Site icon Vistara News

Tumkur Rural Election Results : ತುಮಕೂರು ಗ್ರಾಮಾಂತರದಲ್ಲಿ ಬಿಜೆಪಿಯ ಬಿ. ಸುರೇಶ್ ಗೌಡ ಗೆಲುವು

tumkur rural election results b suresh gowda winner

#image_title

ತುಮಕೂರು: ವಿಧಾನಸಭಾ ಚುನಾವಣೆ (Tumkur Rural Election Results) ಮತ ಎಣಿಕೆ ಕಾರ್ಯ ಶನಿವಾರ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಬಿ. ಸುರೇಶ್ ಗೌಡ ಗೆಲುವು ಪಡೆದಿದ್ದಾರೆ. ಇವರು ಜೆಡಿಎಸ್‌ ಅಭ್ಯರ್ಥಿ ಗೌರಿಶಂಕರ್ ವಿರುದ್ಧ 4,594 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ಈ ಬಾರಿ ಬಿಜೆಪಿ ಅಭ್ಯರ್ಥಿ ಬಿ. ಸುರೇಶ್ ಗೌಡ 89,191 ಮತ, ಜೆಡಿಎಸ್‌ ಅಭ್ಯರ್ಥಿ ಗೌರಿಶಂಕರ್‌ 84,597, ಕಾಂಗ್ರೆಸ್‌ ಅಭ್ಯರ್ಥಿ ಜಿ.ಎಚ್‌.ಷಣ್ಮುಗಪ್ಪ 4066 ಮತಗಳನ್ನು ಪಡೆದಿದ್ದಾರೆ.

2018ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಡಿ.ಸಿ.ಗೌರಿಶಂಕರ್ 82,740 ಮತಗಳನ್ನು ಪಡೆದಿದ್ದರು. ಬಿಜೆಪಿ ಅಭ್ಯರ್ಥಿ ಸುರೇಶ್ ಗೌಡ 77, 100 ಮತಗಳನ್ನು ಪಡೆದಿದ್ದರು.

ಇದನ್ನೂ ಓದಿ | Shivamogga Election Results: ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ ಚನ್ನಬಸಪ್ಪ

ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಡಿ.ಸಿ.ಗೌರಿಶಂಕರ್ ಅವರು ಬಿಜೆಪಿ ಅಭ್ಯರ್ಥಿ ಸುರೇಶ್ ಗೌಡ ವಿರುದ್ಧ 5,640 ಮತಗಳ ಅಂತರದಿಂದ ಗೆಲುವಿನ ನಗಾರಿ ಬಾರಿಸಿದ್ದರು.

Exit mobile version