Site icon Vistara News

Praveen Nettaru murder | ಮಸೂದ್‌ ಹತ್ಯೆ ಪ್ರತೀಕಾರಕ್ಕೆ ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ: ಎನ್‌ಐಎ ತನಿಖೆ

ಪ್ರವೀಣ್ ನೆಟ್ಟಾರು‌

ಮಂಗಳೂರು: ಮಸೂದ್ ಹತ್ಯೆ ಪ್ರತೀಕಾರಕ್ಕಾಗಿಯೇ ಬಿಜೆಪಿ ಯುವ ಮೋರ್ಚಾದ ಮುಖಂಡ ಪ್ರವೀಣ್ ‌ನೆಟ್ಟಾರು ಹತ್ಯೆ ಮಾಡಲಾಗಿದೆ ಎಂದು ಎನ್‌ಐಎ ತನಿಖೆಯಲ್ಲಿ ಗೊತ್ತಾಗಿದೆ.

ಎನ್ಐಎ ತನಿಖೆಯಲ್ಲಿ ನಿಷೇಧಿತ ಪಿಎಫ್ಐ ಸಂಚು ಬಹಿರಂಗವಾಗಿದೆ. ಮಸೂದ್ ಹತ್ಯೆ ಪ್ರತೀಕಾರವಾಗಿ ಕೊಲೆ ಮಾಡಿ ಭಯ ಹುಟ್ಟಿಸುವ ಉದ್ದೇಶ ಹಂತಕರಲ್ಲಿತ್ತು. ಶನಿವಾರ ಬಂಧಿತನಾದ ಶಹೀದ್ ಬೆಳ್ಳಾರೆ ಮನೆಯಲ್ಲಿ ಹತ್ಯೆಗೆ ಸಂಚು ರೂಪಿಸಲಾಗಿತ್ತು.

ಈತ ಎಸ್ ಡಿಪಿಐ ಮುಖಂಡ ಶಾಫಿ ಮತ್ತು ಇಕ್ಬಾಲ್ ಬೆಳ್ಳಾರೆಯ ಸಂಬಂಧಿಯೂ ಆಗಿದ್ದಾನೆ. ಮಸೂದ್ ಅಂತ್ಯ ಕ್ರಿಯೆಯ ಬೆನ್ನಲ್ಲೇ ಶಹೀದ್ ಮನೆಯಲ್ಲಿ ಪ್ರತೀಕಾರ ನಡೆಸಲು ಸಂಚು ರೂಪಿಸಲಾಗಿತ್ತು.

ಈವರೆಗೆ ಪ್ರವೀಣ್ ಹತ್ಯೆ ಕೇಸ್ ನಲ್ಲಿ 14 ಆರೋಪಿಗಳನ್ನು ಎನ್‌ಐಎ ಬಂಧಿಸಿದೆ. ಜುಲೈ 26ರಂದು ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ‌ಹತ್ಯೆ ನಡೆದಿತ್ತು.

ಮಸೂದ್‌ ಹತ್ಯೆ: ಬೆಳ್ಳಾರೆಯಲ್ಲಿ ಕಳೆದ ಜುಲೈ 19ರಂದು ಸ್ಥಳೀಯ ನಿವಾಸಿ ಮಸೂದ್ ‌ಹತ್ಯೆಯಾಗಿತ್ತು. ಈ ಕೊಲೆಗೆ ಪ್ರತೀಕಾರವಾಗಿ, ಹಾಗೂ ಭಯ ಹುಟ್ಟಿಸಲು ಪ್ರವೀಣ್‌ ನೆಟ್ಟಾರು ಹತ್ಯೆ ಮಾಡಲಾಯಿತು ಎಂದು ಇದೀಗ ಎನ್‌ಐಎ ತನಿಖೆ ತಿಳಿಸಿದೆ.

Exit mobile version