ಬೆಂಗಳೂರು: ಡೇಟಿಂಗ್ ಆ್ಯಪ್‌ನ ಹುಚ್ಚಿಗೆ ಬಿದ್ದ ಬಿಲ್ಡರ್‌ನನ್ನು ಮಹಿಳೆಯೊಬ್ಬಳು ಬ್ಲ್ಯಾಕ್‌ಮೇಲ್ (Blackmail Case) ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಶ್ರೀನಿವಾಸ್ ರಾವ್ ಎಂಬ ಬಿಲ್ಡರ್‌ನನ್ನು ಬೊಮ್ಮಿಶೆಟ್ಟಿ ತ್ರಿಪುರಾ ಎಂಬಾಕೆ ಬೆದರಿಸಿ ಹಂತ ಹಂತವಾಗಿ ಹಣ ಸುಲಿಗೆ ಮಾಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
2019ರಲ್ಲಿ ಒಕೆಸಿ ಡೇಟಿಂಗ್ ಆ್ಯಪ್‌ನಲ್ಲಿ ಬೊಮ್ಮಿಶೆಟ್ಟಿ ತ್ರಿಪುರಾ ಎಂಬಾಕೆ ಪರಿಚಯವಾಗಿದ್ದಳು. ನಂತರ ಇಬ್ಬರೂ ವಾಟ್ಸ್‌ಆ್ಯಪ್ ನಂಬರ್ ಎಕ್ಸ್‌ಚೇಂಜ್ ಮಾಡಿಕೊಂಡಿದ್ದರು. ಪರಸ್ಪರ ಮಾತುಕತೆ, ಚಾಟಿಂಗ್ ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ಶಿರಡಿ, ತಿರುಪತಿ ಸೇರಿದಂತೆ ಎಂದು ಸುತ್ತಾಡಿದ್ದರು. ಆ ವೇಳೆ ಇಬ್ಬರ ನಡುವೆ ದೈಹಿಕ ಸಂಪರ್ಕ ಬೆಳೆದಿದೆ. ಇದನ್ನೇ ತನ್ನ ಬಂಡವಾಳ ಮಾಡಿಕೊಂಡ ವಂಚಕಿ ತನ್ನ ಅಸಲಿ ಆಟ ಶುರುಮಾಡಿದ್ದಾಳೆ. ತಮ್ಮಿಬ್ಬರ ನಡುವೆ ನಡೆದ ಖಾಸಗಿ ಸಂಗತಿಗಳ ವಿಡಿಯೊ, ಫೋಟೊ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಶುರು ಮಾಡಿದ್ದಾಳೆ. ನಂತರ ನಿಮ್ಮ ಮನೆಯವರಿಗೆ ಈ ಫೋಟೊವನ್ನು ತೋರಿಸುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾಳೆ. ಫೇಸ್‌ಬುಕ್‌ನಲ್ಲಿ ಹಾಕುತ್ತೇನೆ ಎಂದು ಬೆದರಿಕೆ ಹಾಕಿ ಹಂತ ಹಂತವಾಗಿ ಏಳು ಲಕ್ಷ ಸುಲಿಗೆ ಮಾಡಿದ್ದಾಳೆ.
ಇದನ್ನೂ ಓದಿ | Black Mail Case | ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ವಿಚಾರಣೆಗೆ ಹಾಜರು
ಮಹಿಳೆಗೆ ಈ ಹಿಂದೆಯೇ ಡಿವೋರ್ಸ್ ಆಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆ ಮಕ್ಕಳ ವಿಧ್ಯಾಭ್ಯಾಸಕ್ಕೂ ಶ್ರೀನಿವಾಸ್ ರಾವ್‌ನಿಂದ ಹಣ ಪೀಕಿದ್ದಾಳೆ. ಮರ್ಯಾದೆಗೆ ಅಂಜಿ ಬಿಲ್ಡರ್ ಶ್ರೀನಿವಾಸ್ ಆಕೆ ಕೇಳಿದ ಹಾಗೆ ಹಣ ನೀಡುತ್ತಲೇ ಬಂದಿದ್ದ. ಅಷ್ಟೇ ಅಲ್ಲದೆ, ತನಗೊಂದು ಹೊಸ ಫ್ಲಾಟ್ ಹಾಗೂ ಮತ್ತಷ್ಟು ಹಣ ಕೊಡಬೇಕೆಂದು ಮತ್ತೆ ಬೇಡಿಕೆ ಇಟ್ಟಾಗ ಬೇಸತ್ತ ಬಿಲ್ಡರ್ ಜಯನಗರ ಪೊಲೀಸರಿಗೆ ದೂರು ನೀಡಿದ್ದಾನೆ. ಈಗ ತಲೆಮರೆಸಿಕೊಂಡಿರುವ ವಂಚಕಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ | Blackmail Case | ಬೆಂಗಳೂರಲ್ಲಿ ಹಗಲಲ್ಲೇ ಮಾರಕಾಸ್ತ್ರ ಹಿಡಿದು ಸುಲಿಗೆಗಿಳಿದ ದುಷ್ಕರ್ಮಿ; ಆರೋಪಿ ಅರೆಸ್ಟ್!