Site icon Vistara News

Blast Case : ಪೊಟ್ಟಣದಲ್ಲಿ ಸಿಡಿಮದ್ದು; ಆಹಾರವೆಂದು ತಿನ್ನಲು ಹೋದ ನಾಯಿ ಸಾವು

Blast Case : ತುಮಕೂರಿನ ಸಿರಾದ ಗ್ರಾಮವೊಂದರಲ್ಲಿ ಮೈದಾನದಲ್ಲಿ ಬಿದ್ದಿದ್ದ ಸ್ಫೋಟಕಕ್ಕೆ ಬಾಯಿ ಹಾಕಿ ನಾಯಿ ಮೃತಪಟ್ಟಿದೆ. ಸ್ಪೋಟಕ ಇಟ್ಟವರು ಯಾರು ಎಂದು ಪತ್ತೆ ಹಚ್ಚಲಾಗುತ್ತಿದೆ.

ಶಿರಾ: ಮೈದಾನದಲ್ಲಿ ಸಿಡಿಮದ್ದು ಸ್ಫೋಟಗೊಂಡು (Explosives blast) ನಾಯಿಯೊಂದು ಸಾವನಪ್ಪಿರುವ (Dog dead) ಘಟನೆ ಶಿರಾ ತಾಲೂಕಿನಲ್ಲಿ (Tumkur News) ಸಂಭವಿಸಿದೆ. ತಾಲೂಕಿನ ಬುಕ್ಕಾ ಪಟ್ಟಣ ಹೋಬಳಿ ಮಾದೇನಹಳ್ಳಿಯಲ್ಲಿ ಗುರುವಾರ ಸಂಜೆ ನಡೆದ ಘಟನೆಯಿಂದ ಇಡೀ ಗ್ರಾಮವೇ (Blast Case) ಬೆಚ್ಚಿಬಿದ್ದಿದೆ.

ಶಾಲೆ ವಿದ್ಯಾರ್ಥಿಗಳು ಆಟವಾಡುವ ಸಮಯದಲ್ಲಿ ಮೈದಾನದಲ್ಲಿ (School ground) ಒಂದು ಪೊಟ್ಟಣ ಸಿಕ್ಕಿತ್ತು. ಅದನ್ನು ಒಬ್ಬ ಬಾಲಕ ತೆಗೆದುಕೊಂಡು ಹೋಗಿ ತಂದೆಯ ಬಳಿ ತೋರಿಸಿದ್ದ. ಇದು ಯಾರೋ ವಾಮಾಚಾರದ ಮಾಡಿ ಎಸೆದಿರುವ ಪೊಟ್ಟಣ ಎಂದು ತಿಳಿದ ತಂದೆ ಅದನ್ನು ಮೈದಾನದಲ್ಲೇ ಬಿಟ್ಟಿದ್ದರು.

ಈ ನಡುವೆ ಒಂದು ಬೀದಿ ನಾಯಿ ಅದನ್ನು ಕಚ್ಚಿದೆ. ಕಚ್ಚುತ್ತಿದ್ದಂತೆಯೇ ಅದು ಸ್ಫೋಟಗೊಂಡು ನಾಯಿಯ ಬಾಯಿಯೆಲ್ಲಾ ಸೀಳಿ ಹೋಗಿದೆ. ನಾಯಿ ಸ್ಥಳದಲ್ಲೇ ಮೃತಪಟ್ಟಿದೆ.

ಯಾರೋ ದುಷ್ಕರ್ಮಿಗಳು ಪೊಟ್ಟಣದಲ್ಲಿ ಸಿಡಿಮದ್ದು ತುಂಬಿ ಇಟ್ಟಿದ್ದು ಸ್ಪಷ್ಟವಾಗಿದೆ. ಆದರೆ, ಅವರ ಉದ್ದೇಶ ಏನಾಗಿತ್ತು? ಏನಾದರೂ ದುಷ್ಕರ್ಮಿ ಕೃತ್ಯ ನಡೆಸಲು ಈ ರೀತಿ ಮಾಡಿದರೇ? ಅವರ ಟಾರ್ಗೆಟ್‌ ಯಾರಾಗಿದ್ದರು ಎನ್ನುವುದು ಸ್ಪಷ್ಟವಿಲ್ಲ.

ಪೊಟ್ಟಣವನ್ನು ಮೊದಲು ನೋಡಿದ ಬಾಲಕ ಮತ್ತು ಮೃತಪಟ್ಟ ನಾಯಿ

ಶಿರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಪೋಲಿಸರು ಬೇಟೆ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಪ್ರದೇಶದಲ್ಲಿ ಇನ್ನಷ್ಟು ಕಡೆಗಳಲ್ಲಿ ಈ ರೀತಿ ಸ್ಫೋಟಕ ಇಟ್ಟಿರುವ ಸಾಧ್ಯತೆ ಇದ್ದು, ಅದರ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ : Murder Case : ಮನೆಯಲ್ಲಿ ಒಬ್ಬಂಟಿಯಾಗಿದ್ದ ಮಹಿಳೆಯ ಕತ್ತು ಹಿಸುಕಿ ಹತ್ಯೆ

ಕಾಡಾನೆ ದಾಳಿಗೆ ವ್ಯಕ್ತಿ ಬಲಿ: ಇನ್ನೂ ಸ್ಥಳದಲ್ಲೇ ಇದೆ ಮೃತದೇಹ

ಹಾಸನ: ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಮತ್ತಾವರದಲ್ಲಿ ಆನೆ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ವಸಂತ (45) ಬಲಿಯಾಗಿರುವ ವ್ಯಕ್ತಿ. ಬೆಳಗ್ಗೆ ಆನೆ ದಾಳಿ ಮಾಡಿ ವಸಂತ ಅವರನ್ನು ಕೊಂದು ಹಾಕಿದೆ.

ಈ ನಡುವೆ, ಕಾಡಾನೆ ಹಾವಳಿ ನಿಯಂತ್ರಿಸದ ಸರ್ಕಾರದ ವಿರುದ್ದ ಜನರ ಆಕ್ರೋಶ ಕಟ್ಟೆಯೊಡೆದಿದ್ದು, ಮೃತದೇಹ ಶಿಫ್ಟ್ ಮಾಡಲು ಅವಕಾಶ ನೀಡದೆ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ಬೇಲೂರು ಮತ್ತು ಕೆಎಸ್ ಆರ್ ಪಿ ಪೊಲೀಸರ ನಿಯೋಜನೆ ಮಾಡಲಾಗಿದೆ.

ಬೇಲೂರು ಶಾಸಕ ಹೆಚ್.ಕೆ. ಸುರೇಶ್ ಸ್ಥಳಕ್ಕೆ ಆಗಮಿಸಿದ್ದಾರೆ. ಎಸ್ಪಿ ಮೊಹಮ್ಮದ್ ಸುಜೀತಾ ಅವರು ಪ್ರತಿಭಟನಾಕಾರರ ಮನವೊಲಿಸುತ್ತಿದ್ದಾರೆ.

Exit mobile version