ಮಂಡ್ಯ: ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಆಗಾಗ ಸುದ್ದಿಯಾಗುತ್ತಿದೆ. ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟಿಗೆ ಹಾನಿಯಾಗುತ್ತದೆ ಎಂಬ ಆರೋಪವೂ ಕೇಳಿಬಂದಿತ್ತು. ಹಲವು ಕಡೆ ಮನೆಗಳಿಗೆ ಹಾನಿಯಾದ ಉದಾಹರಣೆಗಳೂ ಇವೆ.
ಈ ನಡುವೆ, ಭಾನುವಾರ ಇಲ್ಲಿ ನಡೆದ ಕಲ್ಲು ಗಣಿಗಾರಿಕೆ ನಡೆಸುವ ವೇಳೆ ವೇಳೆ ಸ್ಫೋಟಕ ಸಿಡಿದು ಮೂವರಿಗೆ ಗಾಯವಾಗಿದೆ. ಅವರ ಪೈಕಿ ಒಬ್ಬರ ಪರಿಸ್ಥಿತಿ ಗಂಭೀರವಾಗಿದೆ. ನಾಗಮಂಗಲ ತಾಲೂಕಿನ ಸಂಕನಹಳ್ಳಿ ಗ್ರಾಮದಲ್ಲಿ ಕಲ್ಲು ಒಡೆಯಲೆಂದು ಇಟ್ಟಿದ್ದ ಸ್ಫೋಟಕ ಸಿಡಿದಿದೆ. ತಮಿಳು ನಾಡು ಮೂಲದ ಕಾರ್ಮಿಕರು ಗಾಯಗೊಂಡವರು.
ಯಾವತ್ತಿನ ದಿನಚರಿಯಂತೆ ಕಲ್ಲು ಸಿಡಿಸಲು ಎರಡು ಜಿಲೆಟಿನ್ ಕಡ್ಡಿಗಳನ್ನು ಇರಿಸಲಾಗಿತ್ತು. ಅದರಲ್ಲಿ ಒಂದು ಮಾತ್ರ ಸ್ಪೋಟಗೊಂಡಿತ್ತು. ಎರಡನೆಯದು ಏನಾಗಿದೆ ಎಂದು ನೋಡಲು ಹೋದಾಗ ಅದೂ ಸಿಡಿದಿದೆ. ದೊಡ್ಡ ಮಟ್ಟದ ಸ್ಪೋಟದಿಂದ ಮೂವರಿಗೆ ತೀವ್ರ ಗಾಯಗಳಾದವು. ಜಿಲೆಟಿನ್ ಸ್ಫೋಟದ ಅಪಾಯಕ್ಕೆ ಸಿಲುಕಿದ ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಐತಿಹಾಸಿಕ ಪಾರ್ವತಿ ದೇಗುಲದಲ್ಲಿ ಕಳಚಿ ಬಿದ್ದ ಗೋಡೆ ಕಲ್ಲು; ಗಣಿಗಾರಿಕೆಯಿಂದ ಧಕ್ಕೆ ಆತಂಕ