಿದ್ದಾರೆ. ಕುಮಾರಸ್ವಾಮಿ ಅವರು ಈಗಾಗಲೇ ಜನ ಮೆಚ್ಚಿದ ನಾಯಕರಾಗಿ ಮನ್ನಣೆ ಪಡೆದು, ಗೌರವಕ್ಕೆ ಪಾತ್ರ ರಾಗಿದ್ದಾರೆ. ಅವರೇನೂ ನನಗೆ ನಾಯಕತ್ವ ಕೊಡಿ ಎಂದು ಬಿಜೆಪಿ ಬಾಗಿಲಿಗೆ ನಿಂತಿಲ್ಲ. ಹೀಗೆ ಬೇಕಾಬಿಟ್ಟಿ ನಾಲಿಗೆ ಹರಿಬಿಟ್ಟು ಇನ್ನಷ್ಟು ಧಕ್ಕೆ ಮಾಡಿಕೊಳ್ಳುವುದು ಬಿಟ್ಟು, ಸುನಿಲ್ ಕುಮಾರ್ ಗೌರವದಿಂದ ನಡೆದುಕೊಳ್ಳಲಿ ಎಂದು ಟಿ ಎ ಸರವಣ್ ಅವರು ಟ್ವೀಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: HD Kumaraswamy : ಜೆಡಿಎಸ್-ಬಿಜೆಪಿ ನಡೆ ಟ್ರ್ಯಾಕ್ ಆಗುತ್ತಿದೆ ಎಂದ ಡಿಕೆಶಿ; ಸಿಎಂ ಆಗೋ ಡ್ರಾಮಾ ಎಂದ ಕೇಸರಿಪಡೆ!

ಕುಮಾರಸ್ವಾಮಿ ನಾಯಕತ್ವದ ಬಗ್ಗೆ ಮಾತಾಡಲು ಇವರು ಯಾರು? ಚುನಾವಣೆಯಲ್ಲಿ ಕಾಂಗ್ರೆಸ್ಗೆ ಶರಣಾದ ಬಿಜೆಪಿಯಲ್ಲಿ ನಾಯಕರು ಯಾರಿದ್ದಾರೆ?ಇವರ ಯೋಗ್ಯತೆಗೆ ಸಮರ್ಥ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಬಜೆಟ್ ಅಧಿವೇಶನ, ರಾಜ್ಯಪಾಲರ ಭಾಷಣ ಪ್ರತಿಪಕ್ಷ ನಾಯಕರೇ ಇಲ್ಲದೆ ನಡೆದು, ಸಂಸದೀಯ ಇತಿಹಾಸದಲ್ಲೇ ಕೆಟ್ಟ ಪರಂಪರೆಗೆ ನಾಂದಿ ಹಾಡಿದ ಪಕ್ಷ ಬಿಜೆಪಿ.ಇಂಥ ಪಕ್ಷದ ನಾಯಕರಿಗೆ ನಮ್ಮ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ ಎಂದು ಶರವಣ ಪ್ರಶ್ನಿಸಿದ್ದಾರೆ.

ಇನ್ನು ಜೆಡಿಎಸ್ ಅನಿವಾರ್ಯ ಅಲ್ಲ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ. ಒಂದು ಮಾತಂತೂ ಸತ್ಯ. ಯಾರಿಗೂ ಯಾರು ಅನಿವಾರ್ಯ ಅಲ್ಲ. ತಮ್ಮ ಇತಿಮಿತಿ ಅರಿತು ನಡೆದರೆ, ವರ್ತಿಸಿದರೆ ಬಿಜೆಪಿಗೆ ಒಳಿತು. ಸೋತು ನೆಲಕಚ್ಚಿದರೂ ಸುನಿಲ್ ಕುಮಾರ್ ರಂತ ಬಿಜೆಪಿ ನಾಯಕರಿಗೆ ಇನ್ನೂ ಬುದ್ಧಿ ಬಂದಿಲ್ಲ ಎನ್ನುವುದೇ ವಿಷಾದಕರ ಎಂದು ಶರವಣ ಹೇಳಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version